AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ರಾವಲ್ಪಿಂಡಿ ಚಿಕನ್ ಟಿಕ್ಕಾ ಮಸಾಲಾದಿಂದ ಮುರಿಡ್ಕೆ ಮೀತಾ ಪಾನ್‌ವರೆಗೆ; ವಾಯುಪಡೆ ದಿನದ ಊಟದ ಮೆನು ವೈರಲ್

ಭಾರತೀಯ ವಾಯುಪಡೆ ದಿನದ 93ನೇ ವಾರ್ಷಿಕೋತ್ಸವದ ಪ್ರಯುಕ್ತ ಊಟದ ಮೆನು ವಿಶಿಷ್ಟತೆಯಿಂದಲೇ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಹೌದು, ಭಯೋತ್ಪಾದನ ನಿಗ್ರಹ ಕಾರ್ಯಾಚರಣೆಗೆ ಗುರಿಯಾಗಿರುವ ಪಾಕಿಸ್ತಾನದ ನಗರಗಳ ಹೆಸರನ್ನು ವಿವಿಧ ಖಾದ್ಯಗಳಿಗೆ ಇಡಲಾಗಿರುವುದು ವಿಶೇಷ. ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ರಾವಲ್ಪಿಂಡಿ ಚಿಕನ್ ಟಿಕ್ಕಾ ಮಸಾಲಾದಿಂದ ಮುರಿಡ್ಕೆ ಮೀತಾ ಪಾನ್‌ವರೆಗೆ; ವಾಯುಪಡೆ ದಿನದ ಊಟದ ಮೆನು ವೈರಲ್
ವೈರಲ್‌ ಪೋಸ್ಟ್‌Image Credit source: Twitter/ Pinterest
ಸಾಯಿನಂದಾ
|

Updated on:Oct 09, 2025 | 3:18 PM

Share

ಸೋಶಿಯಲ್ ಮೀಡಿಯಾದಲ್ಲಿ ಕೆಲವೊಂದು ತಮಾಷೆಯ ವಿಡಿಯೋ ಸೇರಿದಂತೆ ಫೋಟೋ ವೈರಲ್ ಆಗುತ್ತಿರುತ್ತವೆ. ಭಾರತೀಯ ವಾಯುಪಡೆ ದಿನದ (Indian Airforce Day) ಆಚರಣೆಯೊಂದಿಗೆ ಊಟದ ಮೆನು ಎಲ್ಲರ ಗಮನ ಸೆಳೆಯುತ್ತಿದೆ. ಹೌದು, ಅಕ್ಟೋಬರ್ 8 ರಂದು ಐಎಎಫ್‌ನ 93 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ವಿವಿಧ ಭಕ್ಷ್ಯಗಳನ್ನೊಳಗೊಂಡ ಮೆನು (Menu) ಸಖತ್ ವೈರಲ್ ಆಗಿದೆ. ಆಪರೇಷನ್ ಸಿಂಧೂರ್ ದಾಳಿಯ ಸಮಯದಲ್ಲಿ ವಾಯುಪಡೆಯು ಗುರಿಯಾಗಿಸಿಕೊಂಡ ಪಾಕಿಸ್ತಾನದ ನಗರಗಳ ಹೆಸರನ್ನು ಪ್ರತಿಯೊಂದು ಖಾದ್ಯಕ್ಕೂ ಇಡಲಾಗಿರುವುದು ವಿಶೇಷ. ಈ ಊಟದ ಮೆನು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಾಮೆಂಟ್ ಮಾಡಿ ಈ ಕ್ರಿಯೇಟಿವಿಯನ್ನು ಮೆಚ್ಚಿಕೊಂಡಿದ್ದಾರೆ.

ಶಿವ ಅರೂರ್‌ (Shiv Aroor) ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾದ ಈ ಪೋಸ್ಟ್‌ನಲ್ಲಿ ಐಎಎಫ್ ನ 93 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ವಿವಿಧ ಭಕ್ಷ್ಯಗಳನ್ನೊಳಗೊಂಡ ಮೆನುವನ್ನು ಹಂಚಿಕೊಳ್ಳಲಾಗಿದೆ. ಈ ಮೆನುವಿನಲ್ಲಿ ‘ರಾವಲ್ಪಿಂಡಿ’ ಚಿಕನ್ ಟಿಕ್ಕಾ ಮಸಾಲಾ, ‘ರಫಿಕಿ’ ರ್ಹಾರಾ ಮಟನ್, ‘ಭೋಲಾರಿ’ ಪನೀರ್ ಮೇಥಿ ಮಲೈ, ‘ಸುಕ್ಕುರ್’ ಶಾಮ್ ಸವೇರಾ ಕೋಫ್ತಾ, ‘ಸರ್ಗೋಧಾ’ ದಾಲ್ ಮಖಾನಿ, ‘ಜಾಕೋಬಾಬಾದ್’ ಮೇವಾ ಪುಲಾವ್ ಹಾಗೂ ‘ಬಹವಲ್‌ಪುರ್’ ನಾನ್ ಮುಖ್ಯ ಕೋರ್ಸ್‌ಗಳಿವೆ. ಇನ್ನು ಸಿಹಿ ತಿಂಡಿಗಳಾದ ‘ಬಾಲಕೋಟ್’ ತಿರಮಿಸು, ‘ಮುಜಫರಾಬಾದ್’ ಕುಲ್ಫಿ ಫಲೂದಾ ಹಾಗೂ ‘ಮುರಿಡ್ಕೆ’ ಮೀತಾ ಪಾನ್ ಹೀಗೆ ವಿವಿಧ ಖಾದ್ಯಗಳು ಇರುವುದನ್ನು ನೀವು ನೋಡಬಹುದು.

ಇದನ್ನೂ ಓದಿ
Image
ಆನ್ಲೈನ್‌ನಲ್ಲಿ ಆರ್ಡರ್ ಮಾಡಿದ್ದು ಬೆಳ್ಳಿ ನಾಣ್ಯ, ಕೈ ಸೇರಿದ್ದು ಈ ಐಟಮ್ಸ್‌
Image
ಆನ್ಲೈನ್ ಫುಡ್ ದರವು ಶೇ 80 ರಷ್ಟು ಹೆಚ್ಚು
Image
ವಿದ್ಯಾರ್ಥಿ ಭವನದ ಊಟ ಸವಿದು ಪ್ರಾಮಾಣಿಕ ರೇಟಿಂಗ್ಸ್‌ ನೀಡಿದ ವ್ಲಾಗರ್
Image
ಈ ರೆಸ್ಟೋರೆಂಟ್‌ನಲ್ಲಿ ಫುಡ್ ವೇಸ್ಟ್ ಮಾಡಿದ್ರೆ ಬೀಳುತ್ತೆ 20 ರೂ ದಂಡ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಮೋದಿ ಟ್ವೀಟ್ ಇಲ್ಲಿದೆ ನೋಡಿ

ಇದನ್ನೂ ಓದಿ:Video: ಬೆಂಗಳೂರಿನ ವಿದ್ಯಾರ್ಥಿ ಭವನಕ್ಕೆ ತೆರಳಿ ಫುಡ್ ಸವಿದು ಪ್ರಾಮಾಣಿಕ ರೇಟಿಂಗ್ಸ್ ನೀಡಿದ ಅಮೆರಿಕನ್ ವ್ಲಾಗರ್

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಐಎಎಫ್ ಕಾರ್ಯಕ್ರಮ ಆಯೋಜಕರು ಉತ್ತಮ ಹಾಸ್ಯಪ್ರಜ್ಞೆ ಹೊಂದಿದ್ದಾರೆ ಎಂದು ತಮಾಷೆ ಮಾಡಿದ್ದಾರೆ. ಮತ್ತೊಬ್ಬರು, ಈ ತಿಂಗಳ ಖಾದ್ಯ: ರಫೇಲ್ ರಾಬ್ರಿ ಎಂದರೆ, ಇನ್ನೊಬ್ಬರು ತಂದೂರಿ ಶಿವಾನಿ ಇಲ್ಲವೇ ಎಂದು ಕೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:16 pm, Thu, 9 October 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ