ಇಲ್ಲಿ ಸಿಗುತ್ತೆ ಸೆಕೆಂಡ್ ಹ್ಯಾಂಡ್ ವಸ್ತುಗಳಂತೆ ಸೆಕೆಂಡ್ ಹ್ಯಾಂಡ್ ಫ್ರೈಡ್ ಚಿಕನ್

ಫಿಲಿಪೈನ್ಸ್‌ನಲ್ಲಿ 'ಪಾಗ್‌ಪ್ಯಾಗ್' ಎಂಬ ವಿಶಿಷ್ಟ ಸೆಕೆಂಡ್ ಹ್ಯಾಂಡ್ ಫ್ರೈಡ್ ಚಿಕನ್ ಜನಪ್ರಿಯವಾಗಿದೆ. ಬಡತನದಿಂದಾಗಿ, ಶ್ರೀಮಂತರು ತಿಂದು ಬಿಟ್ಟ ಚಿಕನ್ ತ್ಯಾಜ್ಯವನ್ನು ಸಂಗ್ರಹಿಸಿ, ಸ್ವಚ್ಛಗೊಳಿಸಿ, ಮಸಾಲೆ ಹಾಕಿ ಮತ್ತೆ ಮಾರಾಟ ಮಾಡಲಾಗುತ್ತದೆ. ಇದು ಬಡ ಕುಟುಂಬಗಳಿಗೆ ಅಗ್ಗದ ಪ್ರೋಟೀನ್ ಒದಗಿಸುತ್ತದೆ. ಈ ಆಹಾರದ ಹಿಂದಿನ ಸಾಮಾಜಿಕ-ಆರ್ಥಿಕ ಕಥೆ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ.

ಇಲ್ಲಿ ಸಿಗುತ್ತೆ ಸೆಕೆಂಡ್ ಹ್ಯಾಂಡ್ ವಸ್ತುಗಳಂತೆ ಸೆಕೆಂಡ್ ಹ್ಯಾಂಡ್ ಫ್ರೈಡ್ ಚಿಕನ್
ಸಾಂದರ್ಭಿಕ ಚಿತ್ರ

Updated on: Dec 02, 2025 | 4:56 PM

ಪ್ರತಿದಿನ ಬಳಸುವ ಹಲವು ವಸ್ತುಗಳು ಸೆಕೆಂಡ್ ಹ್ಯಾಂಡ್ ಆಗಿರುತ್ತದೆ. ಈ ಸೆಕೆಂಡ್ ಹ್ಯಾಂಡ್ ವಸ್ತುಗಳು ಕಡಿಮೆ ಬೆಲೆಯಲ್ಲಿ ಸಿಗುತ್ತದೆ. ಅದರಲ್ಲೂ ಈ ಕಾರು, ಮನೆ, ಬಟ್ಟೆ ಇನ್ನು ಅನೇಕ ವಸ್ತುಗಳು ಭಾರತದಲ್ಲಿ ಇನ್ನು ಕಡಿಮೆ ಬೆಲೆಯಲ್ಲಿ ಸಿಗುವುದು ನೋಡಿರಬಹುದು. ಆದರೆ ಇದೀಗ ಆಹಾರಗಳು ಕೂಡ ಸೆಕೆಂಡ್ ಹ್ಯಾಂಡ್ ಸಿಗುತ್ತದೆ, ಅಚ್ಚರಿಯಾದರೂ ಇದು ನಿಜ. ಆದರೆ ಇದು ಭಾರತದಲ್ಲಿ ಅಲ್ಲ ಚೀನಾದಲ್ಲಿ.  ಇಲ್ಲಿ  ಸೆಕೆಂಡ್ ಹ್ಯಾಂಡ್ ವಸ್ತುಗಳಂತೆ ಆಹಾರಗಳು ಕೂಡ ಸಿಗುತ್ತದೆ. ಅದರಲ್ಲೂ ಸೆಕೆಂಡ್ ಹ್ಯಾಂಡ್ ಫ್ರೈಡ್ ಚಿಕನ್ (Second-hand fried chicken) ಸಿಗುತ್ತದೆ ಎಂಬುದು ತುಂಬಾ ವಿಶೇಷ. ಇಲ್ಲಿ ಆಹಾರ ಪದಾರ್ಥಗಳನ್ನು ಸೆಕೆಂಡ್ ಹ್ಯಾಂಡ್ ಆಗಿಯೂ ಮಾರಾಟ ಮಾಡಲಾಗುತ್ತದೆ. ಈ ಆಹಾರವನ್ನು ಒಮ್ಮೆ ಮಾತ್ರ ಸೇವನೆ ಮಾಡಲಾಗುವುದು. ಈ ಬಗ್ಗೆ ವಿಡಿಯೋವೊಂದನ್ನು ಎಕ್ಸ್​​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪ್ರಕಾರ, ಪಾಗ್‌ಪ್ಯಾಗ್ ಅಥವಾ ಸೆಕೆಂಡ್ ಹ್ಯಾಂಡ್ ಫ್ರೈಡ್ ಚಿಕನ್ ಎಂಬ ಖಾದ್ಯವು ಫಿಲಿಪೈನ್ಸ್‌ನ ಪ್ರದೇಶದಲ್ಲಿ ದಶಕಗಳಿಂದ ಜನಪ್ರಿಯವಾಗಿದೆ. ಈ ಬಗ್ಗೆ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದೆ. ಪಗ್‌ಪ್ಯಾಗ್ ಎಂದರೆ ಸೆಕೆಂಡ್ ಹ್ಯಾಂಡ್ ಎಂದರ್ಥ. ಇದನ್ನು ತ್ಯಜಿಸಿದ ಆಹಾರ ತ್ಯಾಜ್ಯದಿಂದ ತಯಾರಿಸಲಾಗುತ್ತದೆ. ಶ್ರೀಮಂತರು ತಿಂದ ನಂತರ, ಉಳಿದ ಕೋಳಿಯನ್ನು ಸ್ವಚ್ಛಗೊಳಿಸಿ, ಮಸಾಲೆ ಹಾಕಿ ನಂತರ ಡೀಪ್-ಫ್ರೈ ಮಾಡಲಾಗುತ್ತದೆ. ನಂತರ ಅದನ್ನು ಸೆಕೆಂಡ್ ಹ್ಯಾಂಡ್ ಫ್ರೈಡ್ ಚಿಕನ್ ಎಂದು ಮಾರಾಟ ಮಾಡಲಾಗುತ್ತದೆ.

ಇದನ್ನೂ ಓದಿ: ಪರಿಚಯವಾದ 4 ಗಂಟೆಯಲ್ಲಿ ಮದುವೆ, 18 ದಿನದಲ್ಲಿ ದಿವಾಳಿಯಾದ ವ್ಯಕ್ತಿ

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಕೆಲವು ಬಡ ಕುಟುಂಬಗಳಿಗೆ ಇದನ್ನು ಮಾರಾಟ ಮಾಡಲಾಗುತ್ತದೆ. ಕೈಗೆಟುಕುವ ಬೆಲೆಯಲ್ಲಿ ಇದು ಸಿಗುತ್ತದೆ. 1960ರ ದಶಕದಲ್ಲಿ ಈ ಮಾರಾಟ ಶುರುವಾಗಿದೆ. ಆ ಕಾಲದಲ್ಲಿ ದೇಶವು ಸಾಲದ ಬಿಕ್ಕಟ್ಟು ಮತ್ತು ತೀವ್ರ ನಿರುದ್ಯೋಗದಿಂದ ಬಳಲುತ್ತಿತ್ತು. ಅವಕಾಶಗಳನ್ನು ಹುಡುಕಿಕೊಂಡು ನಗರ ಪ್ರದೇಶಗಳಿಗೆ ವಲಸೆ ಹೋಗುವಂತೆ ಮಾಡಿತು. ಈ ಸಮಯದಲ್ಲಿ ಇಂತಹ ಆಹಾರಗಳು ಇವರಿಗೆ ಪ್ರೋಟೀನ್ ಸ್ಕ್ರ್ಯಾಪ್‌ ಆಗಿ ಸಿಗುತ್ತಿತ್ತು. ನಂತರದ ದಿನಗಳಲ್ಲಿ, ಇದು ಪ್ಯಾಗ್‌ಪ್ಯಾಗ್ ಬದಲಾಯಿತು. ಪ್ರತಿದಿನ ಬೆಳಿಗ್ಗೆ ಶ್ರೀಮಂತರ ಮನೆಯ ಮುಂದೆ ಹೋಗಿ ಉಳಿದ ಆಹಾರಗಳನ್ನು, ಚಿಕನ್​​​ಗಳನ್ನು ತೆಗೆದುಕೊಂಡು ಬಂದು ಇಲ್ಲಿ ಸ್ವಚ್ಛಗೊಳಿಸಿ. ಅಗತ್ಯವಿರುವ ಎಲ್ಲಾ ಮಸಾಲೆಗಳನ್ನು ಹಾಕಿ ಫ್ರೈ ಮಾಡಲಾಗುತ್ತದೆ. ಇದರ ಬೆಲೆ 98 ರೂ.ಯಿಂದ 147 ರೂ.ವರೆಗೆ ಇರುತ್ತದೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ