Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವ್ಯಕ್ತಿ ಕಾರು ಓಡಿಸುವಾಗಲೂ ಹೆಲ್ಮೆಟ್ ಧರಿಸುತ್ತಾರೆ; ಇಲ್ಲಿದೆ ಕಾರಣ

ಬೈಕ್ ಓಡಿಸುವಾಗ ನಮ್ಮ ಸುರಕ್ಷತೆಗಾಗಿ ಹೆಲ್ಮೆಟ್ ಧರಿಸುವುದು ಕಡ್ಡಾಯ. ಬೈಕ್​ನಲ್ಲಿ ಓಡಾಡುವಾಗ ಹೆಲ್ಮೆಟ್ ಹಾಕಿಕೊಳ್ಳದಿದ್ದರೆ ದಂಡ ವಿಧಿಸಲಾಗುತ್ತದೆ. ಆದರೆ, ಕಾರಿನಲ್ಲಿ ಓಡಾಡುವಾಗಲೂ ಹೆಲ್ಮೆಟ್ ಹಾಕಿಕೊಳ್ಳುವವರನ್ನು ಎಲ್ಲಾದರೂ ನೋಡಿದ್ದೀರಾ? ಉತ್ತರ ಪ್ರದೇಶದ ವ್ಯಕ್ತಿಯೊಬ್ಬರು ಕಾರ್​ನಲ್ಲಿ ಓಡಾಡುವಾಗಲೂ ಹೆಲ್ಮೆಟ್ ಧರಿಸುತ್ತಾರೆ.

ಈ ವ್ಯಕ್ತಿ ಕಾರು ಓಡಿಸುವಾಗಲೂ ಹೆಲ್ಮೆಟ್ ಧರಿಸುತ್ತಾರೆ; ಇಲ್ಲಿದೆ ಕಾರಣ
ಹೆಲ್ಮೆಟ್
Follow us
ಸುಷ್ಮಾ ಚಕ್ರೆ
|

Updated on: May 16, 2024 | 11:25 AM

ದ್ವಿಚಕ್ರ ಸವಾರರಿಗೆ ಹೆಲ್ಮೆಟ್ (Helmet) ಕಡ್ಡಾಯವಾಗಿದೆ. ಆದರೆ, ಕಾರಿನಲ್ಲಿ ಓಡಾಡುವಾಗಲೂ ಹೆಲ್ಮೆಟ್ ಹಾಕಿಕೊಳ್ಳುವವರನ್ನು ಎಲ್ಲಾದರೂ ನೋಡಿದ್ದೀರಾ? ಹೆಲ್ಮೆಟ್ ಇಲ್ಲದೆ ಆಡಿ ಕಾರನ್ನು ಚಲಾಯಿಸಿದ ಆರೋಪದ ಮೇಲೆ ಉತ್ತರ ಪ್ರದೇಶದ ಸಂಚಾರ ಪೊಲೀಸರು ವ್ಯಕ್ತಿಯೊಬ್ಬನಿಗೆ 1,000 ರೂ. ದಂಡ ವಿಧಿಸಿದ್ದಾರೆ. ಇದಕ್ಕೆ ಕಾರಣವೇನು? ಎಂಬ ಕುರಿತು ಮಾಹಿತಿ ಇಲ್ಲಿದೆ.

ಎನ್‌ಡಿಟಿವಿ ವರದಿಯ ಪ್ರಕಾರ, ಉತ್ತರ ಪ್ರದೇಶದ ಝಾನ್ಸಿ ನಿವಾಸಿ ಬಹದ್ದೂರ್ ಸಿಂಗ್ ಪರಿಹಾರ್ ಅವರಿಗೆ ಚಲನ್ ನೀಡಲಾಗಿದೆ. ತನಗೆ ದಂಡ ವಿಧಿಸಿರುವುದು ಏಕೆಂದು ತಿಳಿಯದೆ ವೆಬ್‌ಸೈಟ್‌ ಅನ್ನು ಪರಿಶೀಲಿಸಿದ ನಂತರ ಅವರು ಆಡಿ ಕಾರು ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸದ ಕಾರಣ ದಂಡ ವಿಧಿಸಲಾಗಿದೆ ಎಂಬುದು ಗೊತ್ತಾಗಿದೆ.

ಇದನ್ನೂ ಓದಿ: ಪ್ರೀತಿ ವಿಚಾರ: ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿಯನ್ನು ರಕ್ಷಿಸಿದ ಪೊಲೀಸರು

ಬಹದ್ದೂರ್ ಸಿಂಗ್ ಪರಿಹಾರ್ ಅವರು ಟ್ರಕ್ಕರ್ಸ್ ಯೂನಿಯನ್ ಅಧ್ಯಕ್ಷರಾಗಿದ್ದಾರೆ. ಅವರು ತಮ್ಮ ಫೋನ್‌ನಲ್ಲಿ ತಮ್ಮ ಚಲನ್ ಕುರಿತು ಅಪ್‌ಡೇಟ್ ಪಡೆದರು. ತನ್ನ ಚಲನ್‌ಗೆ ಕಾರಣವನ್ನು ತಿಳಿದಾಗಿನಿಂದ ಬಹದ್ದೂರ್ ತನ್ನ ಕಾರನ್ನು ಚಾಲನೆ ಮಾಡುವಾಗಲೂ ಹೆಲ್ಮೆಟ್ ಧರಿಸುತ್ತಿದ್ದಾರೆ. ಆ ಚಲನ್ ದ್ವಿಚಕ್ರ ವಾಹನದ ಫೋಟೋವನ್ನು ಒಳಗೊಂಡಿದ್ದರೆ, ಅದರಲ್ಲಿ ಉಲ್ಲೇಖಿಸಲಾದ ವಾಹನ ವರ್ಗದಲ್ಲಿ ‘ಕಾರು’ ಎಂದು ನಮೂದಿಸಲಾಗಿದೆ.

ಆ ಚಲನ್ ಅನ್ನು ತಪ್ಪಾದ ಕಾರಣಗಳಿಗಾಗಿ ನೀಡಲಾಗಿದೆ ಎಂಬುದು ಸ್ಪಷ್ಟವಾಗಿದ್ದರೂ, ಈ ಸಮಸ್ಯೆಯನ್ನು ಪರಿಹರಿಸಲು ಬಹದ್ದೂರ್ ಸಿಂಗ್ ಪರಿಹಾರ್ 2024ರ ಲೋಕಸಭಾ ಚುನಾವಣೆಯ ಮುಕ್ತಾಯಕ್ಕೆ ಕಾಯಬೇಕಾಗಿದೆ. ದಂಡವನ್ನು ಸ್ವೀಕರಿಸಿದ ನಂತರ ಬಹದ್ದೂರ್ ಅವರು ಪೊಲೀಸ್ ಅಧಿಕಾರಿಗಳೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸಿದರು. ಆದರೆ, ಸಾರ್ವತ್ರಿಕ ಚುನಾವಣೆ ನಂತರ ಈ ಬಗ್ಗೆ ಪರಿಶೀಲಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಮಧ್ಯಪ್ರದೇಶ: ಇಂದೋರ್-ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿದ್ದ ಟ್ರಕ್​ಗೆ ಕಾರು ಡಿಕ್ಕಿ, 8 ಮಂದಿ ಸಾವು

ಟ್ರಾಫಿಕ್ ಪೊಲೀಸ್ ಪ್ರಾಧಿಕಾರವು ಚುನಾವಣೆಯ ನಂತರ ಸಮಸ್ಯೆಯನ್ನು ಪರಿಹರಿಸುವುದರಿಂದ, ಪರಿಹಾರ್‌ಗೆ ಹೆಲ್ಮೆಟ್ ಧರಿಸಿ ಕಾರು ಓಡಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. ತಪ್ಪು ಚಲನ್ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳದ ಕಾರಣ, ದಂಡವನ್ನು ತಪ್ಪಿಸಲು ಪರಿಹಾರ್ ತನ್ನ ಕಾರನ್ನು ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸಲು ಆಯ್ಕೆ ಮಾಡಿಕೊಂಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ