Viral: ಆನ್ಲೈನ್‌ನಲ್ಲಿ ಆರ್ಡರ್ ಮಾಡಿದ್ದು ಸಿಲ್ವರ್ ಕಾಯಿನ್‌; ಆದ್ರೆ ಮನೆಗೆ ಬಂದದ್ದು ಮಾತ್ರ ಮ್ಯಾಗಿ, ಮಿಕ್ಸ್ಚರ್ ಪ್ಯಾಕೆಟ್

ಇತ್ತೀಚೆಗಿನ ದಿನಗಳಲ್ಲಿ ಪ್ರತಿಯೊಂದನ್ನು ಆನ್ಲೈನ್ ನಲ್ಲಿ ಖರೀದಿ ಮಾಡುವವರೇ ಹೆಚ್ಚು. ಹೀಗಿರುವಾಗ ಕೆಲವೊಮ್ಮೆ ತಪ್ಪಾದ ವಿಳಾಸದಿಂದ ಆರ್ಡರ್ ಗಳು ನಿಮ್ಮ ಮನೆ ಬಾಗಿಲಿಗೆ ಬರಬಹುದು. ಇಲ್ಲವಾದರೆ ನೀವು ಆರ್ಡರ್ ಮಾಡಿದ್ದೇ ಬೇರೆಯಾಗಿರುತ್ತದೆ. ನಿಮ್ಮ ಮನೆಗೆ ಬಂದದ್ದು ಬೇರೆಯದ್ದೇ ವಸ್ತು ಆಗಿರುತ್ತದೆ. ಇದೀಗ ಇಂತಹದ್ದೇ ಎಡವಟ್ಟು ಆಗಿದೆ. ಇಲ್ಲೊಬ್ಬ ವ್ಯಕ್ತಿಯೂ ಸ್ವಿಗ್ಗಿಯಲ್ಲಿ ಬೆಳ್ಳಿ ನಾಣ್ಯಗಳನ್ನು ಆರ್ಡರ್ ಮಾಡಿದ್ದು, ಮನೆಗೆ ಬಂದದ್ದು ಮಾತ್ರ ಬೇರೆಯದ್ದೇ ಐಟಂಗಳಂತೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ಆನ್ಲೈನ್‌ನಲ್ಲಿ ಆರ್ಡರ್ ಮಾಡಿದ್ದು ಸಿಲ್ವರ್ ಕಾಯಿನ್‌; ಆದ್ರೆ ಮನೆಗೆ ಬಂದದ್ದು ಮಾತ್ರ ಮ್ಯಾಗಿ, ಮಿಕ್ಸ್ಚರ್ ಪ್ಯಾಕೆಟ್
ವೈರಲ್‌ ಪೋಸ್ಟ್‌
Image Credit source: Twitter

Updated on: Sep 30, 2025 | 4:23 PM

ಇತ್ತೀಚೆಗಿನ ದಿನಗಳಲ್ಲಿ ಆನ್ಲೈನ್ ಶಾಪಿಂಗ್ (Online shopping) ಕಾಮನ್ ಆಗಿದೆ. ಹೀಗಾಗಿ ಕುಳಿತಲ್ಲಿಂದಲೇ ಬೇಕಾದ ವಸ್ತುಗಳನ್ನು ಆನ್ಲೈನ್ ನಲ್ಲೇ ಆರ್ಡರ್ ಮಾಡುತ್ತಾರೆ. ಆದರೆ ಕೆಲವೊಮ್ಮೆ ಈ ಆನ್ಲೈನ್ ಶಾಪಿಂಗ್ ವೇಳೆ ಗೊಂದಲಗಳು ಆಗುವುದೇ ಹೆಚ್ಚು. ಇಲ್ಲೊಬ್ಬ ವ್ಯಕ್ತಿಗೆ ಇದೇ ರೀತಿ ಆಗಿದೆ. ಹೌದು, ಈ ವ್ಯಕ್ತಿಯೂ ಆನ್ಲೈನ್ ನಲ್ಲಿ ಆರ್ಡರ್ ಮಾಡಿದ್ದು ಬೆಳ್ಳಿ ನಾಣ್ಯಗಳು, (Silver coins) ಆದರೆ ಮನೆಗೆ ಬಂದಿದ್ದು ಮ್ಯಾಗಿ ಹಾಗೂ ಹಳದಿರಾಮ್ಸ್ ಬ್ರ್ಯಾಂಡ್ ನ ಮಿಕ್ಸ್ಚರ್ ಪ್ಯಾಕೆಟ್ ಗಳಂತೆ. ಆನ್ಲೈನ್ ಶಾಪಿಂಗ್ ವೇಳೆ ತಮಗಾದ ಈ ಕಹಿ ಅನುಭವವನ್ನು ಹಂಚಿಕೊಂಡು ಏನೆಲ್ಲಾ ಆಯ್ತು ಎಂದು ವಿವರಿಸಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಸಲಹೆ ನೀಡಿದ್ದಾರೆ.

ಆನ್‌ಲೈನ್‌ ಶಾಪಿಂಗ್‌ ತಂದ ಎಡವಟ್ಟು ನೋಡಿ

ವಿನೀತ್ ಕೆ (Vineeth K) ಎಂಬುವವರು ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾದ ಈ ಪೋಸ್ಟ್ ನಲ್ಲಿ ತಮ್ಮ ಆರ್ಡರ್ ಮಾಡಿದ್ದನ್ನು ಸ್ಕ್ರೀನ್ ಶಾಟ್ ಸೇರಿದಂತೆ ಮನೆಗೆ ಬಂದ ಐಟಂಗಳ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಗೆ ಇದು ಸ್ವಿಗ್ಗಿ ಹಾರರ್ ಸ್ಟೋರಿ. ಬೆಳ್ಳಿ ನಾಣ್ಯಗಳನ್ನು ಆರ್ಡರ್ ಮಾಡಿದೆ, ಆದರೆ ಮ್ಯಾಗಿ ಮತ್ತು ಹಲ್ದಿರಾಮ್ ಪ್ಯಾಕೆಟ್‌ಗಳು ಸಿಕ್ಕಿತು. ಇಡೀ ಆರ್ಡರ್‌ನಲ್ಲಿ ಒಂದು ಪೌಚ್ ಮಾತ್ರ ಬೆಳ್ಳಿ ಕಾಯಿನ್ ಇತ್ತು. ಅದನ್ನು ಸೀಲ್ ಮಾಡಲಾಗಿತ್ತು. ಡೆಲಿವರಿ ನೀಡಿದ ಯುವಕ ನಾವು ಅದನ್ನು ತೆರೆಯಲು ಸಾಧ್ಯವಿಲ್ಲ ನೀವು ಸಂಪೂರ್ಣ ಆರ್ಡರ್ ತೆಗೆದುಕೊಳ್ಳಿ ಅಥವಾ ಆರ್ಡರ್ ರದ್ದುಗೊಳಿಸಿ ಎಂದರು ಎಂದು ಪೋಸ್ಟ್ ನಲ್ಲಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ
ಅಂಚೆ ಇಲಾಖೆಗೆ ಪತ್ರ ಬರೆಯಿರಿ… 50 ಸಾವಿರ ರೂ. ಬಹುಮಾನ ಗೆಲ್ಲಿ!
ಎಂಜಲು ಉಗುಳಿ ರೊಟ್ಟಿ ಬೇಯಿಸಿದ ಯುವಕ
ಊಬರ್ ಚಾಲಕ ಕ್ಯಾನ್ಸಲ್ ಮಾಡಿದ್ರೂ, 5 ಸ್ಟಾರ್ ರೇಟಿಂಗ್ ಕೊಟ್ಟ ಪ್ರಯಾಣಿಕ
ಈ ರೆಸ್ಟೋರೆಂಟ್‌ನಲ್ಲಿ ಫುಡ್ ವೇಸ್ಟ್ ಮಾಡಿದ್ರೆ ಬೀಳುತ್ತೆ 20 ರೂ ದಂಡ

ವೈರಲ್ ಪೋಸ್ಟ್ ಇಲ್ಲಿದೆ ನೋಡಿ

ನಾನು ಸ್ವಿಗ್ಗಿ ಕಸ್ಟಮರ್ ಕೇರ್ ಜತೆಗೆ 40 ನಿಮಿಷ ಮಾತುಕತೆಯಲ್ಲೇ ಕಳೆಯಬೇಕಾಯ್ತು. ಆ ಬಳಿಕ ಕೇವಲ ಬ್ಯಾಗಷ್ಟನ್ನೇ ನಾನು ತೆಗೆದುಕೊಂಡೆ ಉಳಿದಿದ್ದನ್ನು ಡೆಲಿವರಿ ಬಾಯ್‌ಗೆ ನೀಡಿದೆ. ಹಿಂದಿರುಗಿಸಲು ಸಾಧ್ಯವಾಗದಿದ್ದರೆ ನೀವೇ ಸೇವಿಸಿ ನಾನು ಅದನ್ನು ಅರ್ಡರ್ ಮಾಡಿಲ್ಲ, ನನಗೆ ಅದು ಬೇಡ ಎಂದು ಹೇಳಿದೆ. ನಂತರ ಸ್ವೀಕರಿಸಿದ ಬೆಳ್ಳಿ ನಾಣ್ಯವೂ ಸರಿಯಾಗಿರಲಿಲ್ಲ, 999 ಕ್ವಾಲಿಟಿಯ ಬೆಳ್ಳಿ ನಾಣ್ಯದ ಬದಲಿಗೆ 925 ಮೌಲ್ಯದ ಬೆಳ್ಳಿ ನಾಣ್ಯ ಸ್ವೀಕರಿಸಬೇಕಾಯ್ತು. ಕಡಿಮೆ ಶುದ್ಧತೆಯ ನಾಣ್ಯದ ಜೊತೆಗೆ ಸ್ವಿಗ್ಗಿಯಲ್ಲಿ ಆರ್ಡರ್ ಮಾಡಲು ಹೋಗಿ ಹಲವು ರೀತಿಯ ಸಂಕಷ್ಟ ಎದುರಿಸಬೇಕಾಯ್ತು ಎಂದು ಹೇಳಿದ್ದಾರೆ.

ಇದನ್ನೂ ಓದಿ:“ನನ್ನ ಆದರ್ಶ ವ್ಯಕ್ತಿಗೆ ಪತ್ರ” ಅಂಚೆ ಇಲಾಖೆಗೆ ಪತ್ರ ಬರೆಯಿರಿ… 50 ಸಾವಿರ ರೂ. ಬಹುಮಾನ ಗೆಲ್ಲಿ!

ಸೆಪ್ಟೆಂಬರ್ 27 ರಂದು ಶೇರ್ ಮಾಡಲಾದ ಈ ಪೋಸ್ಟ್ ನಾಲ್ಕು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಈ ರೀತಿ ಎಡವಟ್ಟು ನೀವೇ ಮಾಡಿಕೊಂಡದ್ದು, ಸ್ವಿಗ್ಗಿಯಿಂದ ಯಾರಾದ್ರೂ ಬೆಳ್ಳಿ ನಾಣ್ಯಗಳನ್ನು ಆರ್ಡರ್ ಮಾಡ್ತಾರಾ ಎಂದು ಕೇಳಿದ್ದಾರೆ. ಇನ್ನೊಬ್ಬ ಬಳಕೆದಾರ ಬುದ್ಧಿವಂತ ವ್ಯಕ್ತಿ, ಬೆಳ್ಳಿಯಂತಹ ದುಬಾರಿ ಬೆಲೆಯ ವಸ್ತುಗಳನ್ನು ತ್ವರಿತ ವಿತರಣಾ ಅಪ್ಲಿಕೇಶನ್ ನಿಂದ ಏಕೆ ಆರ್ಡರ್ ಮಾಡಬೇಕು?. ನೀವು ನಿಜಕ್ಕೂ ಸೋಮಾರಿಗಳೇ ಅಥವಾ ಮೂರ್ಖರೋ ರಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬರು ಚಿನ್ನ ಬೆಳ್ಳಿಯನ್ನು ಆನ್ಲೈನ್ ನಲ್ಲಿ ಆರ್ಡರ್ ಮಾಡ್ಬೇಡಿ ಎಂದು ಸಲಹೆ ನೀಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 4:22 pm, Tue, 30 September 25