Video: ಟೋಪಿ ಎಗರಿಸಿದ ಆನೆ ಬಳಿ ವಾಪಾಸ್ ಕೊಡುವಂತೆ ರಿಕ್ವೆಸ್ಟ್ ಮಾಡಿಕೊಂಡ ಮಾಲಕಿ

ಪ್ರಾಣಿಗಳ ಆಟ ತುಂಟಾಟಗಳನ್ನು ನೋಡುವುದೇ ಚಂದ. ಮಾಲೀಕರ ಜತೆಗೆ ಈ ಮುಗ್ಧ ಜೀವಿಗಳು ಸಲುಗೆಯಿಂದ ವರ್ತಿಸುತ್ತವೆ. ಇದಕ್ಕೆ ಸಾಕ್ಷಿಯಾಗಿದೆ ಈ ದೃಶ್ಯ. ನೋಡ ನೋಡುತ್ತಿದ್ದಂತೆ ಮಾಲಕಿಯ ಟೋಪಿ ಎಗರಿಸಿದ ಆನೆಯ ಬಳಿ ವಾಪಾಸ್ ಕೊಡುವಂತೆ ಮಾಲಕಿ ವಿನಂತಿ ಮಾಡಿಕೊಂಡಿದ್ದಾಳೆ. ಈ ಕ್ಯೂಟ್ ವಿಡಿಯೋ ಸದ್ಯ ವೈರಲ್ ಆಗಿದ್ದು, ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಟೋಪಿ ಎಗರಿಸಿದ ಆನೆ ಬಳಿ ವಾಪಾಸ್ ಕೊಡುವಂತೆ ರಿಕ್ವೆಸ್ಟ್ ಮಾಡಿಕೊಂಡ ಮಾಲಕಿ
ವೈರಲ್‌ ವಿಡಿಯೋ
Image Credit source: Instagram

Updated on: Oct 04, 2026 | 2:59 PM

ಆನೆಗಳು (elephant) ಏನು ಮಾಡಿದ್ರು ನೋಡೋಕೆ ಚಂದ. ತನ್ನನ್ನು ಆರೈಕೆ ಮಾಡುವ ವ್ಯಕ್ತಿಗಳ ಜತೆಗೆ ಆನೆಗಳು ಸಲುಗೆಯಿಂದ ವರ್ತಿಸುತ್ತವೆ. ಆದರೆ ಇದೀಗ ಆನೆಯೊಂದು ಮಾಲಕಿಯ ತಲೆಯಲ್ಲಿದ್ದ ಟೋಪಿಯನ್ನು ಎಗರಿಸಿದೆ. ಕೊನೆಗೆ ಮಾಲಕಿ ಆನೆಯನ್ನು ಪುಲಾಯಿಸಿ ಟೋಪಿ ಪಡೆಯಲು ಪ್ರಯತ್ನಿಸಿದ ವಿಡಿಯೋ ವೈರಲ್ ಆಗಿದೆ. ಆನೆಯ ತುಂಟಾಟಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

ಮಾಲಕಿಯ ಟೋಪಿ ಎಗರಿಸಿದ ಆನೆ

ಎಲಿಫೆಂಟ್ ನೇಚರ್ ಪಾರ್ಕ್ (Elephant Nature Park) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಆನೆ ಹಾಗೂ ಮಾಲಕಿಯ ಕ್ಯೂಟ್ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಆನೆಯು ಮಾಲಕಿಯ ಟೋಪಿ ಎಗರಿಸಿ ತುಂಟಾಟ ಆಡಿದೆ. ಆನೆಯನ್ನು ರಮಿಸಿ ಟೋಪಿ ಪಡೆಯಲು ಮಾಲಕಿ ಪ್ರಯತ್ನಿಸುತ್ತಿರುವ ದೃಶ್ಯವನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ನಡೆಯಲು ಕಲಿಯುತ್ತಿದ್ದ ಮರಿಯಾನೆಗೆ ಬೀಳದಂತೆ ತಡೆದ ತಾಯಾನೆ

ಆನೆಯ ತುಂಟಾಟಕ್ಕೆ ನೆಟ್ಟಿಗರು ಫಿದಾ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಆನೆಯ ತುಂಟಾಟಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ಒಬ್ಬ ಬಳಕೆದಾರ, ಇದು ನನ್ನ ಟೋಪಿ ಎಂದು ತಮಾಷೆ ಮಾಡಿದ್ದಾರೆ. ಮತ್ತೊಬ್ಬರು, ಆನೆಯನ್ನೊಮ್ಮೆ ನೋಡಿ ನಗುತ್ತಿರುವಂತಿದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ಈ ಆನೆ ನಗುತ್ತಿರುವುದನ್ನು ನಾನು ನೋಡಿದೆ ಎಂದು ಕಾಮೆಂಟ್ ನಲ್ಲಿ ಬರೆದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 2:59 pm, Sun, 4 October 26

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us