AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಬೈಕ್ ಅಲ್ಲ, ಕುದುರೆ ಏರಿ ಬಂದು ಪ್ರವಾಸಿಗರಿಗೆ ಆಹಾರ ತಲುಪಿಸಿದ ಡೆಲಿವರಿ ಬಾಯ್

ಇತ್ತೀಚೆಗಿನ ದಿನಗಳಲ್ಲಿ ಆನ್ಲೈನ್‌ನಲ್ಲಿ ಫುಡ್ ಆರ್ಡರ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ನೀವೇನಾದ್ರೂ ಫುಡ್ ಆರ್ಡರ್ ಮಾಡಿದ್ರೆ ಫುಡ್ ಡೆಲಿವರಿ ಬಾಯ್ ಬೈಕ್‌ನಲ್ಲಿ ಬಂದು ಫುಡ್ ಡೆಲಿವರಿ ಮಾಡುತ್ತಾರೆ. ಆದರೆ ಇಲ್ಲೊಬ್ಬ ಆಹಾರ ವಿತರಣಾ ಸಿಬ್ಬಂದಿಯೂ ಕುದುರೆ ಏರಿ ಬಂದು ಪ್ರವಾಸಿಗರಿಗೆ ಪಾರ್ಸಲ್ ನೀಡಿದ್ದಾರೆ. ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರು ಇವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Video: ಬೈಕ್ ಅಲ್ಲ, ಕುದುರೆ ಏರಿ ಬಂದು ಪ್ರವಾಸಿಗರಿಗೆ ಆಹಾರ ತಲುಪಿಸಿದ ಡೆಲಿವರಿ ಬಾಯ್
ಆಹಾರ ತಲುಪಿಸಲು ಕುದುರೆ ಏರಿ ಬಂದ ಡೆಲಿವರಿ ಬಾಯ್Image Credit source: Instagram
ಸಾಯಿನಂದಾ
|

Updated on:Oct 10, 2025 | 1:26 PM

Share

ಚೀನಾ, ಅಕ್ಟೋಬರ್ 10: ಹೆಚ್ಚಿನವರು ಆಹಾರದಿಂದ ಹಿಡಿದು ಪ್ರತಿಯೊಂದು ವಸ್ತುಗಳನ್ನು ಆನ್ಲೈನ್‌ನಲ್ಲೇ ಆರ್ಡರ್ ಮಾಡುತ್ತಾರೆ. ರೆಸ್ಟೋರೆಂಟ್‌ಗಳಿಂದ ಹೋಗಿ ಫುಡ್ ಆರ್ಡರ್ ಮಾಡುವುದಕ್ಕೆ ಹೋಲಿಸಿದರೆ, ಆನ್ಲೈನ್ ಫುಡ್ ಆರ್ಡರ್ (Food delivery) ಮಾಡುವವರ ಸಂಖ್ಯೆ ಹೆಚ್ಚಿದೆ. ಸಾಮಾನ್ಯವಾಗಿ ಡೆಲಿವರಿ ಬಾಯ್ ಪಾರ್ಸಲ್ ನೀಡಲು ಬೈಕ್ ಅಥವಾ ಸೈಕಲ್ ಬಳಸುವುದನ್ನು ನೀವು ನೋಡಿರುತ್ತೀರಿ. ಆದರೆ ಡೆಲಿವರಿ ಬಾಯ್ ಕುದುರೆ ಏರಿ ಬಂದು ಪ್ರವಾಸಿಗರು ಫುಡ್ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಘಟನೆ ಚೀನಾದಲ್ಲಿ (China) ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಆಹಾರ ತಲುಪಿಸಲು ಈ ಡೆಲಿವರಿ ಬಾಯ್ ಮಾಡಿದ್ದೇನು?

ಪ್ರವಾಸಿಗರು ಇದ್ದದ್ದು ವಿಶಾಲವಾದ ಹುಲ್ಲುಗಾವಲಿನಲ್ಲಿ ಪ್ರದೇಶದಲ್ಲಾದ ಕಾರಣ ಡೆಲಿವರಿ ಬಾಯ್ ಫುಡ್ ತಲುಪಿಸಲು ಈ ರೀತಿ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಹೌದು, ವಿಶಾಲವಾದ ಹುಲ್ಲುಗಾವಲಿನಲ್ಲಿ ಟ್ರಿಪ್ ಎಂಜಾಯ್ ಮಾಡುತ್ತಿದ್ದ ಪ್ರವಾಸಿಗರು ಫುಡ್ ಆರ್ಡರ್ ಮಾಡಿದ್ದಾರೆ. ಆದರೆ ಆ ಜಾಗಕ್ಕೆ ಬೈಕ್‌ ಅಥವಾ ಸೈಕಲ್‌ ಮೇಲೆ ಹೋಗಲು ಸಾಧ್ಯವಿಲ್ಲ ಎನ್ನುವುದು ಆಹಾರ ವಿತರಣಾ ಸಿಬ್ಬಂದಿಗೆ ಅರಿವಾಗಿದೆ. ಈ ವೇಳೆಯಲ್ಲಿ ಆರ್ಡರ್‌ ಕ್ಯಾನ್ಸಲ್‌ ಮಾಡುವ ಬದಲು ತಮ್ಮ ಬುದ್ಧಿ ಉಪಯೋಗಿಸಿದ್ದಾರೆ. ಬೈಕ್ ಬದಲಾಗಿ ಕುದುರೆ ಮೇಲೆ ತೆರಳಿ ಆರ್ಡರ್ ತಲುಪಿಸಿದ್ದಾರೆ.

ಇದನ್ನೂ ಓದಿ
Image
ಆನ್ಲೈನ್‌ನಲ್ಲಿ ಆರ್ಡರ್ ಮಾಡಿದ್ದು ಬೆಳ್ಳಿ ನಾಣ್ಯ, ಕೈ ಸೇರಿದ್ದು ಈ ಐಟಮ್ಸ್‌
Image
ಆನ್ಲೈನ್ ಫುಡ್ ದರವು ಶೇ 80 ರಷ್ಟು ಹೆಚ್ಚು
Image
ಈ ರೆಸ್ಟೋರೆಂಟ್‌ನಲ್ಲಿ ಫುಡ್ ವೇಸ್ಟ್ ಮಾಡಿದ್ರೆ ಬೀಳುತ್ತೆ 20 ರೂ ದಂಡ
Image
ಪಾರ್ಸೆಲ್ ನೀಡಲು ಬಂದ ಪೋಸ್ಟ್ ಮ್ಯಾನ್ ಮಾಡಿದ ಕೆಲಸಕ್ಕೆ ವಿದೇಶಿ ಮಹಿಳೆ ಫಿದಾ

ವೈರಲ್ ವಿಡಿಯೋ ಇಲ್ಲಿದೆ ನೋಡಿ

View this post on Instagram

A post shared by CGTN (@cgtn)

cgtn ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ ಆಹಾರ ವಿತರಣಾ ಸಿಬ್ಬಂದಿಯೊಬ್ಬರು ಹುಲ್ಲುಗಾವಲಿನ ಪ್ರದೇಶದಲ್ಲಿ ಕುದುರೆ ಮೇಲೆ ಸವಾರಿ ಮಾಡಿ ಪ್ರವಾಸಿಗರಿಗೆ ಆರ್ಡರ್ ಮಾಡಿದ್ದ ಫುಡ್ ತಲುಪಿಸುತ್ತಿರುವುದನ್ನು ಕಾಣಬಹುದು. ಕಾರಿನಲ್ಲಿ ಹೋಗುತ್ತಿದ್ದ ಪ್ರವಾಸಿಗರಿಗೆ ತನ್ನ ಕೈಯಲ್ಲಿದ್ದ ಫುಡ್ ನೀಡಿದ್ದಾರೆ.

ಇದನ್ನೂ ಓದಿ: Viral: ಆನ್ಲೈನ್‌ನಲ್ಲಿ ಆರ್ಡರ್ ಮಾಡಿದ್ದು ಸಿಲ್ವರ್ ಕಾಯಿನ್‌; ಆದ್ರೆ ಮನೆಗೆ ಬಂದದ್ದು ಮಾತ್ರ ಮ್ಯಾಗಿ, ಮಿಕ್ಸ್ಚರ್ ಪ್ಯಾಕೆಟ್

ಈ ವಿಡಿಯೋ ಹನ್ನೊಂದು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು ಒಬ್ಬ ಬಳಕೆದಾರ ಡೆಲಿವರಿ ಸರ್ವಿಸ್ ಮತ್ತೊಂದು ಹಂತಕ್ಕೆ ತಲುಪಿದೆ ಎಂದಿದ್ದಾರೆ. ಮತ್ತೊಬ್ಬರು ಕೆಲಸದ ಮೇಲಿನ ನಿಯತ್ತು, ಶ್ರದ್ಧೆ ಇದರಲ್ಲಿಯೇ ವ್ಯಕ್ತವಾಗುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರ ಪ್ರತಿ ಸಮಸ್ಯೆಗೂ ಪರಿಹಾರವಿದೆ, ಈ ಡೆಲಿವರಿ ಬಾಯ್ ಎಷ್ಟು ಚೆನ್ನಾಗಿ ತಲೆಉಪಯೋಗಿಸಿದ್ದಾರೆ ನೋಡಿ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:25 pm, Fri, 10 October 25