Optical Illusion: Real ಮಧ್ಯೆ Reel ಎಲ್ಲಿದೆ ಎಂದು ಪತ್ತೆ ಹಚ್ಚಲು ಸಾಧ್ಯವೇ?

ಕೆಳಗೆ ನೀಡಲಾದ ಚಿತ್ರದಲ್ಲಿ ಸಾಕಷ್ಟು Real ಎಂದು ಬರೆದಿರುವುದನ್ನು ಕಾಣಬಹುದು. ಆದರೆ ಅವುಗಳ ಮಧ್ಯೆ ಒಂದೇ ಒಂದು Reel ಎನ್ನುವ ಪದ ಅಡಗಿದೆ . ಎಷ್ಟೇ ಹುಡುಕಿದರೂ ನಿಮಗೆ ಪತ್ತೆ ಹಚ್ಚಲು ಸಾಧ್ಯವಿಲ್ಲವೆಂದಾದರೆ ಲೇಖನದ ಕೊನೆಯಲ್ಲಿ ಉತ್ತರವನ್ನು ನೀಡಲಾಗಿದೆ.

Optical Illusion: Real ಮಧ್ಯೆ Reel ಎಲ್ಲಿದೆ ಎಂದು ಪತ್ತೆ ಹಚ್ಚಲು ಸಾಧ್ಯವೇ?

Updated on: Sep 03, 2024 | 5:34 PM

ಸೋಶಿಯಲ್ ಮೀಡಿಯಾ ತೆರೆದರೆ ಸಾಕು ಕಾಮಿಡಿ ವಿಡಿಯೋಗಳು, ಫನ್ನಿ ಮೀಮ್ ಗಳಷ್ಟೇ ಅಲ್ಲ.. ಮೆದುಳನ್ನು ಚುರುಕುಗೊಳಿಸುವ ಹಲವು ಬಗೆಯ ಫೋಟೋ ಪಜಲ್, ಆಪ್ಟಿಕಲ್ ಇಲ್ಯೂಷನ್ ಚಿತ್ರಗಳಿವೆ. ಇವುಗಳು ನಿಮ್ಮ ದೃಷ್ಟಿ ಸಾಮರ್ಥ್ಯವನ್ನು ಸುಧಾರಿಸುವುದು ಮಾತ್ರವಲ್ಲದೇ ನಿಮ್ಮ ಮೆದುಳಿಗೂ ಕೆಲಸವನ್ನು ನೀಡುತ್ತದೆ. ಇದೀಗ ಅಂತದ್ದೇ ಒಂದು ಫೋಟೋ ಎಲ್ಲೆಡೆ ವೈರಲ್​ ಆಗಿದ್ದು, ನೀವು ಇದರಲ್ಲಿ Real ಮಧ್ಯೆ Reel ಎಲ್ಲಿದೆ ಎಂದು ಪತ್ತೆ ಹಚ್ಚಬೇಕಿದೆ.

ಮೇಲೆ ನೀಡಲಾದ ಚಿತ್ರದಲ್ಲಿ ಸಾಕಷ್ಟು Real ಎಂದು ಬರೆದಿರುವುದನ್ನು ಕಾಣಬಹುದು. ಆದರೆ ಅವುಗಳ ಮಧ್ಯೆ ಒಂದೇ ಒಂದು Reel ಎನ್ನುವ ಪದ ಅಡಗಿದೆ . ಇದನ್ನು ಪತ್ತೆ ಹಚ್ಚುವುದು ನಿಮ್ಮ ಕೆಲಸ. ಕಣ್ಣಿನ ಸವಾಲು ಹಾಗೂ ಮೆದುಳನ್ನು ಚುರುಕುಗೊಳಿಸುವ ಈ ಫೋಟೋವನ್ನು @telugufunworld ಎಂಬ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಸದ್ಯ ಇದು ಎಲ್ಲೆಡೆ ವೈರಲ್​ ಆಗುತ್ತಿದೆ.

ನೀವು ಎಷ್ಟೇ ಹುಡುಕಿದರೂ ನಿಮಗೆ Reel ಎಲ್ಲಿದೆ ಎಂದು ಪತ್ತೆ ಹಚ್ಚಲು ಸಾಧ್ಯವಿಲ್ಲವೆಂದಾದರೆ ಚಿಂತಿಸಬೇಕಿಲ್ಲ. ಯಾಕೆಂದರೆ ಈ ಕೆಳಗೆ ನೀಡಿರುವ ಚಿತ್ರದಲ್ಲಿ Reel ಎಂಬ ಪದ ಎಲ್ಲಿದೆ ಎಂಬುದನ್ನು ಗುರುತಿಸಲಾಗಿದೆ. ಈ ಕೆಳಗಿನ ಚಿತ್ರದಲ್ಲಿ ಉತ್ತರ ಕಂಡುಕೊಳ್ಳಿ.

ಇದನ್ನೂ ಓದಿ: Optical Illusion: 590ರ ನಡುವೆ ಅಡಗಿರುವ ನಂಬರ್​​ 580 ಹುಡುಕಲು ಸಾಧ್ಯವೇ?

ಅಂದಹಾಗೆ, ಈ ಸವಾಲಿನ ಆಟ ನಿಮಗೆ ಹೇಗಾನಿಸಿತು, ಇಷ್ಟವಾಯಿತೆ? ಕಾಮೆಂಟ್ ಮೂಲಕ ತಿಳಿಸಿ. ಕಣ್ಣುಗಳನ್ನು ಮೂರ್ಖರನ್ನಾಗಿಸುವ ಈ ಆಟವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us