AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದು ದಾಖಲೆಯ ಜನನ, 5.8 ಕೆಜಿ ತೂಕದ ಮಗುವಿಗೆ ಜನ್ಮ ನೀಡಿದ ಫ್ಲೋರಿಡಾ ಮಹಿಳೆ

5.8 ಕೆಜಿ ತೂಕದ ಮಗುವಿಗೆ ಜನ್ಮ ನೀಡಿ, ವಿಶ್ವವನ್ನೇ ಅಚ್ಚರಿ ಪಡುವಂತೆ ಮಾಡಿದೆ. ಫ್ಲೋರಿಡಾ ಮಹಿಳೆಯೊಬ್ಬರು 5.8 ಕೆಜಿ ತೂಕದ ಮಗುವಿಗೆ ಜನ್ಮ ನೀಡಿದ್ದಾರೆ. ಟೆನ್ನೆಸ್ಸೀಯ ನ್ಯಾಶ್ವಿಲ್ಲೆಯ ಶೆಲ್ಬಿ ಮಾರ್ಟಿನ್ ಎಂಬುವರು ಇತ್ತೀಚೆಗೆ ಈ ದೈತ್ಯ ಆಕಾರದ ಮಗುವಿಗೆ ಜನ್ಮ ನೀಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ.

ಇದು ದಾಖಲೆಯ ಜನನ, 5.8 ಕೆಜಿ ತೂಕದ ಮಗುವಿಗೆ ಜನ್ಮ ನೀಡಿದ ಫ್ಲೋರಿಡಾ ಮಹಿಳೆ
ವೈರಲ್​​ ಪೋಸ್ಟ್
ಅಕ್ಷಯ್​ ಪಲ್ಲಮಜಲು​​
|

Updated on:Oct 10, 2025 | 5:05 PM

Share

ಫ್ಲೋರಿಡಾ ಮಹಿಳೆಯೊಬ್ಬರು (Florida Woman) 5.8 ಕೆಜಿ ತೂಕದ ಮಗುವಿಗೆ ಜನ್ಮ ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗುತ್ತಿದೆ. ಇದೀಗ ಈ ಮಗುವನ್ನು ವಿಶ್ವದ ಅತ್ಯಂತ ದೈತ್ಯ ಗಾತ್ರದ ಮಗು ಎಂದು ಹೇಳಲಾಗಿದೆ. ಟೆನ್ನೆಸ್ಸೀಯ ನ್ಯಾಶ್ವಿಲ್ಲೆಯ ಶೆಲ್ಬಿ ಮಾರ್ಟಿನ್ ಎಂಬುವರು ಇತ್ತೀಚೆಗೆ ಈ ದೈತ್ಯ ಆಕಾರದ ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಚಾರ ತಿಳಿದು ಸೋಶಿಯಲ್​​ ಮೀಡಿಯಾ ಬಳಕೆದಾರರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಹಾಸ್ಯವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಇದೊಂದು ಅಸಾಧರಣ ಗಾತ್ರದ ಮಗು, ಜನನದಲ್ಲಿ ನೈಸರ್ಗಿಕ ವ್ಯತ್ಯಾಸದಿಂದ ಈ ಮಗುವಿನ ಜನ್ಮ ಆಗಿದೆ. ಹೆರಿಗೆಯ ಸಮಯದಲ್ಲಿ ತಾಯಂದಿರಿಗೆ ಅಗತ್ಯವಿರುವ ಶಕ್ತಿ ಹಾಗೂ ಸರಿಯಾದ ಅರೋಗ್ಯ ಕಾಳಜಿ ಬೇಕಾಗುತ್ತದೆ. ಮಗುವಿನ ಪಾಲನೆ ಹಾಗೂ ಅದರ ಕಾಳಜಿಯ ಬಗ್ಗೆ ತಾಯಿ ಸೇವೆಯನ್ನು ಮೆಚ್ಚಲೇಬೇಕು. ಹಾಗೂ ವೈದ್ಯರ ಪ್ರಯತ್ನಕ್ಕೆ ಶ್ಲಾಘನೆ ಮಾಡಲೇಬೇಕು ಎಂದು ಅನೇಕರು ಕಮೆಂಟ್​​ ಮಾಡಿದ್ದಾರೆ.

ಶೆಲ್ಬಿ ಮಾರ್ಟಿನ್ ತಮ್ಮ ಹೆರಿಗೆಗೂ ಮುನ್ನ ದೊಡ್ಡ ಹೊಟ್ಟೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿತ್ತು, ಹಾಗೂ ಕೆಲವೊಂದು ತಮಾಷೆಯ ಕಮೆಂಟ್ ಕೂಡ ಬಂದಿತ್ತು. ಈ ವಿಡಿಯೋ 4.4 ಮಿಲಿಯನ್‌ಗಿಂತಲೂ ಹೆಚ್ಚು ಲೈಕ್‌ಗಳು ಮತ್ತು ಹತ್ತು ಸಾವಿರ ಕಾಮೆಂಟ್‌ಗಳನ್ನು ಗಳಿಸಿತು, ಹಲವು ಬಳಕೆದಾರರು ಈ ವಿಡಿಯೋಗೆ ಕಮೆಂಟ್​​ ಮಾಡಿದ್ದರು. ನೀವು ದೊಡ್ಡ ಮಗುವನ್ನು ಪಡೆಯುತ್ತೀರ ಎಂದು ಹೇಳಿದ್ದಾರೆ. ನಂತರದಲ್ಲಿ ಶೆಲ್ಬಿ ಮಾರ್ಟಿನ್ ಹೊಟ್ಟೆಯಲ್ಲಿರುವ ಮಗುವಿನ ಗಾತ್ರದ ಒಂದು ಫೋಟೋವನ್ನು ಕೂಡ ಹಂಚಿಕೊಂಡಿದ್ದರು. ಈ ಫೋಟೋಗೂ ಬಳಕೆದಾರರು ಕಮೆಂಟ್​ ಮಾಡಿದ್ದರು, ಮಗು ಎಷ್ಟು ಸಮಯದಿಂದ ಒಳಗೆ ಇತ್ತು ಅಥವಾ ಅದು ಹೇಗೆ ಹುಟ್ಟಿರಬಹುದು ಎಂಬೆಲ್ಲ ಪ್ರಶ್ನೆಯನ್ನು ಕೇಳಿದರು.

ಇದನ್ನೂ ಓದಿ :  ಬೈಕ್ ಅಲ್ಲ, ಕುದುರೆ ಏರಿ ಬಂದು ಪ್ರವಾಸಿಗರಿಗೆ ಆಹಾರ ತಲುಪಿಸಿದ ಡೆಲಿವರಿ ಬಾಯ್

ದಿ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿರುವ ಪ್ರಕಾರ, ಶೆಲ್ಬಿಯ ನವಜಾತ ಮಗ ಕ್ಯಾಸಿಯನ್, ಸಿ-ಸೆಕ್ಷನ್ ಮೂಲಕ ಜನಿಸಿದೆ. ಈ ವೇಳೆ ಮಗು 5.8 ಕೆಜಿ ತೂಕ ಹೊಂದಿದೆ ಎಂದು ಹೇಳಲಾಗಿದೆ. ಇನ್ನು ಈ ಮಗುವನ್ನು ಮೂರು ಮಕ್ಕಳ ಗಾತ್ರಕ್ಕೆ ಹೊಲಿಸಿದ್ದಾರೆ. ಆಸ್ಪತ್ರೆಯ ವೈದ್ಯರು ಕೂಡ ಈ ಮಗುವನ್ನು ಕಂಡು ಅಚ್ಚರಿಗೊಂಡಿದ್ದಾರೆ. ಈ ಮಗುವಿನ ಆರೋಗ್ಯ ಮೇಲ್ವಿಚಾರಣೆಗಾಗಿ ಐಸಿಯುನಲ್ಲಿ ಇಡಬೇಕಾಗಿತ್ತು. ಜತೆಗೆ ಮಗುವಿಗೆ ಮಾಡಬೇಕಾದ ಎಲ್ಲ ಆರೋಗ್ಯ ತಪಾಸಣೆಯನ್ನು ಕೂಡ ಮಾಡಲಾಗಿದೆ. ಮಗುವಿಗೆ ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ಹೇಳಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:04 pm, Fri, 10 October 25