Viral: ಯುವಕನ ಪಾಲಿಗೆ ಯಮನಾದ ಆತನೇ ಖರೀದಿಸಿದ ಹೊಸ ಬೈಕ್
ಸಾವು ಯಾವಾಗ ಹೇಗೆ ಬರುತ್ತದೆ ಎಂದು ಹೇಳಲು ಅಸಾಧ್ಯ. ಇಲ್ಲೊಂದು ಆಘಾತಕಾರಿ ಘಟನೆಯೊಂದು ನಡೆದಿದ್ದು, ದಸರಾ ದಿನದಂದು ಖರೀದಿಸಿದ ಹೊಸ ಬೈಕ್ ಯುವಕ ಪಾಲಿಗೆ ಯಮನಾಗಿದೆ. ಸ್ನೇಹಿತನೊಂದಿಗೆ ಮುಂಜಾನೆ ಟಿಫನ್‌ಗೆ ಹೋಗುತ್ತಿದ್ದಂತೆ ವೇಳೆ ಬೈಕ್ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಮುಂದೇನಾಯ್ತು ಎನ್ನುವುದರ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ವಿಶಾಖಪಟ್ಟಣಂ, ಅಕ್ಟೋಬರ್ 09: ಸಾವು ಯಾರನ್ನು ಹೇಳಿ ಕೇಳಿ ಬರುವುದಿಲ್ಲ. ಸಾವು ಹೇಗೆ ಬರುತ್ತೆ ಎಂದು ಹೇಳಲು ಕೂಡಾ ಸಾಧ್ಯವಿಲ್ಲ. ಇಲ್ಲೊಂದು ಅಂತಹದ್ದೇ ಘಟನೆ ನಡೆದಿದ್ದು, ಯುವಕನೊಬ್ಬನು ಹೊಸ ಬೈಕ್ ಖರೀದಿಸಿದ ಖುಷಿಯಲ್ಲಿದ್ದ. ಆದರೆ ಈ ಬೈಕ್ ಯೇ ಆತನ ಜೀವವನ್ನು ಕಸಿದುಕೊಂಡಿದೆ. ಹರೀಶ್ ಎಂಬ ಯುವಕನು ಇಂಟರ್ಮೀಡಿಯೇಟ್ ಮುಗಿಸಿದ್ದು, ಪ್ರಸ್ತುತ ಕೆಲಸದ ಹುಡುಕಾಟದಲ್ಲಿದ್ದ. ಪೋಷಕರ ಮೇಲೆ ಹೊಸ ಬೈಕ್ (New bike) ಖರೀದಿಸುವಂತೆ ಒತ್ತಡ ಹೇರುತ್ತಿದ್ದ. ಮಗನ ಆಸೆಗೆ ಮಣಿದು ದಸರಾದಂದು ಹೊಸ ಬೈಕ್ ತಂದು ಕೊಟ್ಟಿದ್ದಾರೆ. ಆದರೆ ಈ ಯುವಕನ ಖುಷಿಯೂ ಎರಡು ದಿನವು ಉಳಿಯಲಿಲ್ಲ. ಬೆಳಗ್ಗಿನ ವೇಳೆ ದ್ವಾರಕಾನಗರದಿಂದ ಸ್ನೇಹಿತನೊಂದಿಗೆ ಟಿಫನ್‌ಗೆಂದು ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಬೈಕ್ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಹರೀಶ್ ಗಂಭೀರವಾಗಿ ಗಾಯಗೊಂಡಿದ್ದು, ಆ ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಯುವಕ ಮೃತ ಪಟ್ಟಿದ್ದಾನೆ. ಈ ಘಟನೆಯೂ ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯಲ್ಲಿ (Visakhapatnam of Andhra Pradesh) ನಡೆದಿದೆ ಎನ್ನಲಾಗಿದೆ.
ಇಷ್ಟ ಪಟ್ಟು ಹೊಸ ಬೈಕ್ ಖರೀದಿಸಿದ್ದ ಯುವಕ
ಮಹಾರಾಣಿಪೇಟೆಯ ಆಟೋ ಚಾಲಕ ಶ್ರೀನಿವಾಸ್ ಅವರ 19 ವರ್ಷದ ಮಗನೇ ಈ ಹರೀಶ್. ಇಂಟರ್ಮೀಡಿಯೇಟ್ ಮುಗಿಸಿದ್ದು ಹರೀಶ್ ನಿರುದ್ಯೋಗಿಯಾಗಿದ್ದ. ಹೀಗಿರುವಾಗ ಆತನ ಎಲ್ಲಾ ಸ್ನೇಹಿತರು ಬೈಕ್ ಖರೀದಿಸುತ್ತಿದ್ದರಿಂದ ಕಳೆದ ಕೆಲವು ವರ್ಷಗಳಿಂದ ತನ್ನ ಪೋಷಕರ ಮೇಲೆ ಹೊಸ ಬೈಕ್ ಖರೀದಿಸುವಂತೆ ಒತ್ತಡ ಹೇರುತ್ತಿದ್ದ. ಹೀಗಿರುವಾಗ ಬೈಕ್ ಕೊಡಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಕೂಡ ಹಾಕಿದ್ದಾನೆ.
ಇದನ್ನೂ ಓದಿ:Viral: ಮೃತ್ಯುಕೂಪವಾದ ರಸ್ತೆ ಗುಂಡಿ; ಗುಂಡಿ ತಪ್ಪಿಸಲು ಹೋಗಿ ರಸ್ತೆಗೆ ಬಿದ್ದ ಮಹಿಳೆ, ಮೈ ಮೇಲೆ ಹರಿದ ಲಾರಿ
ಯುವಕನನ್ನು ಬಲಿ ಪಡೆದುಕೊಂಡ ಹೊಸ ಬೈಕ್
ಮಗನ ಆಸೆಗೆ ಬೇಡ ಎನ್ನದೇ ಹೆತ್ತವರು 3 ಲಕ್ಷ ರೂ ಸಾಲ ಮಾಡಿ ದಸರಾ ದಿನದಂದು ಹರೀಶ್‌ಗಾಗಿ ಹೊಸ ಬೈಕ್ ಖರೀದಿಸಿ ಕೊಟ್ಟಿದ್ದಾರೆ. ಆದರೆ ಈ ಸಂತೋಷವು ಹರೀಶ್‌ಗೆ ಎರಡು ದಿನವೂ ಉಳಿಯಲಿಲ್ಲ. ಬೈಕ್ ಖರೀದಿಸಿದ ಕೇವಲ ಎರಡು ದಿನಗಳ ನಂತರ ರಸ್ತೆ ಅಪಘಾತದಲ್ಲಿ ಮೃತ ಪಟ್ಟಿದ್ದಾನೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:34 am, Thu, 9 October 25








