PM Modi Interview: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಭಾರತ ರಾಜಕೀಯದ ಎಲ್ಲಾ ದಾಖಲೆಗಳ ಮುರಿಯಲಿದೆ: ಮೋದಿ

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಭಾರತದ ಎಲ್ಲಾ ರಾಜಕೀಯ ದಾಖಲೆಗಳನ್ನು ಮುರಿಯಲಿದೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈಗಾಗಲೇ ನಾಲ್ಕು ಹಂತದ ಮತದಾನ ಮುಗಿದಿದ್ದು ಐದನೇ ಹಂತದ ಮತದಾನಕ್ಕೆ ದಿನಗಣನೆ ಆರಂಭವಾಗಿದೆ. ಈ ನಡುವೆ ಪ್ರಧಾನಿ ಮೋದಿ ಟಿವಿ9 ನೆಟ್​ವರ್ಕ್​ಗೆ ನೀಡಿದ ಸಂದರ್ಶನ ಇಲ್ಲಿದೆ.

PM Modi Interview: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಭಾರತ ರಾಜಕೀಯದ ಎಲ್ಲಾ ದಾಖಲೆಗಳ ಮುರಿಯಲಿದೆ: ಮೋದಿ
ನರೇಂದ್ರ ಮೋದಿ
Follow us
|

Updated on: May 16, 2024 | 10:43 AM

ಲೋಕಸಭಾ ಚುನಾವಣೆ(Lok Sabha Election) ಆರಂಭಗೊಂಡಿದ್ದು, ನಾಲ್ಕು ಹಂತದ ಮತದಾನಗಳು ಮುಕ್ತಾಯಗೊಂಡಿದ್ದು ಐದನೇ ಹಂತಕ್ಕೆ ಸಿದ್ಧತೆ ಆರಂಭಗೊಂಡಿದೆ. ಚುನಾವಣಾ ಫಲಿತಾಂಶದ ಕುರಿತು ಪ್ರಧಾನಿ ನರೇಂದ್ರ ಮೋದಿ(Narendra Modi) ಭರವಸೆ ವ್ಯಕ್ತಪಡಿಸಿದ್ದು ಟಿವಿ9 ನೆಟ್​ವರ್ಕ್​ಗೆ ನೀಡಿದ ಸಂದರ್ಶನದ ಆಯ್ದ ಪ್ರಶ್ನೆಗಳು, ಮೋದಿ ಉತ್ತರಗಳು ಇಲ್ಲಿವೆ.

ನಾಲ್ಕು ಹಂತದ ಚುನಾವಣೆ ಮುಗಿದ ಬಳಿಕ ಗೆಲುವಿನ ಬಗೆಗಿನ ನಿಮ್ಮ ಅಭಿಪ್ರಾಯ ಬದಲಾಗಿದೆಯೇ? ಪ್ರತಿಪಕ್ಷಗಳು 200 ಎಂದು ಹೇಳಿದರೆ ನೀವು 400 ಸ್ಥಾನಗಳು ಎಂದು ಹೇಳುತ್ತಿದ್ದೀರಾ ಎನ್ನುವ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಪ್ರಧಾನಿ ಮೋದಿ ಮಾತನಾಡಿ, ನಾಲ್ಕು ಹಂತಗಳ ಚುನಾವಣೆ ಮುಗಿದಿದೆ, ಮೊದಲ ಹಂತದಲ್ಲಿ ಪ್ರತಿಪಕ್ಷಗಳು ಮೊದಲು ಇದ್ದಂತೆ ಕಂಡರೂ ಎರಡು, ಮೂರು, ನಾಲ್ಕನೇ ಹಂತಕ್ಕೆ ಬರುವಷ್ಟೊತ್ತಿಗೆ ಕಾಣೆಯಾಗಿದ್ದಾರೆ. ಈ ಬಾರಿ ಜನಾದೇಶ ಉತ್ತಮವಾಗಿರಲಿದೆ. ಬಿಜೆಪಿ 400 ಕ್ಕೂ ಹೆಚ್ಚು ಸ್ಥಾನಗಳಿಂದ ಎನ್‌ಡಿಎ ಮೈತ್ರಿಕೂಟಕ್ಕೆ ಭರ್ಜರಿ ಜಯವನ್ನು ನೀಡಲಿದೆ ಮತ್ತು ಬಿಜೆಪಿ ತನ್ನ ಎಲ್ಲಾ ಹಳೆಯ ದಾಖಲೆಗಳನ್ನು ಮುರಿಯಲಿದೆ ಮತ್ತು ಭಾರತೀಯ ರಾಜಕೀಯದ ಎಲ್ಲಾ ದಾಖಲೆಗಳನ್ನು ಸಹ ಮುರಿಯಲಿದೆ ಎಂದರು.

ನಿಮ್ಮಲ್ಲಿರುವುದು ಗೆಲ್ಲುತ್ತೇವೆ ಎನ್ನುವ ನಂಬಿಕೆಯೇ ಅಥವಾ ಅತಿಯಾದ ಆತ್ಮವಿಶ್ವಾಸವೇ? ಈ ವಿಶ್ವಾಸ ಅಥವಾ ಅತಿಯಾದ ಆತ್ಮವಿಶ್ವಾಸ ಮೋದಿಯವರದ್ದಲ್ಲ, ದೇಶದ ಜನರೇ ಮಾತನಾಡುತ್ತಿದ್ದಾರೆ, ನಾನು ಜನರನ್ನು ದೇವರ ರೂಪ ಎಂದು ಪರಿಗಣಿಸುತ್ತೇನೆ, ಅವರ ಮಾತಿನಲ್ಲಿ ಶಕ್ತಿಯಿದೆ ಎಂದರು.

ಪವಾರ್ ಹಾಗೂ ಠಾಕ್ರೆಯವರ ಮನೆ ಲೂಟಿ ಮಾಡಿರುವ ಆರೋಪಕ್ಕೆ ಏನಂತೀರಾ? ನೀವು ಇರುವಾಗಲೇ ನಿಮ್ಮ ಮನೆ ಲೂಟಿಯಾಗಿದೆ ಎಂದರೆ ನಿಮ್ಮ ಮನೆಯನ್ನು ಜೋಪಾನ ಮಾಡದೇ ಇರುವುದು ನಿಮ್ಮ ತಪ್ಪು, ಅದನ್ನು ಬಿಟ್ಟು ರಸ್ತೆಗೆ ಬಂದು ನಮ್ಮ ಮನೆಯನ್ನು ಲೂಟಿ ಮಾಡಿದ್ದಾರೆ ಎಂದು ಅರಚುವುದರಿಂದ ಪ್ರಯೋಜನವಿಲ್ಲ, ಅದನ್ನು ನೋಡಿ ಜನರು ಗೇಲಿ ಮಾಡುತ್ತಾರೆ, ನಿಜವಾದ ಶಿವಸೇನೆ, ಎನ್​ಸಿಪಿ ನನ್ನ ಬಳಿ ಇದೆ, ನಕಲಿ ಎಲ್ಲೇ ಉಳಿದಿದೆ ಎಂದು ಹೇಳಿದರು.

ನೀವು ರಾಹುಲ್​ರನ್ನು ಶೆಹಜಾದೇ ಎಂದು ಕರೆಯುತ್ತೀರಿ, ಪ್ರಿಯಾಂಕಾ ಗಾಂಧಿ ನಿಮ್ಮನ್ನು ಶೆಹೆನ್‌ಶಾ ಎಂದು ಕರೆಯುತ್ತಾರೆ ಏಕೆ? ನಾನು 2001 ರಲ್ಲಿ ಮುಖ್ಯಮಂತ್ರಿಯಾದಾಗಿನಿಂದ ಇಲ್ಲಿಯವರೆಗೆ ನಾನು ಹಲವಾರು ಆರೋಪಗಳನ್ನು ಸಹಿಸಿಕೊಂಡಿದ್ದೇನೆ ಮತ್ತು ಹಲವಾರು ನಿಂದನೆಗಳನ್ನು ಸಹಿಸಿಕೊಂಡಿದ್ದೇನೆ ಎಂಬುದಕ್ಕೆ ನನ್ನನ್ನು ಶಾಹೆನ್‌ಶಾ ಎಂದು ಕರೆಯುತ್ತಾರೆ, ಏನನ್ನಾದರೂ ಸಹಿಸಿಕೊಳ್ಳುವವನು ರಾಜ ಮಾತ್ರ ಎಂದರು.

ಈ ಚುನಾವಣೆಯ ದೊಡ್ಡ ವಿಷಯ ಯಾವುದು? ಪ್ರತಿಪಕ್ಷಗಳು ಹಣದುಬ್ಬರ ಮತ್ತು ನಿರುದ್ಯೋಗವನ್ನು ದೊಡ್ಡ ಸಮಸ್ಯೆ ಎಂದು ಕರೆಯುತ್ತಿವೆ.

10 ವರ್ಷಗಳ ಕೆಲಸದ ತೃಪ್ತಿ, ಮತ್ತೊಮ್ಮೆ ಮೋದಿ ಸರ್ಕಾರ ಎನ್ನುವ ಜನರ ಘೋಷಣೆ, ಭಾರತೀಯ ಜನತಾ ಪಕ್ಷವು ದೇಶದ ಆರ್ಥಿಕತೆಯನ್ನು ಮೂರನೇ ದೊಡ್ಡದಾಗಿ ಮಾಡುತ್ತೇವೆ ಎಂದು ಹೇಳಿದೆ. 2047 ಕ್ಕೆ ಭಾರತವನ್ನು ಅಭಿವೃದ್ಧಿ ಹೊಂದಿದ ಭಾರತವನ್ನು ಮಾಡಲು ಪಣತೊಟ್ಟಿದ್ದೇನೆ, ಮೂರನೇ ಅವಧಿಯಲ್ಲೂ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ ಎಂದು ಜನರಿಗೆ ಭರವಸೆ ನೀಡಿದ್ದೇನೆ ಎಂದು ಹೇಳಿದರು.

ಚುನಾವಣೆಯಲ್ಲಿ ಬಿಜೆಪಿ ಮತ್ತು ಪ್ರತಿಪಕ್ಷಗಳೆರಡೂ ಧರ್ಮ ರಾಜಕಾರಣ ಮಾಡುತ್ತಿವೆ, ಇದೆಲ್ಲಾ ಯಾವಾಗ ಕೊನೆಗೊಳ್ಳುತ್ತೆ, ನೀವೇನಂತೀರಾ?

ಭಾರತೀಯ ಜನತಾ ಪಕ್ಷದ ತತ್ವ ಮತ್ತು ಇದು ಅದರ ಮಂತ್ರ  ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ ಎಂಬುದನ್ನು ನಾನು  ಜನರಿಗೆ ಚೆನ್ನಾಗಿ ವಿವರಿಸುತ್ತಿದ್ದೇನೆ. ಇದು ಸುಸಮಯ ದೇಶವನ್ನು ಧರ್ಮದ ಆಧಾರದ ಮೇಲೆ ಹೇಗೆ ವಿಭಜಿಸಲಾಯಿತು ಎಂದು ನಾನು ದೇಶಕ್ಕೆ ಹೇಳಬೇಕು.

75 ವರ್ಷಗಳ ಕಾಲ ಅವರು ಮಾಡಿದ ರಾಜಕೀಯ ದೇಶವನ್ನು ಧರ್ಮದ ಆಧಾರದಲ್ಲಿ ವಿಭಜಿಸುವುದು , ಇದನ್ನು ಉದಾಹರಣೆಯೊಂದಿಗೆ ಹೇಳುತ್ತೇನೆ. ಸೆಕ್ಯುಲರಿಸಂ ಹೆಸರಿನಲ್ಲಿ ರಾಜಕೀಯ ಮಾಡಿದ್ದು, ತುಷ್ಟೀಕರಣದ ರಾಜಕಾರಣ ಮಾಡಿದ್ದು ಈಗ ಸ್ಪಷ್ಟವಾಗಿದೆ, ಹಾಗಾಗಿ ಭಾರತೀಯ ಜನತಾ ಪಕ್ಷವು ಧರ್ಮದ ಆಧಾರದ ಮೇಲೆ ರಾಜಕೀಯ ಮಾಡುವುದಿಲ್ಲ, ಅದು ಬಿಜೆಪಿಯ ಮಾರ್ಗವಲ್ಲ. ಆದರೆ ಈಗ ಧರ್ಮದ ಆಧಾರದ ಮೇಲೆ ರಾಜಕೀಯ ಮಾಡುವವರಿಗೆ ಶಿಕ್ಷೆಯಾಗಬೇಕು, ಆಗ ಮಾತ್ರ ಈ ಈ ಹಾದಿಯಲ್ಲಿ ಹೋಗಲು ಹೆದರುತ್ತಾರೆ ಎಂದರು.

ಜೂನ್ 4 ಕ್ಕೆ ನೀವು ಯಾವ ಸಂದೇಶವನ್ನು ನೀಡುತ್ತೀರಿ? ಹೃದಯಪೂರ್ವಕ ಧನ್ಯವಾದಗಳು

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
ಮೆಡಿಕಲ್​ಗಳಲ್ಲೂ ಸಿಂಥೆಟಿಕ್ ಡ್ರಗ್ಸ್: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ಮೆಡಿಕಲ್​ಗಳಲ್ಲೂ ಸಿಂಥೆಟಿಕ್ ಡ್ರಗ್ಸ್: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
VIDEO: ಎಲ್ಲಾ ಮಸಾಲೆಗೆ ವಿರಾಟ್ ಕೊಹ್ಲಿ-ಗೌತಮ್ ಗಂಭೀರ್ ಬ್ರೇಕ್..!
VIDEO: ಎಲ್ಲಾ ಮಸಾಲೆಗೆ ವಿರಾಟ್ ಕೊಹ್ಲಿ-ಗೌತಮ್ ಗಂಭೀರ್ ಬ್ರೇಕ್..!
ಜನ್ಮದಿನದಂದು ಹೇಗಿತ್ತು ನೋಡಿ ಉಪೇಂದ್ರ ಮನೆ ಮುಂದೆ ಫ್ಯಾನ್ಸ್​ ಸಂಭ್ರಮ
ಜನ್ಮದಿನದಂದು ಹೇಗಿತ್ತು ನೋಡಿ ಉಪೇಂದ್ರ ಮನೆ ಮುಂದೆ ಫ್ಯಾನ್ಸ್​ ಸಂಭ್ರಮ
CPL 2024: ಕಾರ್ನ್​ವಾಲ್ ಕಮಾಲ್: ರಾಯಲ್ಸ್​ಗೆ ಭರ್ಜರಿ ತಂದುಕೊಟ್ಟ ರಹ್​ಕೀಮ್
CPL 2024: ಕಾರ್ನ್​ವಾಲ್ ಕಮಾಲ್: ರಾಯಲ್ಸ್​ಗೆ ಭರ್ಜರಿ ತಂದುಕೊಟ್ಟ ರಹ್​ಕೀಮ್
‘ಬೇಸರ ಆಗೇ ಆಗುತ್ತದೆ’; ದರ್ಶನ್ ಕೇಸ್ ಬಗ್ಗೆ ಉಪೇಂದ್ರ ಮಾತು  
‘ಬೇಸರ ಆಗೇ ಆಗುತ್ತದೆ’; ದರ್ಶನ್ ಕೇಸ್ ಬಗ್ಗೆ ಉಪೇಂದ್ರ ಮಾತು  
ಈ ರಾಶಿಯವರು ಅಪರಿಚಿತ ವ್ಯಕ್ತಿಯಿಂದ ಹೆದರಿ ಸಂಪತ್ತು ಕಳೆದುಕೊಳ್ಳಲಿದ್ದೀರಿ
ಈ ರಾಶಿಯವರು ಅಪರಿಚಿತ ವ್ಯಕ್ತಿಯಿಂದ ಹೆದರಿ ಸಂಪತ್ತು ಕಳೆದುಕೊಳ್ಳಲಿದ್ದೀರಿ
ಮಕ್ಕಳು ಸೀನಿದಾಗ ಚಿರಂಜೀವಿ ಚಿರಂಜೀವಿ ಅಂತ ಯಾಕೆ ಅನ್ನಬೇಕು?
ಮಕ್ಕಳು ಸೀನಿದಾಗ ಚಿರಂಜೀವಿ ಚಿರಂಜೀವಿ ಅಂತ ಯಾಕೆ ಅನ್ನಬೇಕು?
ಬಾಂಗ್ಲಾ ನಾಯಕನಿಗೆ ಮಾತಿನಲ್ಲೇ ತಿವಿದ ರೋಹಿತ್ ಶರ್ಮಾ
ಬಾಂಗ್ಲಾ ನಾಯಕನಿಗೆ ಮಾತಿನಲ್ಲೇ ತಿವಿದ ರೋಹಿತ್ ಶರ್ಮಾ
ಲಾರಿಯಡಿ ಸಿಲುಕಿದ ಬೈಕ್; ಪವಾಡದಂತೆ ಬಚಾವಾದ ಚಾಲಕ
ಲಾರಿಯಡಿ ಸಿಲುಕಿದ ಬೈಕ್; ಪವಾಡದಂತೆ ಬಚಾವಾದ ಚಾಲಕ