ಸಂಗಾತಿಯನ್ನು ಕಳೆದುಕೊಂಡು ಮರುಗುತ್ತಿರುವ ನವಿಲು: ಮನಕಲಕುವ ವಿಡಿಯೋ ವೈರಲ್​

ಇಲ್ಲೊಂದು ನವಿಲು ಸಾವನ್ನಪ್ಪಿದ ಸಂಗಾತಿಯನ್ನು ಕಳುಹಿಸಿಕೊಡಲು ವೇದನೆ ಪಡುತ್ತಿರುವ ವೀಡಿಯೋ ನೆಟ್ಟಿಗರನ್ನು ಮನಕಲಕುವಂತೆ ಮಾಡಿದೆ.

ಸಂಗಾತಿಯನ್ನು ಕಳೆದುಕೊಂಡು ಮರುಗುತ್ತಿರುವ ನವಿಲು: ಮನಕಲಕುವ ವಿಡಿಯೋ ವೈರಲ್​
Edited By:

Updated on: Jan 06, 2022 | 10:20 AM

ಸಾಮಾಜಿಕ ಜಾಲತಾಣದಲ್ಲಿ ಕೇವಲ ತಮಾಷೆ, ಹೊಸ ವಿಚಾರಗಳು ಮಾತ್ರವಲ್ಲದೆ ಮನಕಲಕುವ, ಹೃದಯಸ್ಪರ್ಶಿ ವಿಡಿಯೋಗಳೂ ಕೂಡ ವೈರಲ್​ ಆಗುತ್ತವೆ. ಪ್ರೀತಿ ಪಾತ್ರರ ಸಾವು ಮನುಷ್ಯನಿಗೆ ಮಾತ್ರವಲ್ಲ ಪ್ರಾಣಿ, ಪಕ್ಷಿಗಳಿಗೂ ಅತೀವ ದುಃಖವನ್ನು ನೀಡುತ್ತದೆ. ಇದೀಗ ಇಲ್ಲೊಂದು ನವಿಲು ಸಾವನ್ನಪ್ಪಿದ ಸಂಗಾತಿಯನ್ನು ಕಳುಹಿಸಿಕೊಡಲು ವೇದನೆ ಪಡುತ್ತಿರುವ ವಿಡಿಯೋನೆಟ್ಟಿಗರನ್ನು ಮನಕಲಕುವಂತೆ ಮಾಡಿದೆ. ಸಾಮಾನ್ಯವಾಗಿ ನವಿಲುಗಳು ಒಂದೇ ಸಂಗಾತಿಯೊಂದಿಗೆ ಬದುಕುವುದಿಲ್ಲ. ಆದರೆ ಇಲ್ಲೊಂದು ನವಿಲು ನಾಲ್ಕು ವರ್ಷ ತನ್ನೊಟ್ಟಿಗೆ ಇದ್ದ ಸಂಗಾತಿಯನ್ನು ಕಳೆದುಕೊಂಡು ನೋವು ಪಡುತ್ತಿದೆ. ಈ ಘಟನೆ ರಾಜಸ್ಥಾನದ ಕುಚೇರಾ ನಗರದಲ್ಲಿ ನಡೆದಿದೆ. ಸದ್ಯ ಟ್ವಿಟರ್​ನಲ್ಲಿ ಈ ವಿಡಿಯೋ ವೈರಲ್​ ಆಗಿದೆ.

ವೀಡಿಯೋದಲ್ಲಿ ಇಬ್ಬರು ಯುವಕರು ಸಾವನ್ನಪ್ಪಿದ ನವಿಲನ್ನು ಎರಡು ಬದಿಗಳಲ್ಲಿ ಹಿಡಿದು ತೆಗೆದುಕೊಂಡು ಅಂತ್ಯಕ್ರಿಯೆ ನಡೆಸಲು ಹೋಗುತ್ತಿರುತ್ತಾರೆ. ಆದರೆ ಇನ್ನೊಂದು ನವಿಲು ಹಿಂದಿನಿಂದ ಅವರ ಹಿಂದೆಯೇ ಓಡುತ್ತಿರುವುದನ್ನು ಕಾಣಬಹುದು. ಈ ಮನಕಲಕುವ ವೀಡಿಯೋವನ್ನು ರಾಜಸ್ಥಾನದ ಅರಣ್ಯ ಅಧಿಕಾರಿ ಪರ್ವೀಣ್​ ಕಸ್ವಾನ್​ ಎನ್ನುವವರು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು, ನವಿಲು ತನ್ನ ಸಂಗಾತಿಯಿಂದ ದೂರವಾಗಿರುವುದಕ್ಕೆ ರೋಧಿಸುತ್ತಿದೆ. ಸಂಗಾತಿಯಿಂದ ದೂರವಾಗಲು ಯಾರೂ ಇಷ್ಟಪಡುವುದಿಲ್ಲ ಎಂದು ಬರೆದುಕೊಂಡಿದ್ದಾರೆ.

ಸದ್ಯ ಈ 19 ಸೆಕೆಂಡುಗಳ ವೀಡಿಯೋ 2 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದ್ದು, 15 ಸಾವಿರಕ್ಕೂ ಹೆಚ್ಚು ಲೈಕ್ಸ್​ ಪಡೆದಿದೆ.  ನವಿಲು ವೇದನೆ ಪಡುತ್ತಿರುವ ಮನಕಲಕುವ ವೀಡಿಯೋ ನೆಟ್ಟಿಗರನ್ನು ಸೆಳೆದಿದ್ದು, ಬೇಸರದ ಎಮೋಜಿ ಮೂಲಕ ಪ್ರತಿಕ್ರಯಿಸಿದ್ದಾರೆ.

Published On - 9:46 am, Thu, 6 January 22