ಇತ್ತೀಚಿಗಂತೂ ರಸ್ತೆ ಬದಿಗಳಲ್ಲಿ, ಕಂಡ ಕಂಡ ಸ್ಥಳಗಳಲ್ಲಿ ಕಸ ಎಸೆದು ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಈ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ, ಕಸ ಎಸೆದರೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ರೂ ಜನ ಮಾತ್ರ ಇದಕ್ಕೆಲ್ಲ ಕ್ಯಾರೇ ಅನ್ನದೆ ಎಲ್ಲೆಂದರಲ್ಲಿ ಕಸ ಎಸೆದು ಹೋಗ್ತಾರೆ. ಈ ಕಸದ ಸಮಸ್ಯೆಯಿಂದ ಬೇಸತ್ತ ಇಲ್ಲೊಂದು ಊರಿನ ಜನ “ಕಸದೊಂದಿಗೆ ನಿಮ್ಮ ಪಿಂಡ ಪ್ರದಾನವನ್ನು ಸಹ ಇಲ್ಲೇ ಮಾಡುವ; ಕಸ ಬಿಸಾಡುವ ಆತ್ಮಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ” ಎಂದು ಬರೆದಿರುವ ಬ್ಯಾನರ್ ಒಂದನ್ನು ಅಳವಡಿಸಿ ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ. ಈ ಬ್ಯಾನರ್ ಫೋಟೋ ಇದೀಗ ಸಖತ್ ವೈರಲ್ ಆಗಿದೆ.
ಇಲ್ಲಿ ಕಸ ಹಾಕಬಾರದು ಎಂಬ ಎಚ್ಚರಿಕೆಯ ಫಲಕ ಅಳವಡಿಸಿದರು ಕೂಡಾ ಕೆಲ ಜನ ಆ ಜಗದಲ್ಲಿಯೇ ಕಸವನ್ನು ಹಾಕಿ ಪರಿಸರದ ಸ್ವಚ್ಛತೆಯನ್ನು ಮತ್ತು ಸೌಂದರ್ಯವನ್ನು ಹಾಳು ಮಾಡುತ್ತಿದ್ದಾರೆ. ಕಸ ಎಸೆಯಬೇಡಿ ಎಂದು ಎಷ್ಟೇ ಹೇಳಿದರೂ ಮಾತು ಕೇಳದ ಜನರಿಗೆ ತಕ್ಕ ಪಾಠವನ್ನು ಕಲಿಸಬೇಕೆಂದು ಇಲ್ಲೊಂದು ಊರಿನ ಜನ “ಕಸದೊಂದಿಗೆ ನಿಮ್ಮ ಪಿಂಡ ಪ್ರದಾನವನ್ನು ಸಹ ಇಲ್ಲೇ ಮಾಡುವ; ಕಸ ಬಿಸಾಡುವ ಆತ್ಮಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ” ಎಂದು ಬರೆದಿರುವ ಬ್ಯಾನರ್ ಒಂದನ್ನು ಅಳವಡಿಸಿ ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ.
Mr_chintu_memes ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಈ ಫೋಟೋದಲ್ಲಿ ಬ್ಯಾನರ್ ಒಂದರಲ್ಲಿ ನಿನ್ನ ಹೆಣ ಸುಡಲು ಇನ್ನೂ ಕಸ ಬೇಕು ಹಾಗಾಗಿ ಕಸ ತಂದು ಹಾಕು, ಕಸದೊಂದಿಗೆ ನಿನ್ನ ಪಿಂಡ ಪ್ರದಾನ ಇಲ್ಲೇ ಮಾಡುವ ʼಭಾವಪೂರ್ಣ ಶ್ರದ್ಧಾಂಜಲಿ; ಇಲ್ಲಿ ಕಸ ಬಿಸಾಡುವ ದಿವ್ಯ ಆತ್ಮಗಳಿಗೆ ಅರ್ಪಣೆ ಎಂದು ಎಚ್ಚರಿಕೆ ಸಂದೇಶವನ್ನು ಬರೆದಿರುವುದನ್ನು ಕಾಣಬಹುದು. ಈ ಎಚ್ಚರಿಕೆಯ ಬ್ಯಾನರ್ ಇದೀಗ ಫುಲ್ ವೈರಲ್ ಆಗುತ್ತಿದೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ