Optical Illusion: ಈ ಉದ್ಯಾನವನದಲ್ಲಿ ಅಡಗಿರುವ ಜೇನು ನೊಣವನ್ನು ಗುರುತಿಸಬಲ್ಲಿರಾ

ಟ್ರಿಕ್ಕಿ ಒಗಟುಗಳನ್ನು ಬಿಡಿಸುವುದು ಹೇಳಿದ್ದಷ್ಟು ಸುಲಭವಲ್ಲ. ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ದೃಷ್ಟಿ ಹಾಗೂ ಮೆದುಳಿಗೆ ಕೆಲಸ ನೀಡುತ್ತವೆ. ಸೋಷಿಯಲ್‌ ಮೀಡಿಯಾದಲ್ಲಿ ಇಂತಹ ಒಗಟಿನ ಚಿತ್ರಗಳು ಆಗಾಗ್ಗೆ ವೈರಲ್ ಆಗುವುದನ್ನು ನೀವು ನೋಡಿರುತ್ತೀರಿ. ಇದೀಗ ಕಷ್ಟಕರವಾದ ಇಲ್ಯೂಷನ್‌ ಚಿತ್ರವೊಂದು ವೈರಲ್‌ ಆಗಿದ್ದು ಇದರಲ್ಲಿ ಜೇನು ನೊಣ ಎಲ್ಲಿದೆ ಎಂದು ಕಂಡು ಹಿಡಿಯುವ ಸವಾಲಿದೆ. ಈ ಒಗಟು ಬಿಡಿಸಲು ನಿಮ್ಮಿಂದ ಸಾಧ್ಯವೇ ಎಂದು ಪ್ರಯತ್ನಿಸಿ ನೋಡಿ.

Optical Illusion: ಈ ಉದ್ಯಾನವನದಲ್ಲಿ ಅಡಗಿರುವ ಜೇನು ನೊಣವನ್ನು ಗುರುತಿಸಬಲ್ಲಿರಾ
ಆಪ್ಟಿಕಲ್‌ ಇಲ್ಯೂಷನ್‌ ಚಿತ್ರ
Image Credit source: Social Media

Updated on: Mar 01, 2026 | 1:51 PM

ಒಗಟುಗಳನ್ನು ಬಿಡಿಸುವುದೆಂದರೆ ಹೆಚ್ಚಿನವರಿಗೆ ಇಷ್ಟ. ಹೀಗಾಗಿ ಆಸಕ್ತಿಯುಳ್ಳವರು ಇಂತಹ ಒಗಟಿನ ಚಿತ್ರಗಳತ್ತ ಕಣ್ಣು ಹಾಯಿಸುತ್ತಾರೆ. ಆಪ್ಟಿಕಲ್‌ ಇಲ್ಯೂಷನ್‌ ನಂತಹ (Optical Illusion) ಒಗಟಿನ ಚಿತ್ರವನ್ನು ಬಿಡಿಸಲು ನೀವು ರೆಡಿ ಇದ್ದೀರಾ. ಹಾಗಾದ್ರೆ ನೀವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಚಿತ್ರದತ್ತ ಕಣ್ಣು ಹಾಯಿಸಿ. ಈ ಉದ್ಯಾನವನದಲ್ಲಿ ಅಡಗಿ ಕುಳಿತಿರುವ ಜೇನುನೊಣವನ್ನು ಹುಡುಕಬೇಕು. ಹತ್ತು ಸೆಕೆಂಡುಗಳೊಳಗೆ ಈ ಒಗಟು ಬಿಡಿಸುವಿರಾ.

ಈ ಚಿತ್ರದಲ್ಲಿ ಏನು ಕಾಣಿಸಿತು?

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಚಿತ್ರವೂ ಸಾಮಾನ್ಯವಾಗಿರುವಂತೆ ಕಾಣುತ್ತದೆ. ಇಲ್ಲಿ ನೀವು ಹೂವಿನ ಉದ್ಯಾನವನವನ್ನು ಕಾಣಬಹುದು. ಹಳದಿ ಹೂವುಗಳ ಜತೆಗೆ ವಿಭಿನ್ನ ಪ್ರಾಣಿಗಳು ಸಹ ಇವೆ. ಈ ಉದ್ಯಾನವನದಲ್ಲಿ ಜೇನುನೊಣವೂ ಇದೆ. ನೀವು ಈ ಜೇನುನೊಣವನ್ನು ಹತ್ತು ಸೆಕೆಂಡುಗಳೊಳಗೆ  ಹುಡುಕುತ್ತೀರಿ ಅಂತಾದ್ರೆ ನಿಮ್ಮ ವೀಕ್ಷಣಾ ಕೌಶಲ್ಯಕ್ಕೆ ನಾವು ಹ್ಯಾಟ್ಸ್ ಆಫ್ ಹೇಳುತ್ತೇವೆ.

ಇದನ್ನೂ ಓದಿ: ಈ ಚಿತ್ರದಲ್ಲಿರುವ ಮೀನನ್ನು ಹುಡುಕಿದ್ರೆ ನಿಮ್ಮ ಕಣ್ಣು ಚುರುಕಾಗಿದೆ ಎಂದರ್ಥ

ಜೇನು ನೊಣ ನಿಮ್ಮ ಕಣ್ಣಿಗೆ ಕಾಣಿಸಿತೇ?

ಹೂವುಗಳ ನಡುವೆ ಅಡಗಿರುವ ಜೇನು ನೊಣವನ್ನು ಕಂಡು ಹಿಡಿಯಲು ನಿಮಗೆ ಕಷ್ಟವಾಗಬಹುದು. ಈ ಚಿತ್ರವನ್ನು ವಿವಿಧ ಭಾಗಗಳಾಗಿ ವಿಂಗಡಿಸಿ ಸೂಕ್ಷ್ಮವಾಗಿ ನೋಡಿ. ಆಗ ನಿಮ್ಮ ಕಣ್ಣಿಗೆ ಜೇನು ನೊಣ ಕಾಣಿಸುತ್ತದೆ. ಎಷ್ಟೇ ದೃಷ್ಟಿ ಹಾಯಿಸಿದರೂ ಜೇನು ನೊಣ ನಿಮ್ಮ ಕಣ್ಣಿಗೆ ಕಾಣಿಸಿಲ್ಲವೇ. ಈ ಕೆಳಗಿನ ಚಿತ್ರದಲ್ಲಿ ಜೇನುನೊಣವನ್ನು ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Follow Us