Optical Illusion: ಬುದ್ಧಿವಂತರಿಗೊಂದು ಸವಾಲ್;‌ ಈ ಚಿತ್ರದಲ್ಲಿ ಅಡಗಿರುವ ಮೀನನ್ನು ಗುರುತಿಸಿ

ಮೆದುಳಿಗೆ ಕೆಲಸ ನೀಡುವ ಮ್ಯಾಥ್ಸ್‌ ಪಝಲ್‌ ಗೇಮ್‌ಗಳು, ಆಪ್ಟಿಕಲ್‌ ಇಲ್ಯೂಷನ್‌, ಬ್ರೈನ್‌ ಟೀಸರ್‌ ಸೇರಿದಂತೆ ಇನ್ನಿತ್ತರ ಒಗಟಿನ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ್ಗೆ ವೈರಲ್ ಆಗುತ್ತಿರತ್ತವೆ. ಇದೀಗ ಇಲ್ಲೊಂದು ಅಂತಹದ್ದೇ ಚಿತ್ರ ವೈರಲ್ ಆಗಿದ್ದು, ಆ ಫೋಟೋದಲ್ಲಿ ಅಡಗಿರುವ ಮೀನನ್ನು ಹುಡುಕುವ ಸವಾಲು ನೀಡಲಾಗಿದೆ.

Optical Illusion: ಬುದ್ಧಿವಂತರಿಗೊಂದು ಸವಾಲ್;‌ ಈ ಚಿತ್ರದಲ್ಲಿ ಅಡಗಿರುವ ಮೀನನ್ನು ಗುರುತಿಸಿ
ಆಪ್ಟಿಕಲ್‌ ಇಲ್ಯೂಷನ್‌
Image Credit source: Social Media

Updated on: Oct 09, 2025 | 4:35 PM

ನಿಮ್ಮ ಏಕಾಗ್ರತೆಯನ್ನು ಪರೀಕ್ಷಿಸುವಂತಹ ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಚಿತ್ರಗಳು, ಬ್ರೈನ್‌ ಟೀಸರ್‌ ಆಟಗಳು ಸೋಷಿಯಲ್‌ ಮೀಡಿಯಾದಲ್ಲಿ ಪ್ರತಿನಿತ್ಯ ಕಾಣ ಸಿಗುತ್ತಿರುತ್ತವೆ. ನಿಮ್ಮ ದೃಷ್ಟಿ ಎಷ್ಟು ಸೂಕ್ಷ್ಮವಾಗಿದೆ ಹಾಗೂ ನೀವು ಅತೀ ಬುದ್ಧಿವಂತರೇ ಎಂದು ಪರೀಕ್ಷಿಸಿಕೊಳ್ಳಲು ಇದೊಂದು ಒಳ್ಳೆಯ ಸಮಯ. ಮೆದುಳಿಗೆ ವ್ಯಾಯಾಮ ನೀಡುವ ಇಂತಹ ಮನೋರಂಜನಾತ್ಮಕ ಆಪ್ಟಿಕಲ್‌ ಇಲ್ಯೂಷನ್‌ ಆಟಗಳನ್ನು ನೀವು ಇಷ್ಟ ಪಡುತ್ತೀರಾ ಅಲ್ವಾ. ಇದೀಗ ಅಂತಹದ್ದೇ ಒಂದು ಒಗಟಿನ ಚಿತ್ರವೊಂದು ವೈರಲ್‌ ಆಗಿದ್ದು, ಈ ಚಿತ್ರದಲ್ಲಿ ಮರೆಮಾಡಲಾಗಿರುವ ಮೀನನ್ನು(fish) ಕಂಡು ಹಿಡಿಯುವ ಸವಾಲು ನೀಡಲಾಗಿದೆ. ಆದರೆ ಈ ಒಗಟು ಬಿಡಿಸಲು ನಿಮಗೆ ಇರುವ ಸಮಯ ಅವಕಾಶ ಹತ್ತು ಸೆಕೆಂಡುಗಳು ಮಾತ್ರ. ಈ ಒಗಟಿನ ಆಟದ ಮೂಲಕ ನಿಮ್ಮ ಬುದ್ಧಿವಂತಿಕೆಯನ್ನು ಪರೀಕ್ಷಿಸಿಕೊಳ್ಳಿ.

ಈ ಚಿತ್ರದಲ್ಲಿ ಏನಿದೆ?

ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ಮರದ ಕೊಂಬೆಯ ಮೇಲೆ ಚಿರತೆಯೊಂದು ಮಲಗಿದೆ. ಮೊದಲ ನೋಟದಲ್ಲಿ ಎಲ್ಲವೂ ಸಾಮಾನ್ಯವಾಗಿ ಕಾಣುತ್ತದೆ. ಆದರೆ ಚಿತ್ರದಲ್ಲಿ ಕೊಂಬೆಗಳ ನಡುವೆ ಮೀನನ್ನು ಮರೆಮಾಡಲಾಗಿದೆ. ನೀವು ಹತ್ತು ಸೆಕೆಂಡುಗಳು ಒಳಗೆ ಮೀನನ್ನು ಪತ್ತೆ ಹಚ್ಚಲು ಸಾಧ್ಯವೇ ಎಂದು ನೋಡಿ.

ಈ ಸವಾಲನ್ನು ಸ್ವೀಕರಿಸಿದ್ದೀರಾ?

ಈ ಚಿತ್ರದಲ್ಲಿ ಅಡಗಿರುವ ಮೀನನ್ನು ಹುಡುಕುವ ಸವಾಲನ್ನು ಸ್ವೀಕರಿಸಲು ಸಿದ್ಧವಿದ್ದೀರಾ ಎಂದು ನಾವು ಭಾವಿಸುತ್ತೇವೆ. ತಕ್ಷಣವೇ ನಿಮ್ಮ ಕಣ್ಣಿಗೆ ಮೀನು ಕಾಣಿಸದೇ ಇದ್ದರೆ ಚಿಂತಿಸಬೇಡಿ. ಈ ಆಪ್ಟಿಕಲ್ ಒಗಟುಗಳನ್ನು ವಿವಿಧ ಆಕಾರಗಳು ಮತ್ತು ನೆರಳುಗಳನ್ನು ಮಿಶ್ರಣ ಮಾಡುವ ಮೂಲಕ ಮೆದುಳನ್ನು ಮೋಸಗೊಳಿಸಲು ವಿನ್ಯಾಸಗೊಳಿಸಲಾಗಿದೆ. ನೀವು ಈ ಸವಾಲನ್ನು ಸ್ವೀಕರಿಸಿ ಉತ್ತರ ಹಿಡಿಯಲು ಪ್ರಯತ್ನಿಸಿ.

ಇದನ್ನೂ ಓದಿ
ಈ ಚಿತ್ರದಲ್ಲಿ ಅಡಗಿರುವ ಹಾವನ್ನು 10 ಸೆಕೆಂಡುಗಳಲ್ಲಿ ಕಂಡುಹಿಡಿಯಿರಿ
ಈ ಚಿತ್ರದಲ್ಲಿ ಅಡಗಿರುವ ಗೂಬೆಯನ್ನು ಕಂಡು ಹಿಡಿದ್ರೆ ನೀವು ಜಾಣರು ಎಂದರ್ಥ
ಈ ಚಿತ್ರದಲ್ಲಿ ಅಣಬೆಗಳ ನಡುವೆ ಅಡಗಿರುವ ಇಲಿಯನ್ನು ಕಂಡುಹಿಡಿಯಿರಿ
ಹುಲ್ಲಿನ ನಡುವೆ ಅಡಗಿರುವ ಸಣ್ಣದಾದ ಕಪ್ಪೆಯನ್ನು ಕಂಡುಹಿಡಿಯಿರಿ

ಇದನ್ನೂ ಓದಿ:Optical Illusion: ಈ ಚಿತ್ರದಲ್ಲಿ ಅಡಗಿರುವ ಹಾವನ್ನು 10 ಸೆಕೆಂಡುಗಳಲ್ಲಿ ಕಂಡುಹಿಡಿಯಿರಿ

ಸರಿಯಾದ ಉತ್ತರ ಇಲ್ಲಿದೆ

ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಭ್ರಮೆಯಲ್ಲಿ ಸಿಲುಕಿಸುವ ಕಾರಣ ತಕ್ಷಣವೇ ಉತ್ತರ ಕಂಡುಕೊಳ್ಳುವುದು ಕಷ್ಟಕರ. ಆದರೆ ಮೀನು ಎಲ್ಲಿದೆ ಎಂದು ನಿಮಗೆ ನಾವೇ ಹೇಳುತ್ತೇವೆ. ಈ ಚಿತ್ರದಲ್ಲಿ ಮೀನು ಚಿತ್ರದ ಬಲಭಾಗದಲ್ಲಿದ್ದು, ಮರಗಳ ನಡುವೆ ಸಂಪೂರ್ಣವಾಗಿ ಮರೆ ಮಾಡಲಾಗಿದೆ. ಮೀನು ಎಲ್ಲಿದೆ ಎಂದು ಈ ಮೇಲಿನ ಚಿತ್ರದಲ್ಲಿ ಕೆಂಪು ಬಣ್ಣದಿಂದ ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ