AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ರೈಲ್ವೆ ನಿಲ್ದಾಣದಲ್ಲಿ ಮುದ್ದಿನ ಮಗಳನ್ನು ಕೈ ಬೀಸುತ್ತಾ ಬೀಳ್ಕೊಟ್ಟ ಹೆತ್ತವರು

ಓದು, ಉದ್ಯೋಗ ಎಂದು ದೂರದ ಊರಿಗೆ ಮಕ್ಕಳು ತೆರಳುವಾಗ ಹೆತ್ತವರು ಕಣ್ಣೀರು ಹಾಕುತ್ತಾರೆ. ಇದೀಗ ರೈಲು ನಿಲ್ದಾಣದಲ್ಲಿ ಮಗಳನ್ನು ಬೀಳ್ಕೊಡುವಾಗ ಹೆತ್ತವರ ಕಣ್ಣಂಚಲಿ ನೀರು ಜಿನುಗಿದೆ. ಈ ಹೃದಯ ಸ್ಪರ್ಶಿ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ರೈಲ್ವೆ ನಿಲ್ದಾಣದಲ್ಲಿ ಮುದ್ದಿನ ಮಗಳನ್ನು ಕೈ ಬೀಸುತ್ತಾ ಬೀಳ್ಕೊಟ್ಟ ಹೆತ್ತವರು
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on: Sep 20, 2026 | 4:14 PM

Share

ಮಕ್ಕಳ (children) ಭವಿಷ್ಯ ಚೆನ್ನಾಗಿರಲಿ ಎಂದು ಬಯಸುವವರೇ ಹೆತ್ತವರು. ಹೀಗಾಗಿ ಬಿಟ್ಟಿರುವುದು ಕಷ್ಟವಾದರೂ ಸರಿಯೇ, ಹೆತ್ತವರು (parents) ದೂರದ ಊರಿಗೆ ಕಳುಹಿಸಿಕೊಡುತ್ತಾರೆ. ಇದೀಗ ಇಂತಹದ್ದೆ ಭಾವುಕ ಕ್ಷಣಕ್ಕೆ ಈ ದೃಶ್ಯ ಸಾಕ್ಷಿಯಾಗಿದೆ. ರೈಲು ನಿಲ್ದಾಣದಲ್ಲಿ ಪೋಷಕರು ತಮ್ಮ ಮಕ್ಕಳನ್ನು ರೈಲು ಹತ್ತಿಸಿ ಕಳುಹಿಸಿಕೊಟ್ಟಿದ್ದಾರೆ. ಹೌದು, ರೈಲು ಹೊರಟರೂ ಅಪ್ಪ-ಅಮ್ಮ ಕೈ ಬೀಸುತ್ತಾ ನಿಂತಿರುವ ವಿಡಿಯೋ ಸದ್ಯ ವೈರಲ್ ಆಗಿದೆ. ಸುಂದರ ಬಾಂಧವ್ಯ ಸಾರುವ ಈ ದೃಶ್ಯ ನೆಟ್ಟಿಗರ ಹೃದಯ ಗೆದ್ದಿದೆ.

ರೈಲ್ವೆ ನಿಲ್ದಾಣದಲ್ಲಿ ಮಗಳನ್ನು ಬೀಳ್ಕೊಟ್ಟ ಹೆತ್ತವರು

ಖುಷಿ ಸೋಲಂಕಿ (Khushi Solanki) ಎಂಬ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋಗೆ ನನ್ನ ಪೋಷಕರು ನನ್ನನ್ನು ಬೀಳ್ಕೊಡುವ ರೀತಿಯೇ ನನ್ನ ನಿಜವಾದ ಶ್ರೀಮಂತಿಕೆ ಎಂದು ಶೀರ್ಷಿಕೆ ನೀಡಲಾಗಿದೆ.

ವೈರಲ್ ವಿಡಿಯೋ ಇಲ್ಲಿದೆ

ಈ ಕ್ಲಿಪಿಂಗ್ ನಲ್ಲಿ ಮಗಳನ್ನು ಬೀಳ್ಕೊಡಲು ರೈಲ್ವೆ ನಿಲ್ದಾಣಕ್ಕೆ ಹೆತ್ತವರು ಬಂದಿರುವುದನ್ನು ಕಾಣಬಹುದು. ರೈಲು ಹೊರಡಲು ಸಿದ್ಧವಾಗಿದ್ದಾಗ ಕಿಟಕಿಯಿಂದ ಅಪ್ಪ ಅಮ್ಮನ ಮುಖಭಾವವನ್ನು ತನ್ನ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ರೈಲು ಚಲಿಸಲು ಆರಂಭಿಸುತ್ತಿದ್ದಂತೆ ರೈಲು ನಿಲ್ದಾಣದಲ್ಲಿ ನಿಂತಿದ್ದ ಹೆತ್ತವರು ಕೈಬೀಸಿದ್ದಾರೆ. ರೈಲು ಮುಂದೆ ಸಾಗಿಸಿದ್ರೂ ಹೆತ್ತವರು ಕೈ ಬೀಸುವುದು ಮಾತ್ರ ನಿಂತಿಲ್ಲ, ಮೊಗದಲ್ಲಿ ನಗು ತುಂಬಿದೆ. ರೈಲಿನಲ್ಲಿ ನಿಂತ ಮಗಳು ಫೋಟೋ ಅಥವಾ ವಿಡಿಯೋ ಮಾಡುತ್ತಿದ್ದಾರೆ.

ಇದನ್ನೂ ಓದಿ: ಮಗನ ಜತೆಗೆ ಹೆತ್ತವರ ಮೊದಲ ವಿಮಾನ ಪ್ರಯಾಣ, ವೈರಲ್ ಆಯ್ತು ದೃಶ್ಯ

ಈ ವಿಡಿಯೋ 2.9 ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಈ ಸುಂದರ ಕ್ಷಣವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಇನ್ನೊಬ್ಬರು, ಇಂತಹ ಮುಗ್ಧ ಜನರನ್ನು ಈ ಜನರೇಶನ್ ನಲ್ಲಿ ಮಾತ್ರ ಕಾಣಲು ಸಾಧ್ಯ ಎಂದು ಹೇಳಿದ್ದಾರೆ. ಮತ್ತೊಬ್ಬರು, ಇಂತಹ ಹೆತ್ತವರನ್ನು ಪಡೆದ ನೀವೇ ಧನ್ಯರು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More