ಭಾರತದ ಈ ಪಟ್ಟಣದಲ್ಲಿ ಇನ್ಮುಂದೆ ‘ನಾನ್‌ ವೆಜ್‌’ ಸಿಗಲ್ಲ; ಮಾಂಸಾಹಾರ ನಿಷೇಧಿಸಿದ ವಿಶ್ವದ ಮೊದಲ ನಗರವಿದು

|

Updated on: Jul 14, 2024 | 5:51 PM

ಪಾಲಿತಾನ ಕೇವಲ ಒಂದು ನಗರವಲ್ಲ; ಇದು ಜೈನರ ಪವಿತ್ರ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ.ಈ ಹಿಂದೆ ಪಾಲಿತಾನಾದಲ್ಲಿ 250 ಮಾಂಸದ ಅಂಗಡಿಗಳಿದ್ದವು, ಈ ಅಂಗಡಿಗಳನ್ನು ಮುಚ್ಚುವಂತೆ ಸುಮಾರು 200 ಜೈನ ಸನ್ಯಾಸಿಗಳು ಪ್ರತಿಭಟನೆ ನಡೆಸಿದ್ದರು. ಇದೀಗ ಇಲ್ಲಿ ಮಾಂಸಾಹಾರಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದೆ.

ಭಾರತದ ಈ ಪಟ್ಟಣದಲ್ಲಿ ಇನ್ಮುಂದೆ ‘ನಾನ್‌ ವೆಜ್‌’ ಸಿಗಲ್ಲ; ಮಾಂಸಾಹಾರ ನಿಷೇಧಿಸಿದ ವಿಶ್ವದ ಮೊದಲ ನಗರವಿದು
ಮಾಂಸಾಹಾರ ನಿಷೇಧಿಸಿದ ವಿಶ್ವದ ಮೊದಲ ನಗರ ಪಾಲಿತಾನಾ
Image Credit source: Adobe Stock
Follow us on

ಗುಜರಾತ್‌ನ ಭಾವನಗರ ಜಿಲ್ಲೆಯ ಪಾಲಿತಾನಾ ನಗರವು ಮಾಂಸಾಹಾರಿ ಆಹಾರದ ಮಾರಾಟ ಮತ್ತು ಸೇವನೆಯನ್ನು ನಿಷೇಧಿಸಿದ ವಿಶ್ವದ ಮೊದಲ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜೈನ ಧರ್ಮಕ್ಕೆ ಹೆಸರುವಾಸಿಯಾಗಿರುವ ಈ ನಗರದಲ್ಲಿ ಸುಮಾರು 200 ಜೈನ ಸನ್ಯಾಸಿಗಳು ಈ ಹಿಂದೆ ಪ್ರತಿಭಟನೆ ನಡೆಸಿದ್ದು, ಇದೀಗ ಸರ್ಕಾರ ಈ ನಗರದಲ್ಲಿ ಮಾಂಸಾಹಾರದ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿದೆ.

ಮಾಂಸದ ಮಾರಾಟ, ಸೇವನೆ ಮತ್ತು ಮಾಂಸಕ್ಕಾಗಿ ಪ್ರಾಣಿಗಳನ್ನು ಕಡಿಯುವುದು ಇನ್ನು ಮುಂದೆ ಇಲ್ಲಿ ಕಾನೂನುಬಾಹಿರ ಮತ್ತು ಕಾನೂನಿನಿಂದ ಶಿಕ್ಷಾರ್ಹವಾಗಿದೆ. ಈ ಹಿಂದೆ ಪಾಲಿತಾನಾದಲ್ಲಿ 250 ಮಾಂಸದ ಅಂಗಡಿಗಳಿದ್ದವು, ಈ ಅಂಗಡಿಗಳನ್ನು ಮುಚ್ಚುವಂತೆ ಸುಮಾರು 200 ಜೈನ ಸನ್ಯಾಸಿಗಳು ಪ್ರತಿಭಟನೆ ನಡೆಸಿದ್ದರು.

ಜೈನರ ಪವಿತ್ರ ಯಾತ್ರಾ ಸ್ಥಳವಾಗಿರುವ  ಪಾಲಿತಾನ

ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ ಮೇಲೆ ಗುಂಡು ಹಾರಿಸಿದ್ದ ಯುವಕನಿಗೆ ಬರೀ 20 ವರ್ಷ: ಎಫ್‌ಬಿಐ

ಪಾಲಿತಾನ ಕೇವಲ ಒಂದು ನಗರವಲ್ಲ; ಇದು ಜೈನರ ಪವಿತ್ರ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ, ಇದು “ಜೈನ್ ಟೆಂಪಲ್ ಟೌನ್” ಎಂಬ ಅಡ್ಡಹೆಸರನ್ನು ಗಳಿಸಿದೆ. ಶತ್ರುಂಜಯ ಬೆಟ್ಟಗಳ ಸುತ್ತಲೂ ನೆಲೆಸಿರುವ ನಗರವು 800 ಕ್ಕೂ ಹೆಚ್ಚು ದೇವಾಲಯಗಳಿಗೆ ನೆಲೆಯಾಗಿದೆ, ಅತ್ಯಂತ ಪ್ರಸಿದ್ಧವಾದ ಆದಿನಾಥ ದೇವಾಲಯ ಇಲ್ಲಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 5:36 pm, Sun, 14 July 24