Video: ನಡೆಯಲು ಕಲಿಯುತ್ತಿದ್ದ ಮರಿಯಾನೆಗೆ ಬೀಳದಂತೆ ತಡೆದ ತಾಯಾನೆ
ಮೂಕ ಪ್ರಾಣಿಗಳು ತನ್ನ ಕಂದಮ್ಮಗಳಿಗೆ ಕಾಳಜಿ ವಹಿಸುತ್ತವೆ, ಅವುಗಳ ಸದಾ ಬೆಂಬಲವಾಗಿ ನಿಲ್ಲುತ್ತವೆ. ಇದಕ್ಕೆ ಸಾಕ್ಷಿಯಾಗಿದೆ ಈ ದೃಶ್ಯ. ಮರಿಯಾನೆಯೊಂದು ಎದ್ದು ನಿಂತು ನಡೆಯಲು ಕಷ್ಟ ಪಡುತ್ತಿದ್ದರೆ ತಾಯಾನೆ ಬೀಳದಂತೆ ತಡೆದಿದೆ. ನಿಷ್ಕಲ್ಮಶ ಪ್ರೀತಿ ಕಾಳಜಿ ಸಾರುವ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ತಾಯಿ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ಪ್ರಾಣಿಗಳು ಹೊರತಾಗಿಲ್ಲ. ಹುಟ್ಟಿದ ಕ್ಷಣದಿಂದಲೇ ಪ್ರತಿಯೊಂದನ್ನು ಕಲಿಸುವ ಈ ಪ್ರಾಣಿಗಳ ವಿಡಿಯೋ ವೈರಲ್ ಆಗುತ್ತಿರುತ್ತವೆ. ಇದೀಗ ಪುಟಾಣಿ ಆನೆಯೊಂದು (baby elephant) ನಡೆಯಲು ಕಲಿಯುತ್ತಿದೆ. ಇದೇ ವೇಳೆ ತಾಯಾನೆ ತನ್ನ ಕಂದಮ್ಮ ಬೀಳದಂತೆ ಆಸರೆಯಾಗಿ ನಿಂತಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರ ಗಮನ ಸೆಳೆದಿದೆ.
ಮರಿಯಾನೆಗೆ ಸಾಥ್ ನೀಡಿದ ತಾಯಾನೆ
ಜೆನ್ನ ರೋಜ್ ಡೇಸ್ ಆರ್ಡನ್ಸ್ (Jenna Roze Des Ordons) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ತಾಯಾನೆ ತನ್ನ ಕಂದಮ್ಮನಿಗೆ ಆಸರೆಯಾಗಿ ನಿಂತಿರುವ ದೃಶ್ಯವನ್ನು ಕಾಣಬಹುದು. ಆನೆಗಳ ಹಿಂಡಿನಲ್ಲಿ ಮರಿಯಾನೆ ಪುಟ್ಟ ಪುಟ್ಟ ಹೆಜ್ಜೆಯನ್ನಿಟ್ಟು ನಡೆದಾಡಲು ಕಲಿಯುತ್ತಿದೆ. ಈ ವೇಳೆ ಒಂದೊಂದು ಹೆಜ್ಜೆ ಇಡಲು ಕಷ್ಟ ಪಡುತ್ತಿದೆ. ತಾಯಿ ಆನೆ ತನ್ನ ನಿಧಾನವಾಗಿ ನಡೆಯಲು ಕಲಿಸುತ್ತ ಬೀಳದಂತೆ ತಡೆದಿರುವುದನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ
View this post on Instagram
ಇದನ್ನೂ ಓದಿ: ನಿದ್ದೆಗೆ ಜಾರಿದ ಕಂದಮ್ಮನಿಗೆ ಸೊಂಡಿಲಿನಿಂದ ಗಾಳಿ ಬೀಸಿ ಮಲಗಿಸಿದ ತಾಯಾನೆ
ಈ ವಿಡಿಯೋ ಎರಡು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಮರಿಯಾನೆ ತುಂಬಾ ಕ್ಯೂಟ್ ಆಗಿದೆ ಎಂದಿದ್ದಾರೆ. ಇನ್ನೊಬ್ಬರು, ಈ ವಿಡಿಯೋವನ್ನು ಮತ್ತೆ ಮತ್ತೆ ನೋಡಿದೆ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ, ಅಮ್ಮ ಹೇಳ್ತಾ ಇದ್ದಾಳೆ, ಮೆಲ್ಲ ನಡಿ ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




