Video: ಎರಡೂವರೆ ವರ್ಷಗಳ ಬಳಿಕ ಅಮೆರಿಕದಿಂದ ಮಗಳ ಆಗಮನ, ಕಣ್ಣೀರಿಟ್ಟ ಹೆತ್ತವರು

ಹೆತ್ತವರು ತಮ್ಮ ಮಕ್ಕಳು ಉತ್ತಮ ಭವಿಷ್ಯ ಕಟ್ಟಿಕೊಳ್ಳಲೆಂದು ದೂರದ ಊರಿಗೆ ಕಳುಹಿಸಿಕೊಡುತ್ತಾರೆ. ಹೀಗಿರುವಾಗ ಮಕ್ಕಳು ಸರ್ಪ್ರೈಸ್ ವಿಸಿಟ್ ನೀಡಿದ್ರೆ ಹೆತ್ತವರು ಖುಷಿಯಲ್ಲಿ ತೇಲಾಡುತ್ತಾರೆ. ಇದೀಗ ಎರಡೂವರೆ ವರ್ಷಗಳ ಬಳಿಕ ಮಗಳು ಅಮೆರಿಕದಿಂದ ಮರಳಿದ್ದು, ಹೆತ್ತವರು ಭಾವುಕರಾಗಿದ್ದಾರೆ. ಈ ವಿಡಿಯೋ ಸದ್ಯ ವೈರಲ್ ಆಗಿದ್ದು, ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಎರಡೂವರೆ ವರ್ಷಗಳ ಬಳಿಕ ಅಮೆರಿಕದಿಂದ ಮಗಳ ಆಗಮನ, ಕಣ್ಣೀರಿಟ್ಟ ಹೆತ್ತವರು
ವೈರಲ್‌ ವಿಡಿಯೋ
Image Credit source: Instagram

Updated on: Oct 09, 2026 | 6:25 PM

ಹೊರ ರಾಜ್ಯ, ಹೊರ ದೇಶಕ್ಕೆ ತೆರಳಿದ ಮಕ್ಕಳು ಸರ್ಪ್ರೈಸ್ ಆಗಿ ವಿಸಿಟ್ ಕೊಟ್ಟರೆ ಆ ಕ್ಷಣ ಹೇಗಿರಬಹುದು. ಹೆತ್ತವರ (parents) ಖುಷಿಗೆ ಪಾರಾವೇ ಇರಲ್ಲ. ಇದೀಗ ಹೃದಯಸ್ಪರ್ಶಿ  ಕ್ಷಣಕ್ಕೆ ಸಾಕ್ಷಿಯಾಗಿದೆ ಈ ದೃಶ್ಯ. ಎರಡೂವರೆ ವರ್ಷಗಳ ಬಳಿಕ ಅಮೆರಿಕದಿಂದ ಮನೆಗೆ ಯುವತಿ ಬಂದಿದ್ದು, ಮುದ್ದಿನ ಮಗಳ ಸರ್ಪ್ರೈಸ್ ವಿಸಿಟ್‌ಗೆ ಹೆತ್ತವರ ಕಣ್ಣು ಒದ್ದೆಯಾಗಿದೆ. ಈ ಹೃದಯಸ್ಪರ್ಶಿ ಕ್ಷಣ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಅಮೆರಿಕದಿಂದ ಮರಳಿ ಹೆತ್ತವರಿಗೆ ಸರ್ಪ್ರೈಸ್ ನೀಡಿದ ಮಗಳು

ನಿಯಾತಿ (Niyati) ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಭಾವುಕ ಕ್ಷಣದ ವಿಡಿಯೋ ಹಂಚಿಕೊಂಡಿದ್ದಾರೆ. ಸುಮಾರು ಎರಡೂವರೆ ವರ್ಷಗಳ ಬಳಿಕ ಮನೆಗೆ ಮರಳಿ ಹೆತ್ತವರಿಗೆ ಸರ್ಪ್ರೈಸ್ ನೀಡಿದ್ದಾರೆ. ಈ ಸರ್ಪ್ರೈಸ್‌ನಲ್ಲಿ ಯುವತಿಯ ಸಹೋದರ ಭಾಗಿಯಾಗಿರುವುದನ್ನು ಕಾಣಬಹುದು. ಈ ಯುವತಿ ನಿಲ್ದಾಣದಲ್ಲಿ ಸಹೋದರನನ್ನು ಭೇಟಿಯಾಗಿ ಆ ಬಳಿಕ ಮನೆಗೆ ಮರಳಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಮಗಳ ಸರ್ಪ್ರೈಸ್‌ಗೆ ಹೆತ್ತವರು ಭಾವುಕ

ತಾನು ಬರುವ ವಿಚಾರ ಸಹೋದರನಿಗೆ ತಿಳಿಸಿದ್ದು, ಆದರೆ ಹೆತ್ತವರಿಗೆ ಯಾವುದೇ ಸುಳಿವು ನೀಡಿರಲಿಲ್ಲ ಎಂಬುದು ಈ ವಿಡಿಯೋದಲ್ಲಿ ಸ್ಪಷ್ಟವಾಗಿ ತಿಳಿಯುತ್ತದೆ. ಮನೆಗೆ ಮರಳಿದ ಮಗಳನ್ನು ಕಂಡು ತಾಯಿ ಭಾವುಕರಾಗಿದ್ದಾರೆ. ಮಗಳನ್ನು ಕಂಡೊಡನೆ ತಾಯಿ ಅಪ್ಪಿಕೊಂಡಿದ್ದಾರೆ. ಇನ್ನು ಕೆಲಸದಿಂದ ಮರಳಿದ ತಂದೆಗೂ ಕೂಡ ಮಗಳ ಸರ್ಪ್ರೈಸ್ ವಿಸಿಟ್ ಅಚ್ಚರಿ ತಂದಿದೆ. ದೀರ್ಘಕಾಲದ ಬಳಿಕ ಮಗಳನ್ನು ಕಂಡ ತಂದೆಯ ಕಣ್ಣು ಒದ್ದೆಯಾಗಿದೆ.

ಇದನ್ನೂ ಓದಿ: ರೈಲ್ವೆ ನಿಲ್ದಾಣದಲ್ಲಿ ಮುದ್ದಿನ ಮಗಳನ್ನು ಕೈ ಬೀಸುತ್ತಾ ಬೀಳ್ಕೊಟ್ಟ ಹೆತ್ತವರು

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಕಣ್ಣಲ್ಲಿ ನೀರು ಬಂತು ಎಂದಿದ್ದಾರೆ. ಇನ್ನೊಬ್ಬರು, ಹೆತ್ತವರ ಮುಖ ಭಾವವೇ ಎಲ್ಲವೂ ಹೇಳುತ್ತಿದೆ ಎಂದು ಕಾಮೆಂಟ್‌ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ, ಹೆತ್ತವರಿಗೆ ಮಕ್ಕಳ ಮುಖ ನೋಡಿದಾಗ ಆಗುವ ಸಂತೋಷ ಅಷ್ಟಿಷ್ಟಲ್ಲ ಎಂದು  ಹೇಳಿದ್ದಾರೆ

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Published On - 6:24 pm, Fri, 9 October 26

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us