Optical Illusion: ಚಿತ್ರದಲ್ಲಿ ಭಿನ್ನವಾಗಿರುವ ಒಂದು ಕೋತಿಯನ್ನು ಗುರುತಿಸಬಲ್ಲಿರಾ?

|

Updated on: Feb 03, 2024 | 5:10 PM

ಇಂದಿನ ಆಪ್ಟಿಕಲ್ ಇಲ್ಯೂಷನ್ ಸವಾಲಿನ ಚಿತ್ರದಲ್ಲಿ ಒಂದೇ ಒಂದು ಭಿನ್ನವಾಗಿರುವ ಕೋತಿಯನ್ನು ನೀವು ಗುರುತಿಸಬೇಕಿದೆ. ಅಷ್ಟೂ ಕೋತಿಗಳ ಮಧ್ಯೆ ಭಿನ್ನವಾಗಿರುವ ಕೋತಿಯನ್ನು ಪತ್ತೆ ಹಚ್ಚಲು ನಿಮ್ಮಿಂದ ಸಾಧ್ಯವೇ? ಸಾಧ್ಯವಾಗಿಲ್ಲವೆಂದಾದರೆ ಈ ಲೇಖನದ ಅಂತ್ಯದಲ್ಲಿ ತಿಳಿದುಕೊಳ್ಳಿ.

Optical Illusion: ಚಿತ್ರದಲ್ಲಿ ಭಿನ್ನವಾಗಿರುವ ಒಂದು ಕೋತಿಯನ್ನು ಗುರುತಿಸಬಲ್ಲಿರಾ?
Optical Illusion
Follow us on

ಇತ್ತೀಚಿನ ದಿನಗಳಲ್ಲಿ, ಆಪ್ಟಿಕಲ್ ಇಲ್ಯೂಷನ್(Optical Illusion) ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಜನಪ್ರಿಯವಾಗಿವೆ. ಇಂದಿನ ಆಪ್ಟಿಕಲ್ ಇಲ್ಯೂಷನ್ ಸವಾಲಿನ ಆಟದಲ್ಲಿ ನೀವು ಒಂದು ಭಿನ್ನವಾಗಿರುವ ಕೋತಿಯನ್ನು ಪತ್ತೆ ಹಚ್ಚಬೇಕಿದೆ. ಹದ್ದಿನ ಕಣ್ಣು ನಿಮ್ಮದಾಗಿದ್ದರೆ ಕೇವಲ ಮೂರೇ ಸೆಕೆಂಡುಗಳಲ್ಲಿ ಭಿನ್ನವಾಗಿರುವ ಕೋತಿಯನ್ನು ಪತ್ತೆ ಹಚ್ಚಬಹುದು. ನೀವು ಚಾಲೆಂಜ್ ಸ್ವೀಕರಿಸಲು ಸಿದ್ಧರಿದ್ದೀರಾ? ಹಾಗಿದ್ದರೆ ಪತ್ತೆ ಹಚ್ಚಿ ನೋಡೋಣ.

ಮೇಲೆ ನೀಡಿರುವ ಚಿತ್ರದಲ್ಲಿ ಬಾಯಿ ಮುಚ್ಚಿಕೊಂಡಿರುವ ಸಾಕಷ್ಟು ಕೋತಿಮರಿಗಳನ್ನು ಕಾಣಬಹುದು. ಆದರೆ ನೀವು ಚಿತ್ರವನ್ನು ಸರಿಯಾಗಿ ಗಮನಿಸಿದರೆ ಒಂದೇ ಒಂದು ಭಿನ್ನವಾಗಿರುವ ಕೋತಿಯನ್ನು ಪತ್ತೆಹಚ್ಚಬಹುದು. ಇದು ನಿಮ್ಮ ವೀಕ್ಷಣಾ ಕೌಶಲ್ಯಗಳನ್ನು ಸುಧಾರಿಸಲು ಮತ್ತು ಮೆದುಳನ್ನು ಚುರುಕುಗೊಳಿಸಲು ಸಹಾಯಕವಾಗಿದೆ.

ಇದನ್ನೂ ಓದಿ: 7 ಸೆಕೆಂಡುಗಳಲ್ಲಿ ಚಿತ್ರದಲ್ಲಿ ಅಡಗಿರುವ 2 ಬೆಕ್ಕುಗಳನ್ನು ಹುಡುಕಬಲ್ಲಿರಾ?

ಚಿತ್ರ ಸಾಕಷ್ಟು ಸಿಂಪಲ್​​ ಎಂದೆನಿಸಿದರೂ ಕೂಡ ಭಿನ್ನವಾಗಿರುವ ಕೋತಿಯನ್ನು ಪತ್ತೆಹಚ್ಚಲು ಸಾಧ್ಯವಾಗುತ್ತಿಲ್ಲವೇ? ಹಾಗಿದ್ದರೆ ಕೆಳಗಿನ ಚಿತ್ರದಲ್ಲಿ ಕೆಂಪು ಬಣ್ಣದ ವೃತ್ತಗಳಲ್ಲಿ ಭಿನ್ನವಾಗಿರುವ ಕೋತಿಯನ್ನು​​​ ಗುರುತಿಸಲಾಗಿದೆ.ಅಂದಹಾಗೆ, ಇಂದಿನ ಸವಾಲಿನ ಆಟ ನಿಮಗೆ ಇಷ್ಟವಾಯಿತೆ? ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.

ಉತ್ತರ ಇಲ್ಲಿದೆ ನೋಡಿ:

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 5:09 pm, Sat, 3 February 24