LGBTQIA+ : ‘6 ವರ್ಷಗಳ ದೀರ್ಘ ಪ್ರೇಮಸಂಬಂಧ (Relationship) ಮುಗ್ಗರಿಸಿದ್ದರಿಂದ ನಾನು ತೀವ್ರ ಬೇಸರದಲ್ಲಿದ್ದೆ. 2021ರಲ್ಲಿ ಪೋಷಕರನ್ನು ನೋಡಲು ಆಗಷ್ಟೇ ಭಾರತಕ್ಕೆ ಬಂದಿದ್ದ ಅವಿನಾಶ ಭೇಟಿಯಾಯಿತು. ನಾನು ಗಂಭೀರವಾಗಿ ಸಂಗಾತಿಯ ಹುಡುಕಾಟದಲ್ಲಿದ್ದೆ. ನಾನು ಮತ್ತು 37 ವರ್ಷದ ಅವಿನಾಶ ಪರಸ್ಪರ ಪ್ರೀತಿಯಲ್ಲಿ ಬಿದ್ದೆವು. ಆದರೆ ನಮ್ಮ ಸಂಬಂಧವನ್ನು ಮೊದಮೊದಲು ಎರಡೂ ಕಡೆಯ ಪೋಷಕರು ಒಪ್ಪಲಿಲ್ಲ. ಕೊನೆಗೆ ಒಪ್ಪಿಕೊಂಡರು. ಸಾಕಷ್ಟು ಕಲ್ಯಾಣಮಂಟಪಗಳು ಬಾಡಿಗೆ ಕೊಡಲು ನಿರಾಕರಿಸಿದವು. ಕೊನೆಗೆ ಲೋನಾವಳದಲ್ಲಿ (Lonavala) ಸಪ್ತಪದಿಯನ್ನು ತುಳಿದೆವು. 150 ಜನರು ಅತಿಥಿಗಳು ನಮ್ಮ ಮದುವೆಗೆ ಬಂದು ಹಾರೈಸಿದರು. ಪೋಷಕರು ಮನದುಂಬಿ ಹಾರೈಸಿದರು. ಸಿಯಾರಾ (ನಾಯಿ)ಳೊಂದಿಗೆ ನಮ್ಮ ಪುಟ್ಟ ಸಂಸಾರ ನೌಕೆ ಸಾಗುತ್ತಿದೆ’ ವರುಣ, ಮಹಾರಾಷ್ಟ್ರ
ಇದನ್ನೂ ಓದಿ : Viral Video: ನ್ಯೂಯಾರ್ಕ್; ಮಣ್ಣಿನೊಳಗೆ ಗುದ್ದಾಟಕ್ಕೆ ಬಿದ್ದ ಮಾಡೆಲ್ಗಳು, ನೆಟ್ಟಿಗರ ತಮಾಷೆ ಪ್ರತಿಕ್ರಿಯೆಗಳ ಹೊಳೆ
ಈ ವಿಡಿಯೋ ಅನ್ನು officialpeopleofindia ಜು. 15ರಂದು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದೆ. ಈತನಕ 1.2 ಲಕ್ಷ ಜನರು ಲೈಕ್ ಮಾಡಿದ್ದು ಸುಮಾರು ಮೂರು ಮಿಲಿಯನ್ ಜನರು ನೋಡಿದ್ದಾರೆ. ಸಾವಿರಾರು ಜನರು ಈ ಜೋಡಿಗೆ ಶುಭಹಾರೈಸಿ ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಸಲಿಂಗ ವಿವಾಹವನ್ನು ಸಮಾಜವು ಸಹಜವಾಗಿ ಸ್ವೀಕರಿಸುತ್ತಿರುವ ಬಗ್ಗೆ ಖುಷಿ ಇದೆ ಎಂದು ಒಬ್ಬರು ಹೇಳಿದ್ಧಾರೆ. ಇಷ್ಟವಿಲ್ಲದ ಸಂಬಂಧದಲ್ಲಿದ್ದು ಗೋಳಾಡುವುದಕ್ಕಿಂತ ಇದು ಬಹಳ ಒಳ್ಳೆಯದು, ನಿಮ್ಮಿಬ್ಬರನ್ನು ನೋಡಲು ಬಹಳ ಖುಷಿಯಾಗುತ್ತಿದೆ ಎಂದಿದ್ದಾರೆ ಇನ್ನೊಬ್ಬರು. ಈ ವಿಷಯದಲ್ಲಿ ತಮ್ಮ ಮಕ್ಕಳ ಇಂಗಿತವನ್ನು ಕುಟುಂಬವು ಒಪ್ಪಿ ನೆರವೇರಿಸಿಕೊಡುವುದು ಮುಖ್ಯ, ಇದಕ್ಕಿಂತ ಹೆಚ್ಚಿನ ಖುಷಿ ಏನಿದೆ? ಎಂದಿದ್ದಾರೆ ಮತ್ತೊಬ್ಬರು. ಪ್ರೀತಿಯ ಮುಂದೆ ಸಮಾಜವು ಸೋಲುತ್ತದೆ ಎಂದಿದ್ದಾರೆ ಮಗದೊಬ್ಬರು.
ದೇವರು ನಿಮ್ಮನ್ನು ಪರಸ್ಪರಿಗಾಗಿ ರೂಪಿಸಿದ್ದಾನೆ, ನಿಮ್ಮ ಮೇಲೆ ಯಾರದೇ ಕೆಟ್ಟ ದೃಷ್ಟಿ ಬೀಳದಿರಲಿ ಎಂದು ನೆಟ್ಟಿಗರು ಹಾರೈಸಿದ್ದಾರೆ. ನಾನು ನನ್ನ ಸಂಗಾತಿಯನ್ನು ಹುಡುಕುತ್ತಿದ್ದೇನೆ, ಎಲ್ಲಿದ್ದಾನೋ ಏನೋ ಆದಷ್ಟು ಬೇಗ ಸಿಗಲಿ ಎಂದು ಕೇಳಿಕೊಂಡಿದ್ಧಾರೆ ಕೆಲವರು.
ಈ ವಿಡಿಯೋಗಳನ್ನು ನೋಡಿದ ನಿಮ್ಮ ಅಭಿಪ್ರಾವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 1:54 pm, Fri, 15 September 23