Optical Illusion : ನಿಮ್ಮ ಮೆದುಳನ್ನು ಕಣ್ಣು, ಕಣ್ಣನ್ನು ಮೆದುಳು ನಂಬಲಾರದಂಥ ಸಂದಿಗ್ಧವನ್ನು ಇಂಥ ಭ್ರಮಾತ್ಮಕ ಚಿತ್ರಗಳು ಸೃಷ್ಟಿಸುತ್ತಿರುತ್ತವೆ. ಈ ಪ್ರಕ್ರಿಯೆನ್ನು ಹುಟ್ಟುಹಾಕುವುದೇ ಇವುಗಳ ಗುಣ. ಆದರೂ ನಿಜಾಂಶ ಏನೆಂದು ತಿಳಿದುಕೊಳ್ಳಲು ನಿಮ್ಮನ್ನು ಇಂಥ ಚಿತ್ರಗಳು ಬಲವಾಗಿ ಪ್ರೇರೇಪಿಸುತ್ತವೆ. ಇದೀಗ ಮತ್ತೊಂದು ಆಪ್ಟಿಕಲ್ ಇಲ್ಲ್ಯೂಷನ್ ವೈರಲ್ ಆಗುತ್ತಿದೆ. ಇದು ಅಪ್ಪಟ ಮನರಂಜನೆಗಾಗಿ ಇರುವ ಚಿತ್ರ. ಒಬ್ಬ ವ್ಯಕ್ತಿ ಇಲ್ಲಿ ಕುಳಿತಿದ್ದಾನೆ. ಆದರೆ ಅವನ ತಲೆಯೇ ಇಲ್ಲ! ನೆಟ್ಟಿಗರೆಲ್ಲ ತಲೆಕೆರೆದುಕೊಳ್ಳುತ್ತಿದ್ದಾರೆ. ನೀವು?
Just a guy wearing a hoodie
by u/zaferemre in confusing_perspective
ರುಂಡವೇ ಇಲ್ಲದ ಈ ವ್ಯಕ್ತಿ ಕಪ್ಪು ಬಟ್ಟೆ ಹಾಕಿಕೊಂಡು ಬಸ್ ಅಥವಾ ಟ್ರೇನ್ನಲ್ಲಿ ಕುಳಿತಹಾಗಿದೆ. ತನ್ನ ಜಾಕೇಟಿನಲ್ಲಿ ಕೈ ಇಳಿಬಿಟ್ಟುಕೊಂಡು ನೇರವಾಗಿ ಕುಳಿತಿದ್ದಾನೆ. ಯಾವ ಊರಿಗೆ ಹೊರಟಿದ್ದಾನೋ ಏನೋ. ಈ ಚಿತ್ರವನ್ನು ನೋಡಿದ ಅನೇಕ ನೆಟ್ಟಿಗರ ಎದೆಬಡಿತವಂತೂ ಜೋರಾಗಿದೆ. ಆದರೂ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಿದ್ದಾರೆ. ಉತ್ತರ ಕಂಡುಕೊಳ್ಳಲು ನನಗಂತೂ ಬಹಳ ಸಮಯ ತೆಗೆದುಕೊಂಡಿತು ಎಂದಿದ್ದಾರೆ ಅನೇಕರು.
ಇದನ್ನೂ ಓದಿ : Viral: ಒಂಟಿತನ ಕಾಡುತ್ತಿದೆಯೇ?;ಬಾಡಿಗೆ ಗೆಳತಿಯನ್ನು ನೇಮಿಸಿಕೊಳ್ಳಿ!
ಭುಜದ ಮೇಲೆ ಕಾಲರ್ನಂತೆ ಕಾಣುತ್ತಿರು ಆ ಪಟ್ಟಿಯನ್ನು ನೋಡಿದರೆ ಬಹಳ ಗೊಂದಲ ಉಂಟಾಗುತ್ತಿದೆ ಎಂದು ಹೇಳಿದ್ದಾರೆ ಕೆಲವರು. ಅವನ ತಲೆ ಬಲಕ್ಕೆ ವಾಲಿದೆ ಎನ್ನಿಸುತ್ತಿದೆ ಎಂದು ಒಬ್ಬರು. ಅವನನ್ನು ನಾನು ಕನ್ನಡಿಯಲ್ಲಿ ನೋಡುತ್ತಿದ್ದೇನಾ ಎಂದು ಇನ್ನೊಬ್ಬರು. ನನಗೇನೂ ಅರ್ಥವೇ ಆಗುತ್ತಿಲ್ಲ ಎಂದು ಮತ್ತೊಬ್ಬರು. ಯಾರೋ ವಾಮಾಚಾರ ಮಾಡಿಸಿದಂತೆ ಕಾಣುತ್ತಿದೆ ಎಂದು ಮಗದೊಬ್ಬರು.
ಇದನ್ನೂ ಓದಿ : Viral Video: ಶ್ರೀಮಂತರು ಷೋಕಿಗಾಗಿ ನಾಯಿ ಸಾಕುತ್ತಾರೆ, ಅವರು ಪ್ರೀತಿಸುವುದಿಲ್ಲ; ನೆಟ್ಟಿಗರ ಚರ್ಚೆ
ನಾಲ್ಕು ವರ್ಷಗಳ ಹಿಂದೆ ರೆಡ್ಡಿಟ್ನಲ್ಲಿ ಹಂಚಿಕೊಂಡ ಈ ಪೋಸ್ಟ್ ಇದೀಗ ವೈರಲ್ ಆಗುತ್ತಿದೆ. ಈತನಕ ಸುಮಾರು 59,000 ಅಪ್‌ವೋಟ್‌ಗಳನ್ನು ಇದು ಗಳಿಸಿದೆ. ಈ ಚಿತ್ರವನ್ನು ನೋಡಿದ ನಿಮಗೆ ಆತನ ರುಂಡ ಏನಾಯಿತು ಎನ್ನುವುದೇನಾದರೂ ತಿಳಿಯಿತೆ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ