ಇಂದಿನ ಆಪ್ಟಿಕಲ್ ಇಲ್ಯೂಷನ್(Optical Illusions) ಸವಾಲಿನ ಆಟದಲ್ಲಿ ನೀವು ಸಂಖ್ಯೆ 3ರನ್ನು ಪತ್ತೆ ಹಚ್ಚಬೇಕಿದೆ. ನಿಮ್ಮ ಮೆದುಳಿಗೆ ಮತ್ತು ಕಣ್ಣಿಗೆ ಸವಾಲು ನೀಡುವ ಈ ಫೋಟೋದಲ್ಲಿ ಸಂಖ್ಯೆ 3ರನ್ನು ಪತ್ತೆಹಚ್ಚುವುದು ಅಷ್ಟು ಸುಲಭವಲ್ಲ. ಹದ್ದಿನ ಕಣ್ಣು ನಿಮ್ಮದಾಗಿದ್ದರೆ ಕೇವಲ 10 ಸೆಕೆಂಡುಗಳ ಒಳಗೆ ನೀವು ಸಂಖ್ಯೆ 3ರನ್ನು ಪತ್ತೆ ಹಚ್ಚುವಿರಿ. ಸವಾಲನ್ನು ಸ್ವೀಕರಿಸಲು ನೀವು ಸಿದ್ದವೇ? ಹಾಗಿದ್ದರೆ ಕೇವಲ 10 ಸೆಕೆಂಡುಗಳ ಒಳಗೆ 8ರ ಮಧ್ಯೆ ಅಡಗಿರುವ ಸಂಖ್ಯೆ 3ರನ್ನು ಪತ್ತೆ ಹಚ್ಚಿ
ಈ ಸವಾಲಿನ ಆಟವನ್ನು ಆಡುವ ಮೂಲಕ ಮೆದುಳಿನ ಕಾರ್ಯ ಮತ್ತು ಕಣ್ಣಿನ ದೃಷ್ಟಿ ಸುಧಾರಿಸುತ್ತದೆ. ಮೆದುಳು ಕ್ರಿಯಾಶೀಲವಾಗುವುದಲ್ಲದೆ, ಒತ್ತಡ, ಆತಂಕದಂತಹ ಸಮಸ್ಯೆಗಳಿಂದ ಮುಕ್ತಿ ಪಡೆಯಲು ನೆರವಾಗುತ್ತದೆ. ನಿಜವಾದ ಸವಾಲೇನೆಂದರೆ ಕಡಿಮೆ ಸಮಯದಲ್ಲಿ ಉತ್ತರವನ್ನು ಕಂಡುಹಿಡಿಯುವುದು.
ಇದನ್ನೂ ಓದಿ: 7 ಸೆಕೆಂಡುಗಳಲ್ಲಿ ಚಿತ್ರದಲ್ಲಿ ಅಡಗಿರುವ 2 ಬೆಕ್ಕುಗಳನ್ನು ಹುಡುಕಬಲ್ಲಿರಾ?
ಮೇಲೆ ನೀಡಿರುವ ಫೋಟೋದಲ್ಲಿ ಸಾಕಷ್ಟು 8ನಂಬರ್ಗಳನ್ನು ಕಾಣಬಹುದು. ಆದರೆ ಅಷ್ಟೂ 8 ನಂಬರ್ಗಳ ನಡುವೆ ಅಡಗಿರುವ ಒಂದೇ ಒಂದು ಸಂಖ್ಯೆ 3 ರನ್ನು ಎಲ್ಲಿದೆ ಎಂದು ನೀವು ಗುರುತಿಸಬೇಕಿದೆ. ನೀವು ಅತಿ ಕಡಿಮೆ ಸಮಯದಲ್ಲಿ ಪತ್ತೆ ಹಚ್ಚಿದರೆ ನಿಮ್ಮ ಮಿದುಳಿನ ಕಾರ್ಯ ಮತ್ತು ದೃಷ್ಟಿ ಚುರುಕಾಗುತ್ತದೆ ಎನ್ನುತ್ತಾರೆ ತಜ್ಞರು.
ಎಷ್ಟೇ ಹುಡುಕಿದರೂ ನಂಬರ್ 3ರನ್ನು ಪತ್ತೆ ಹಚ್ಚಲು ಸಾಧ್ಯವಿಲ್ಲವೆಂದಾದರೆ ಈ ಕೆಳಗೆ ನೀಡೆಲಾದ ಚಿತ್ರದಲ್ಲಿ ಸಂಖ್ಯೆ 3 ಎಲ್ಲಿದೆ ಎಂಬುದನ್ನು ಗುರುತಿಸಲಾಗಿದೆ.
ಅಂದಹಾಗೆ, ಇಂದಿನ ಸವಾಲಿನ ಆಟ ನಿಮಗೆ ಹೇಗಾನಿಸಿತು, ನಿಮಗೆ ಇಷ್ಟವಾಯಿತೆ? ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ