ಇನ್ಸ್‌ಪೆಕ್ಟರ್ ಮನೆಯ ಯುವತಿ ಸ್ನಾನ ಮಾಡುವುದನ್ನ ವಿಡಿಯೋ ಮಾಡಿದ ​​​ಚಾಲಕ

ರಕ್ಷಣೆ ನೀಡಬೇಕಾದ ಪೊಲೀಸರೇ ಅಸಭ್ಯವಾಗಿ ವರ್ತಿಸಿದ್ದಾರೆ. ಕೊಯಮತ್ತೂರಿನಲ್ಲಿ ಇನ್ಸ್‌ಪೆಕ್ಟರ್ ಮನೆ ಕೆಲಸದಾಕೆಯ ಸ್ನಾನ ಮಾಡುವುದನ್ನು ವಿಡಿಯೋ ಮಾಡಿದ​ ಪೊಲೀಸ್ ವಾಹನ ಚಾಲಕ ಮಾಧವ ಕಣ್ಣನ್​​ನ್ನು ಬಂಧನ ಮಾಡಿದ್ದಾರೆ. ಈ ಘಟನೆ ಪೊಲೀಸರ ಮೇಲಿನ ನಂಬಿಕೆಗೆ ಧಕ್ಕೆ ತಂದಿದೆ. ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದು, ಇದೀಗ ಈ ಕೃತ್ಯದ ಬಗ್ಗೆ ತನಿಖೆ ಮುಂದುವರೆದಿದೆ.

ಇನ್ಸ್‌ಪೆಕ್ಟರ್ ಮನೆಯ ಯುವತಿ ಸ್ನಾನ ಮಾಡುವುದನ್ನ ವಿಡಿಯೋ ಮಾಡಿದ ​​​ಚಾಲಕ
ಸಾಂದರ್ಭಿಕ ಚಿತ್ರ

Updated on: Dec 23, 2025 | 3:38 PM

ರಕ್ಷಣೆ ಮಾಡಬೇಕಾದ ಪೊಲೀಸರೇ ಮಾನ ಮರ್ಯಾದೆ ಬಿಟ್ಟು ಅಸಭ್ಯವಾಗಿ ನಡೆದುಕೊಂಡರೆ ಸಾಮಾನ್ಯ ಜನರ ಕಥೆ ಏನು? ಇತ್ತೀಚಿನ ದಿನಗಳಲ್ಲಿ (police misconduct) ಪೊಲೀಸರು ಕಳ್ಳತನ, ಮೋಸದಂತಹ ಪ್ರಕರಣದಲ್ಲಿ ಶಾಮೀಲು ಆಗುತ್ತಿದ್ದಾರೆ. ಇದೀಗ ಕೊಯಮತ್ತೂರಿನ ಪೊಲ್ಲಾಚಿ ತಾಲೂಕು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್​​ನ ಮನೆಯ ಕೆಲಸದಾಕೆ ಮೇಲೆ ಪೊಲೀಸ್ ವಾಹನ ಚಾಲಕ ಕಣ್ಣಾಕಿದ ಘಟನೆಯೊಂದು ನಡೆದಿದೆ. ಇನ್ಸ್‌ಪೆಕ್ಟರ್ ತಮ್ಮ ಹೆಣ್ಮಕ್ಕಳನ್ನು ನೋಡಿಕೊಳ್ಳಲು ಹತ್ತಿರದ ಸಂಬಂಧಿಕದ ಯುವತಿಯೊಬ್ಬಳನ್ನು ಕೆಲಸಕ್ಕೆ ಇಟ್ಟುಕೊಂಡಿದ್ದರು. ಕಳೆದ ಎರಡು ದಿನಗಳಿಂದ ಠಾಣೆಯಲ್ಲಿ ಕೆಲಸ ಹೆಚ್ಚಿದ್ದ ಕಾರಣ ಇನ್ಸ್‌ಪೆಕ್ಟರ್ ಮನೆಗೆ ಹೋಗಲು ಸಾಧ್ಯವಾಗದೇ ಠಾಣೆಯಲ್ಲೇ ಉಳಿಯಬೇಕಾದ ಅನಿವಾರ್ಯ ಬಂದಿತ್ತು. ಈ ವೇಳೆ ಮನೆಯಲ್ಲಿ ಇಬ್ಬರು ಹೆಣ್ಮಕ್ಕಳು ಹಾಗೂ ಈ ಯುವತಿ ಇರುವ ಕಾರಣ, ಚಾಲಕನನ್ನು ಇನ್ಸ್‌ಪೆಕ್ಟರ್ ಅವರ ಮನೆಗೆ ಕಳುಹಿಸಿದ್ದಾರೆ. ಆದರೆ ಆತ ಮನೆಗೆ ಬಂದು ಮಾಡಿದ್ದು ಬೇರೆಯೇ.

ಮಾಧವ ಕಣ್ಣನ್​​​ ಎಂಬ ಈ ಪೊಲೀಸ್ ವಾಹನ ಚಾಲಕ ತಮ್ಮ ಮೇಲಾಧಿಕಾರಿ ಹೇಳಿದಂತೆ ಇನ್ಸ್‌ಪೆಕ್ಟರ್ ಮನೆಗೆ ಹೋಗುತ್ತಾನೆ. ಇನ್ಸ್‌ಪೆಕ್ಟರ್ ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳುತ್ತಿದ್ದ ಯುವತಿ ಸಾನ್ನ ಮಾಡುವುದು ರಹಸ್ಯವಾಗಿ ವೀಡಿಯೊ ರೆಕಾರ್ಡ್ ಮಾಡಿದ್ದಾನೆ. ಇದನ್ನು ನೋಡಿದ ಯುವತಿ ಆಘಾತಗೊಂಡು ಏನು ಮಾಡಬೇಕೆಂದು ತೋಚದೆ ದಿಗ್ಭ್ರಮೆಗೊಂಡು, ತಕ್ಷಣ ಇನ್ಸ್‌ಪೆಕ್ಟರ್ ಫೋನ್​​ ಮಾಡಿ ಎಲ್ಲವನ್ನು ಹೇಳಿದ್ದಾಳೆ.

ಇದನ್ನೂ ಓದಿ: 8,000 ಮೈಲಿ ಪ್ರಯಾಣ ಮಾಡಿ ಸ್ನೇಹಿತನಿಗೆ ಸರ್ಪ್ರೈಸ್ ನೀಡಿದ ಯುವಕ

ಘಟನೆಯ ಬಗ್ಗೆ ತಕ್ಷಣವೇ ಇನ್ಸ್‌ಪೆಕ್ಟರ್ ಮಧುಕ್ಕರೈ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, . ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಮಗ್ರ ತನಿಖೆ ನಡೆಸಿದ್ದಾರೆ. ವಿಡಿಯೋ ಸಾಕ್ಷ್ಯಾಧಾರದ ಮೇಲೆ ಇನ್ಸ್‌ಪೆಕ್ಟರ್‌ನ ಚಾಲಕನ ಮಾಧವ ಕಣ್ಣನ್ ನ್ನು ಬಂಧಿಸಿ ಜೈಲಿಗೆ ಹಾಕಿದ್ದಾರೆ. ಇದೀಗ ಚಾಲಕನ ವಿಚಾರಣೆ ನಡೆಸಲಾಗುತ್ತಿದೆ. ದೇಶದಲ್ಲಿ ಪೊಲೀಸರೇ ಇಂತಹ ಕೃತ್ಯಕ್ಕೆ ಇಳಿದಿರುವುದು ಸಾರ್ವಜನಿಕರಲ್ಲಿ ಆಂತಕಕ್ಕೆ ಕಾರಣವಾಗಿದೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Published On - 3:29 pm, Tue, 23 December 25