Viral Video: ಇದು ಕೆಂಪಿರುವೆ ಪಾನಿಪುರಿ, ಹೊಸ ಚಾಟ್ಸ್​ ಹೇಗಿದೆ ನೋಡಿ

|

Updated on: Oct 25, 2024 | 3:43 PM

ಸೋಶಿಯಲ್ ಮೀಡಿಯಾದಲ್ಲಿ ಕೆಂಪಿರುವೆ ಪಾನಿಪುರಿಯ ವಿಡಿಯೋ ವೈರಲ್ ಆಗುತ್ತಿದೆ. varuntotlani ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ಈ ವಿಡಿಯೋ 80,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಪಾನಿಪುರಿ ಪ್ರಿಯರಿಗೆ ಇದು ದೊಡ್ಡ ಆಘಾತವನ್ನುಂಟು ಮಾಡಿದ್ದು, ಅನೇಕರಲ್ಲಿ ಅಸಹ್ಯವನ್ನು ಉಂಟು ಮಾಡಿದೆ.

ಪಾನಿಪುರಿ, ಮಸಾಲೆಪುರಿ, ಸೇವ್​ ಪುರಿ ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ಸಂಜೆ ಹೊತ್ತಾದರೆ ಸಾಕು ಚಾಟ್ಸ್​​ ಅಂಗಡಿ ಮುಂದೆ ಜನವೋ ಜನ. ಇದೀಗ ಪಾನಿಪುರಿಯ ಹೊಸ ರೆಸಿಪಿಯ ವಿಡಿಯೊವೊಂದು ಸೋಶಿಯಲ್​​ ಮೀಡಿಯಾಗಳಲ್ಲಿ ಭಾರೀ ವೈರಲ್​​ ಆಗಿದೆ. ಪಾನಿಪುರಿಯ ಮೇಲೆ ಸತ್ತ ಕೆಂಪಿರುವೆಯಿಂದ ಅಲಂಕಾರ ಮಾಡಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಸದ್ಯ ಈ ವಿಡಿಯೋ ಪಾನಿಪುರಿ ಪ್ರಿಯರಿಗೆ ಶಾಕ್​ ನೀಡಿದೆ. varuntotlani ಎಂಬ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಈ ಕೆಂಪಿರುವೆ ಪಾನಿಪುರಿಯ ವಿಡಿಯೋ ಹಂಚಿಕೊಳ್ಳಲಾಗಿದೆ. ಅಕ್ಟೋಬರ್​​ 14ರಂದು ಹಂಚಿಕೊಂಡಿರುವ ಈ ವಿಡಿಯೋ ಇಲ್ಲಿಯವರೆಗೆ 80 ಸಾವಿರಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ