
ನಿಮ್ಮ ದೃಷ್ಟಿ ಸಾಮರ್ಥ್ಯ ಹಾಗೂ ಬುದ್ಧಿವಂತಿಕೆಯನ್ನು ಪರೀಕ್ಷಿಸುವ ಆಪ್ಟಿಕಲ್ ಇಲ್ಯೂಷನ್ (Optical Illusion) ಚಿತ್ರಗಳು, ಬ್ರೈನ್ ಟೀಸರ್ (brain teaser) ಆಟಗಳು ಸೋಷಿಯಲ್ ಮೀಡಿಯಾದಲ್ಲಿ ಪ್ರತಿನಿತ್ಯ ವೈರಲ್ ಆಗುವುದನ್ನು ನೀವು ನೋಡಿರುತ್ತೀರಿ. ಕುತೂಹಲಕಾರಿ ಈ ಒಗಟಿನ ಆಟಗಳನ್ನು ಬಿಡಿಸುವುದರಲ್ಲಿರುವ ಮಜಾನೇ ಬೇರೆ. ಮೆದುಳಿಗೆ ವ್ಯಾಯಾಮವನ್ನು ನೀಡುವ ಚಿತ್ರಗಳನ್ನು ಅನೇಕರು ಇಷ್ಟಪಟ್ಟು ಬಿಡಿಸುವತ್ತ ಗಮನ ಹರಿಸುತ್ತಾರೆ. ಇದೀಗ ನಿಮ್ಮ ವೀಕ್ಷಣಾ ಸಾಮರ್ಥ್ಯಕ್ಕೆ ಸವಾಲು ಹಾಕುವಂತಿದೆ ಈ ಚಿತ್ರ. ಸುರಿಯುತ್ತಿರುವ ಮಳೆಯ ನಡುವೆ ಜನರು ಛತ್ರಿ ಹಿಡಿದು ನಿಂತುಕೊಂಡಿದ್ದಾರೆ. ಇಲ್ಲಿ ಕಪ್ಪೆಯೊಂದು ಅಡಗಿ ಕುಳಿತಿದ್ದು, 15 ಸೆಕೆಂಡುಗಳಲ್ಲಿ ನೀವು ಈ ಉಭಯವಾಸಿ ಜೀವಿಯನ್ನು ಹುಡುಕಬೇಕು. ಈ ಟ್ರಿಕ್ಕಿ ಒಗಟನ್ನು ಬಿಡಿಸಲು ನಿಮ್ಮಿಂದ ಸಾಧ್ಯವೇ ಎಂದು ನೋಡಿ.
ಇಲ್ಯೂಷನ್ ಚಿತ್ರಗಳೇ ಹಾಗೆ, ನಿಮ್ಮ ಕಣ್ಣಿಗೆ ಮೋಸ ಮಾಡುತ್ತದೆ. ನಿಮ್ಮನ್ನು ಭ್ರಮೆಯಲ್ಲಿ ಸಿಲುಕಿಸುತ್ತದೆ. ಈ ಚಿತ್ರವು ಕೂಡ ಅದೇ ರೀತಿಯಿದೆ. ಸುರಿಯುತ್ತಿರುವ ಮಳೆಯಲ್ಲಿ ಜನರು ಛತ್ರಿ ಹಿಡಿದು ನಿಂತುಕೊಂಡಿರುವುದನ್ನು ಕಾಣಬಹುದು. ನೆಲದ ಮೇಲೆ ಅಲ್ಲಲ್ಲಿ ಮಳೆ ನೀರು ನಿಂತಿದ್ದು, ಒಣ ಎಲೆಗಳು ನೆಲೆಯ ಮೇಲೆ ಹರಡಿಕೊಂಡಿರುವುದನ್ನು ಕಾಣಬಹುದು. ಈ ಜನರ ನಡುವೆ ಸಾಕು ಪ್ರಾಣಿಯಾದ ಶ್ವಾನವೊಂದು ನಿಂತುಕೊಂಡಿದೆ. ಇದೆಲ್ಲದರ ನಡುವೆ ಹಸಿರು ಬಣ್ಣದ ಕಪ್ಪೆ ಅವಿತು ಕುಳಿತುಕೊಂಡಿದೆ. ನೀವು ಜಸ್ಟ್ 15 ಸೆಕೆಂಡುಗಳಲ್ಲಿ ಈ ಒಗಟು ಬಿಡಿಸಿ ಕಪ್ಪೆ ಎಲ್ಲಿದೆ ಎಂದು ಹೇಳಬೇಕು. ಈ ಇಲ್ಯೂಷನ್ ಚಿತ್ರ ಬಿಡಿಸಲು ಸಾಧ್ಯವೇ ಎಂದು ನೋಡಿ.
ಈ ಚಿತ್ರದಲ್ಲಿ ಒಂದಷ್ಟು ಜನರು, ಪ್ರಾಣಿಯನ್ನು ನೀವು ಗಮನಿಸಿದ್ದೀರಿ ಅಲ್ವಾ. ಆದರೆ ಕಪ್ಪೆಯನ್ನು ಗುರುತಿಸುವುದೇ ಇಲ್ಲಿರುವ ಬಹುದೊಡ್ಡ ಸವಾಲು. ಈ ಚಿತ್ರದತ್ತ ಕಣ್ಣು ಹಾಯಿಸಿ ಇಲ್ಲಿರುವ ಉಭಯವಾಸಿ ಜೀವಿಯನ್ನು ಜಸ್ಟ್ 15 ಸೆಕೆಂಡುಗಳಲ್ಲಿ ಪತ್ತೆಹಚ್ಚಲು ಸಾಧ್ಯವೇ ಎಂದು ನೋಡಿ.
ಇದನ್ನೂ ಓದಿ:ಈ ಉದ್ಯಾನವನದಲ್ಲಿ ಅಡಗಿರುವ ಹೆಬ್ಬಾವನ್ನು ಗುರುತಿಸಬಲ್ಲಿರಾ
ಇಂಟರ್ನೆಟ್‌ನಲ್ಲಿ ನೋಡುಗರನ್ನು ಗೊಂದಲಕ್ಕೀಡು ಮಾಡುವ ಚಿತ್ರಗಳೇ ತುಂಬಿದೆ. ಈ ಚಿತ್ರವು ನಿಮ್ಮ ಕಣ್ಣಿಗೆ ಸಾಮಾನ್ಯವೆಂದು ತೋರುತ್ತದೆ. ಈ ಚಿತ್ರವು ಕೂಡ ಹಾಗೆಯೇ ಇದ್ದು, ನಿಮ್ಮಿಂದ ಉಭಯವಾಸಿಯಾದ ಕಪ್ಪೆಯನ್ನು ಗುರುತಿಸಲು ಸಾಧ್ಯವಾಗಿಲ್ಲವೇ, ಹೆಚ್ಚು ಚಿಂತಿಸಬೇಡಿ. ಈ ಚಿತ್ರದಲ್ಲಿ ಅಡಗಿ ಕುಳಿತಿರುವ ಕಪ್ಪೆಯನ್ನು ಹಳದಿ ಬಣ್ಣದಲ್ಲಿ ಗುರುತಿಸಿದ್ದೇವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ