Optical Illusion: ಈ ಚಿತ್ರದಲ್ಲಿ ಅಡಗಿರುವ ಬೆಕ್ಕನ್ನು 10 ಸೆಕೆಂಡುಗಳಲ್ಲಿ ಹುಡುಕಿ, ಇದು ನಿಮಗೆ ಸವಾಲು
ಆಪ್ಟಿಕಲ್ ಇಲ್ಯೂಷನ್ ಹಾಗೂ ಬ್ರೈನ್ ಟೀಸರ್ ಒಗಟಿನ ಚಿತ್ರಗಳನ್ನು ಬಿಡಿಸುತ್ತ ಕುಳಿತರೆ ಟೈಮ್ ಕಳೆದದ್ದೇ ತಿಳಿಯುವುದಿಲ್ಲ. ನಿಮಗೂ ಕೂಡ ಇಂತಹ ಚಿತ್ರಗಳನ್ನು ಬಿಡಿಸುವ ಕ್ರೇಜ್ ಇದ್ರೆ, ಭ್ರಮೆಯನ್ನುಂಟು ಮಾಡುವ ಒಗಟಿನ ಚಿತ್ರಗಳತ್ತ ಕಣ್ಣು ಹಾಯಿಸಿ. ಇದೀಗ ವೈರಲ್ ಆಗಿರುವ ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಬೆಕ್ಕನ್ನು ಮರೆ ಮಾಡಲಾಗಿದೆ. ಹತ್ತು ಸೆಕೆಂಡುಗಳಲ್ಲಿ ಈ ಒಗಟನ್ನು ಬಿಡಿಸಲು ನಿಮ್ಮಿಂದ ಸಾಧ್ಯವೇ ಎಂದು ನೋಡಿ.

ಆಪ್ಟಿಕಲ್ ಇಲ್ಯೂಷನ್ (optical illusion) ಸೇರಿದಂತೆ ಇನ್ನಿತ್ತರ ಒಗಟಿನ ಚಿತ್ರಗಳು ನಮ್ಮ ಮೆದುಳು ಹಾಗೂ ಕಣ್ಣಿಗೆ ದೃಷ್ಟಿ ಸಾಮರ್ಥ್ಯ ಎಷ್ಟಿದೆ ಎಂದು ಪರೀಕ್ಷಿಸಲು ಸಹಾಯ ಮಾಡುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಇಂತಹ ಟ್ರಿಕ್ಕಿ ಒಗಟಿನ ಚಿತ್ರಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇಂತಹ ಒಗಟನ್ನು ಬಿಡಿಸುವುದು ಅಷ್ಟು ಸುಲಭವಲ್ಲ, ಕೆಲವರು ಕ್ಷಣಾರ್ಧದಲ್ಲಿ ಇದಕ್ಕೆ ಉತ್ತರ ಕಂಡುಕೊಳ್ಳುತ್ತಾರೆ. ಎಷ್ಟೇ ಪ್ರಯತ್ನ ಪಟ್ಟರೂ ಕೆಲವರಿಗೆ ಈ ಒಗಟು ಬಿಡಿಸಲು ಸಾಧ್ಯವಾಗಲ್ಲ. ಇದೀಗ ವೈರಲ್ ಆಗಿರುವ ಈ ಚಿತ್ರದಲ್ಲಿ ಮನೆ ಹೊರಾಂಗಣದಲ್ಲಿ ಮರೆ ಮಾಡಲಾಗಿರುವ ಬೆಕ್ಕನ್ನು ಹತ್ತೇ ಹತ್ತು ಸೆಕೆಂಡುಗಳಲ್ಲಿ ಪತ್ತೆ ಹಚ್ಚುವ ಸವಾಲು ನೀಡಲಾಗಿದೆ. ನೀವು ಹದ್ದಿನ ಕಣ್ಣಾಗಿದ್ರೆ ಹಾಗೂ ವೀಕ್ಷಣಾ ಕೌಶಲ್ಯ ಅತ್ಯುತ್ತಮವಾಗಿದ್ರೆ ಸುಲಭವಾಗಿ ಈ ಒಗಟನ್ನು ಬಿಡಿಸಲು ಸಾಧ್ಯ.
ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಏನಿದೆ?
ರೆಡ್ಡಿಟ್‌ನಲ್ಲಿರುವ ಜನಪ್ರಿಯ ಆರ್/ ಫೈಂಡ್ ದಿ ಸ್ನೈಪರ್ (r/FindTheSniper) ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ಚಿತ್ರದಲ್ಲಿ ಮನೆ,ಎರಡು ಕಾರುಗಳು ಹಾಗೂ ಒಂದೆರಡು ಮರಗಳನ್ನು ಒಳಗೊಂಡ ಮನೆಯ ಹೊರಗಿನ ನೋಟವನ್ನು ನೀವು ನೋಡಬಹುದು. ಮೊದಲ ನೋಟದಲ್ಲಿ ಸಾಮಾನ್ಯವಾಗಿ ಕಂಡರೂ ಈ ಚಿತ್ರದಲ್ಲಿ ಎಲ್ಲೋ ಒಂದು ಬೆಕ್ಕು ಅಡಗಿ ಕುಳಿತಿದೆ. ಈ ಬೆಕ್ಕು ಎಲ್ಲಿದೆ ಎಂದು ಪತ್ತೆ ಹಚ್ಚುವ ಸವಾಲನ್ನು ನಿಮಗೆ ನೀಡಲಾಗಿದ್ದು, ಈ ಒಗಟು ಬಿಡಿಸಲು ಇರುವ ಸಮಯ ಅವಕಾಶ 10 ಸೆಕೆಂಡುಗಳು ಮಾತ್ರ ಎನ್ನುವುದು ನೆನಪಿರಲಿ. ಏಕಾಗ್ರತೆಯಿಂದ ಗಮನಹರಿಸಿದ್ರೆ ಮಾತ್ರ ಇದಕ್ಕೆ ಉತ್ತರ ಕಂಡು ಕೊಳ್ಳಲು ಸಾಧ್ಯ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ
Find the cat byu/loubarbarian inFindTheSniper
ಇದನ್ನೂ ಓದಿ
ಇದನ್ನೂ ಓದಿ:Optical Illusion: ಬುದ್ಧಿವಂತರಿಗೊಂದು ಸವಾಲ್; ಈ ಚಿತ್ರದಲ್ಲಿ ಅಡಗಿರುವ ಮೀನನ್ನು ಗುರುತಿಸಿ
ಬೆಕ್ಕು ನಿಮ್ಮ ಕಣ್ಣಿಗೆ ಕಾಣಿಸಿತೇ?
ಮನೆಯ ಹೊರಾಂಗಣದಲ್ಲಿ ಅಡಗಿರುವ ಬೆಕ್ಕನ್ನು ಕಂಡು ಹಿಡಿಯಲು ಸಾಧ್ಯವಾಗುತ್ತಿಲ್ಲವೇ, ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ನಾವೇ ನಿಮಗೆ ಒಗಟು ಬಿಡಿಸಲು ಸುಳಿವು ನೀಡುತ್ತೇವೆ. ಈ ಮರಗಳನ್ನು ಸರಿಯಾಗಿ ಗಮನಿಸಿ, ಇಲ್ಲೇ ಒಂದು ಕಡೆ ಬೆಕ್ಕನ್ನು ಮರೆ ಮಾಡಲಾಗಿದೆ. ನಿಮ್ಮದು ವೀಕ್ಷಣಾ ಸಾಮರ್ಥ್ಯ ಅತ್ಯುತ್ತಮವಾಗಿದ್ರೆ ಬೆಕ್ಕು ನಿಮ್ಮ ಕಣ್ಣಿಗೆ ಕಾಣಿಸುತ್ತದೆ. ಈ ಸುಳಿವು ನೀಡಿದ ಮೇಲೂ ನಿಮಗೆ ಬೆಕ್ಕನ್ನು ಹುಡುಕುವುದು ಕಷ್ಟವಾದರೆ ನಿಮ್ಮನ್ನು ಹೆಚ್ಚು ಹೊತ್ತು ಕಾಯಿಸುವುದಿಲ್ಲ. ಈ ಬೆಕ್ಕು ಕಪ್ಪು ಮತ್ತು ಬಿಳಿ ಬಣ್ಣದಲ್ಲಿದ್ದು, ಈ ಚಿತ್ರದ ಮಧ್ಯಭಾಗದಲ್ಲಿರುವ ಮರದ ಮೇಲೆ ಕುಳಿತಿದೆ. ಬೆಕ್ಕನ್ನು ಕೆಂಪು ಬಣ್ಣದಿಂದ ಗುರುತಿಸಿರುವುದನ್ನು ಈ ಮೇಲಿನ ಚಿತ್ರದಲ್ಲಿ ನೀವು ನೋಡಬಹುದು.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:18 am, Fri, 10 October 25








