Optical Illusion: ಈ ಚಿತ್ರದಲ್ಲಿ ಅಡಗಿರುವ ಕಾಳಿಂಗ ಸರ್ಪಗಳನ್ನು ಕಂಡುಹಿಡಿಯಿರಿ

ಮೆದುಳಿಗೆ ಕೆಲಸ ನೀಡುವಂತಹ, ತಲೆ ಕೆರೆದುಕೊಳ್ಳುವಂತೆ ಮಾಡುವ ಅನೇಕ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಪ್ರತಿನಿತ್ಯ ವೈರಲ್‌ ಆಗುತ್ತಿರುತ್ತವೆ. ಇದೀಗ ಇಲ್ಲೊಂದು ಅಂತಹದ್ದೇ ಒಗಟಿನ ಚಿತ್ರ ವೈರಲ್‌ ಆಗಿದ್ದು, ಎಐ ಆಧಾರಿತ ಚಿತ್ರವಾಗಿದೆ. ಇದರಲ್ಲಿ ಅಡಗಿರುವ ಕಾಳಿಂಗ ಸರ್ಪಗಳ ಸಂಖ್ಯೆ ಎಷ್ಟು ಎಂದು ಹೇಳಬೇಕು. ಉತ್ತರ ಹೇಳಲು ಸಮಯವಕಾಶ ಇಲ್ಲದಿದ್ರೂ , ಆದರೆ ಸರಿಯಾದ ಉತ್ತರ ಹೇಳಿದ್ರೆ ಜಾಣರು ಎಂದರ್ಥ.

Optical Illusion: ಈ ಚಿತ್ರದಲ್ಲಿ ಅಡಗಿರುವ ಕಾಳಿಂಗ ಸರ್ಪಗಳನ್ನು ಕಂಡುಹಿಡಿಯಿರಿ
ಆಪ್ಟಿಕಲ್‌ ಇಲ್ಯೂಷನ್‌

Updated on: Sep 21, 2025 | 11:17 AM

ಒಗಟುಗಳನ್ನು ಬಿಡಿಸುವುದೆಂದರೆ ಕೆಲವರಿಗೆ ಸುಲಭದ ಕೆಲಸ. ಕೆಲವರಿಗೆ ಇಂತಹ ಒಗಟುಗಳೆಂದರೆ ನನ್ನಿಂದ ಸಾಧ್ಯವಿಲ್ಲ ಎಂದು ಬಹುದೂರ ಹೋಗುತ್ತಾರೆ. ಎಷ್ಟೇ ಬುದ್ಧಿವಂತರಾಗಿದ್ರೂ ಈ ಒಗಟುಗಳು ಕಣ್ಣನ್ನು ಮೋಸಗೊಳಿಸುತ್ತದೆ. ಆದರೆ ಈ ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಚಿತ್ರಗಳು ಮೆದುಳಿಗೆ ವ್ಯಾಯಾಮ ನೀಡುವ ಮೂಲಕ ಬ್ರೈನ್‌ ಶಾರ್ಪ್‌ ಆಗಿಸುತ್ತದೆ. ಇದೀಗ ಇಂತಹದ್ದೇ ಟ್ರಿಕ್ಕಿ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದನ್ನು ನೋಡಿದ ಕೂಡಲೇ ಇದೊಂದು ಎಐ ಆಧಾರಿತ ಚಿತ್ರವೆಂದು ಖಚಿತವಾಗುತ್ತದೆ. ಈ ಚಿತ್ರದಲ್ಲಿ ಅಡಗಿರುವ ಕಾಳಿಂಗ ಸರ್ಪಗಳನ್ನು (King Cobras) ಕಂಡುಹಿಡಿಯಬೇಕು, ಒಟ್ಟು ಕಾಳಿಂಗ ಸರ್ಪಗಳ ಸಂಖ್ಯೆಯನ್ನು ನಿಖರವಾಗಿ ಹೇಳುವ ಸವಾಲು ಇಲ್ಲಿ ನೀಡಲಾಗಿದೆ. ಆದಷ್ಟು ಬೇಗ ಪತ್ತೆ ಹಚ್ಚಲು ಸಾಧ್ಯವಾದರೆ ನೀವು ತುಂಬಾನೇ ಶಾರ್ಪ್ ಇದ್ದೀರಾ ಎನ್ನುವುದು ಖಚಿತವಾಗುತ್ತದೆ.

ಈ ಚಿತ್ರದಲ್ಲಿ ಏನಿದೆ?

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವೂ ಎಐ ಆಧಾರಿತವಾಗಿದ್ದು, ದಟ್ಟವಾದ ಕಾಡಿನಾ ದೃಶ್ಯವನ್ನು ಕಾಣಬಹುದು. ಎರಡು ಬದಿಯಲ್ಲೂ ದಟ್ಟವಾದ ಮರಗಳು ಹಾಗೂ ನೆಲದಾದಂತ್ಯ ಬಂಡೆಗಳಿವೆ. ನಡುವೆ ಜಲಪಾತವೊಂದು ಹರಿಯುತ್ತಿದೆ. ಮೊದಲ ನೋಟದಲ್ಲಿ ಈ ಚಿತ್ರವನ್ನು ನೋಡಿದಾಗ ನಿಮ್ಮ ಕಣ್ಣಿಗೆ ಖುಷಿಯೆನಿಸುತ್ತದೆ. ಹಚ್ಚ ಹಸಿರಿನ ಪ್ರಕೃತಿಯ ಆಧಾರಿತ ಈ ಚಿತ್ರವೂ ನಿಮ್ಮ ಕಣ್ಣನ್ನು ತಂಪಾಗಿಸುತ್ತದೆ. ಆದರೆ ಈ ಚಿತ್ರದಲ್ಲಿ ವಿಷಕಾರಿ ಕಾಳಿಂಗ ಸರ್ಪಗಳನ್ನು ಮರೆ ಮಾಡಲಾಗಿದೆ. ಈ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿ ಸಮಯವಕಾಶವಿಲ್ಲದಿದ್ರೂ ಆದಷ್ಟು ಬೇಗ ಸರಿಯಾದ ಉತ್ತರ ಹೇಳಬೇಕು.

ಇದನ್ನೂ ಓದಿ: Optical Illusion: ಜಸ್ಟ್ 12 ಸೆಕೆಂಡುಗಳಲ್ಲಿ ಈ ಚಿತ್ರದಲ್ಲಿರುವ ಎರಡನೇ ವ್ಯಕ್ತಿಯನ್ನು ಕಂಡು ಹಿಡಿಯಿರಿ

ಇದನ್ನೂ ಓದಿ
ಈ ಚಿತ್ರದಲ್ಲಿರುವ ಎರಡನೇ ವ್ಯಕ್ತಿಯನ್ನು ಕಂಡು ಹಿಡಿಯಿರಿ
ಈ ಚಿತ್ರದಲ್ಲಿ ಅಡಗಿರುವ ಕುದುರೆಯನ್ನು 7 ಸೆಕೆಂಡುಗಳಲ್ಲಿ ಕಂಡು ಹಿಡಿಯಿರಿ
ಈ ಚಿತ್ರದಲ್ಲಿ ಅಡಗಿರುವ ಪುಟ್ಟ ಹಕ್ಕಿಯನ್ನು ಕಂಡುಹಿಡಿಯಿರಿ
ಈ ಚಿತ್ರದಲ್ಲಿ ಅಡಗಿರುವ ಕಪ್ಪೆಯನ್ನು ಹುಡುಕಿ ನೋಡೋಣ

ನಿಖರ ಉತ್ತರ ಹೇಳಲು ನಿಮಗೆ ಸಾಧ್ಯವಾಯಿತೇ?

ಎಐ ಆಧಾರಿತ ಚಿತ್ರವಾಗಿದ್ರೂ ಕಾಡಿನ ಚಿತ್ರವನ್ನು ನೈಸರ್ಗಿಕವಾಗಿರುವಂತೆ ಚಿತ್ರಿಸಲಾಗಿದೆ. ಈ ಚಿತ್ರದಲ್ಲಿ ಜಾಣತನದಿಂದ ನಾಗರಹಾವುಗಳನ್ನು ಮರೆಮಾಡಲಾಗಿದ್ದು, ಎಷ್ಟು ಕಾಳಿಂಗ ಸರ್ಪಗಳಿವೆ ಎಂದು ನೀವು ಎಣಿಸಬಲ್ಲಿರಾ? ಹಾವುಗಳನ್ನು ಕಲ್ಲುಗಳು, ಕಾಂಡಗಳು ಮತ್ತು ಎಲೆಗಳಲ್ಲಿ ಬೆರೆಸಲಾಗಿದ್ದು,ಇದು ನಿಮ್ಮ ವೀಕ್ಷಣೆಯ ತೀಕ್ಷ್ಣತೆಯನ್ನು ಪರೀಕ್ಷಿಸುತ್ತದೆ. ಎಷ್ಟೇ ಹುಡುಕಿದರೂ ಈ ಚಿತ್ರದಲ್ಲಿ ಕಾಳಿಂಗ ಸರ್ಪಗಳು ಎಷ್ಟೆಂದು ಹೇಳಲು ನಿಮ್ಮಿಂದ ಸಾಧ್ಯವಾಗುತ್ತಿಲ್ಲವೇ, ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಈ ಚಿತ್ರವನ್ನು ಸೂಕ್ಷ್ಮವಾಗಿ ಬಹಳ ಹತ್ತಿರದಿಂದ ಗಮನಿಸಿ, ನಿಖರವಾದ ಉತ್ತರ ಹೇಳಿ ನೀವು ಅತೀ ಬುದ್ಧಿವಂತರು ಎನಿಸಿಕೊಳ್ಳಿ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 11:16 am, Sun, 21 September 25