Optical Illusion: ಈ ಚಿತ್ರದಲ್ಲಿ ಅಡಗಿ ಕುಳಿತಿರುವ ಮೊಲವನ್ನು ಕಂಡುಹಿಡಿಯಬಲ್ಲಿರಾ

ಸೋಶಿಯಲ್ ಮೀಡಿಯಾದಲ್ಲಿ ಆಪ್ಟಿಕಲ್‌ ಇಲ್ಯೂಷನ್‌ ಹಾಗೂ ಬ್ರೈನ್ ಟೀಸರ್ ನಂತಹ ಟ್ರಿಕ್ಕಿ ಒಗಟಿನ ಚಿತ್ರಗಳನ್ನು ವೈರಲ್ ಆಗುವುದನ್ನು ನೀವು ನೋಡಿರುತ್ತೀರಿ. ಇದೀಗ ಅಂತಹದ್ದೇ ಇಲ್ಯೂಷನ್ ಚಿತ್ರ ವೈರಲ್ ಆಗಿದೆ. ಇದರಲ್ಲಿ ಅಡಗಿ ಕುಳಿತಿರುವ ಮೊಲವನ್ನು ಕಂಡುಹಿಡಿಯಬೇಕು. ಈ ಸವಾಲನ್ನು ಸ್ವೀಕರಿಸಲು ನೀವು ರೆಡಿ ಇದ್ದೀರಾ.

Optical Illusion: ಈ ಚಿತ್ರದಲ್ಲಿ ಅಡಗಿ ಕುಳಿತಿರುವ ಮೊಲವನ್ನು ಕಂಡುಹಿಡಿಯಬಲ್ಲಿರಾ
ಆಪ್ಟಿಕಲ್‌ ಇಲ್ಯೂಷನ್‌
Image Credit source: Social Media

Updated on: Jan 01, 2026 | 12:31 PM

ಮೋಜಿನ ಆಟಗಳ ಎಲ್ಲರಿಗೂ ಇಷ್ಟನೇ. ಆದರೆ ಈ ಆಪ್ಟಿಕಲ್‌ ಇಲ್ಯೂಷನ್ (optical illusion) ಸಂಬಂಧಿತ ಚಿತ್ರಗಳನ್ನು ಬಿಡಿಸುವುದು ಕಷ್ಟಕರ. ಹೀಗಾಗಿ ಇಂತಹ ಚಿತ್ರಗಳತ್ತ ಕಣ್ಣಾಯಿಸಿದರೂ ಮೊದಲ ಪ್ರಯತ್ನದಲ್ಲೇ ವಿಫಲರಾಗುವವರೇ ಹೆಚ್ಚು. ಅದಲ್ಲದೇ, ಒಗಟಿನ ಚಿತ್ರಗಳನ್ನು ಬಿಡಿಸುವಾಗ ಹತ್ತು ಜನರಲ್ಲಿ ಒಬ್ಬರಿಗೆ ಮಾತ್ರ ಕ್ಷಣಾರ್ಧದಲ್ಲಿ ಉತ್ತರ ಹೇಳಲು ಸಾಧ್ಯ. ಇದೀಗ ವೈರಲ್ ಆಗಿರುವ ಚಿತ್ರದಲ್ಲಿ ಜಾಣತನದಿಂದ ಮರೆ ಮಾಡಲಾಗಿರುವ ಮೊಲವನ್ನು 15 ಸೆಕೆಂಡುಗಳಲ್ಲಿ ಕಂಡುಹಿಡಿಯಬೇಕು. ಈ ಒಗಟು ಬಿಡಿಸಲು ನೀವು ರೆಡಿ ಇದ್ದರೆ, ಈ ಚಿತ್ರದತ್ತ ಕಣ್ಣಾಯಿಸಿ.

ಈ ಚಿತ್ರದಲ್ಲಿ ಏನು ಕಾಣಿಸುತ್ತದೆ?

ಇಲ್ಯೂಷನ್ ಚಿತ್ರವು  ನಿಮ್ಮ ಮೆದುಳಿಗೆ ವ್ಯಾಯಾಮ ನೀಡುವುದಲ್ಲದೇ, ನಿಮ್ಮ ದೃಷ್ಟಿ ಸಾಮರ್ಥ್ಯ, ಯೋಚನಾ ಸಾಮರ್ಥ್ಯ ಎಷ್ಟಿದೆ ಪರೀಕ್ಷಿಸುತ್ತದೆ. ಇದೇ ತರಹದ ಚಿತ್ರ ಇದಾಗಿದ್ದು, ಇಲ್ಲಿ ಯುವಕ ಯುವತಿಯರು ಹಾಗೂ ಪುಟಾಣಿಗಳು ಸ್ವಚ್ಛತಾ ಕೆಲಸದಲ್ಲಿ ತೊಡಗಿ ಕೊಂಡಿರುವುದನ್ನು ಕಾಣಬಹುದು. ಕೆಲವರು ಕಸವನ್ನು ಗೋಣಿ ಚೀಲಕ್ಕೆ ತುಂಬಿಸುತ್ತಿದ್ದರೆ,  ಇನ್ನು ಕೆಲವರು ಗುಡಿಸಿ ಸ್ವಚ್ಛಗೊಳಿಸುವುದರಲ್ಲಿ ಬ್ಯುಸಿಯಾಗಿದ್ದಾರೆ. ಇಲ್ಲಿ ಮನೆಯ ಮುದ್ದಿನ ಶ್ವಾನವಿರುವುದನ್ನು ಕಾಣಬಹುದು. ಇದೆಲ್ಲದರ ನಡುವೆ ಮೊಲವೊಂದು ಅಡಗಿ ಕುಳಿತಿದ್ದು, ಈ ಪ್ರಾಣಿ ಎಲ್ಲಿದೆ ಎಂದು ಹುಡುಕುವ ಸವಾಲು ಇಲ್ಲಿದೆ.

ಇದನ್ನೂ ಓದಿ: ಒಣಗಿದ ಎಲೆಗಳ ನಡುವೆ ಅಡಗಿ ಕುಳಿತಿರುವ ಹಾವನ್ನು ಗುರುತಿಸಬಲ್ಲಿರಾ

ಮೊಲವನ್ನು ಗುರುತಿಸಲು ಸಾಧ್ಯವಾಯಿತೇ?

ಕೇವಲ ಹದಿನೈದು ಸೆಕೆಂಡುಗಳಲ್ಲಿ ಈ ಚಿತ್ರದಲ್ಲಿ ಅಡಗಿರುವ ಮೊಲವನ್ನು ಗುರುತಿಸುವುದು ಅಸಾಧ್ಯ. ಆದರೆ ವೀಕ್ಷಣಾ ಸಾಮರ್ಥ್ಯ ಹೊಂದಿದವರು ಮಾತ್ರ ಈ ಒಗಟನ್ನು ಸಲೀಸಾಗಿ ಈಗಾಗಲೇ ಬಿಡಿಸಲು ಸಾಧ್ಯವಾಗಿದೆ. ನಿಮ್ಮ ಕಣ್ಣಿಗೆ ಮೊಲ ಕಾಣಿಸಿಲ್ಲ ಎಂದಾದರೆ ಟೆನ್ಶನ್ ಮಾಡಿಕೊಳ್ಳಬೇಡಿ, ನಾವೇ ಈ ಮುದ್ದಾದ ಪ್ರಾಣಿ ಎಲ್ಲಿದೆ ಎಂದು ಹೇಳುತ್ತೇವೆ. ಈ ಕೆಳಗಿನ ಫೋಟೋವನ್ನು ನೋಡಿ. ಇಲ್ಲಿ ಮೊಲವನ್ನು ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ