Video: ಮಕ್ಕಳಂತೆ ಕ್ಯೂಟ್​​​ ಆಗಿ ಕಾಣಿಸುತ್ತಿರುವ ಪ್ರಧಾನಿ ಮೋದಿ, ರಾಹುಲ್​​ ಗಾಂಧಿ, ಅಮಿತ್​​ ಶಾ

ಕಳೆದ ಕೆಲವು ವರ್ಷಗಳಿಂದ ಎಐ ತಂತ್ರಜ್ಞಾನದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಈ ಎಐ ತಂತ್ರಜ್ಞಾನವು ಎಲ್ಲೆಡೆ ವ್ಯಾಪಿಸಿದ್ದು, ಇದನ್ನು ಬಳಸಿ ಫೋಟೋ ಹಾಗೂ ವಿಡಿಯೋ ಎಡಿಟ್ ಮಾಡಲಾಗುತ್ತದೆ. ಆದರೆ ಇದೀಗ ಭಾರತದ ರಾಜಕಾರಣಿಗಳು ಪುಟಾಣಿ ಮಕ್ಕಳಾಗಿ ಪಾರ್ಲಿಮೆಂಟ್ ನಲ್ಲಿ ಸೇರಿದರೆ ಹೇಗಿರುತ್ತದೆ ಎಂದು ಒಮ್ಮೆ ಊಹಿಸಿದ್ದೀರಾ. ಹೌದು, ಮೋದಿಜಿ, ದ್ರೌಪದಿ ಮುರ್ಮು, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಸೇರಿದಂತೆ ಇನ್ನಿತ್ತರ ನಾಯಕರನ್ನು ಪುಟಾಣಿ ಮಕ್ಕಳಂತೆ ಎಡಿಟ್ ಮಾಡಲಾಗಿದೆ. ಈ ವಿಡಿಯೋವೊಂದು ನೆಟ್ಟಿಗರ ಮನಸ್ಸನ್ನು ಗೆದ್ದುಕೊಂಡಿದೆ.

Video: ಮಕ್ಕಳಂತೆ ಕ್ಯೂಟ್​​​  ಆಗಿ ಕಾಣಿಸುತ್ತಿರುವ  ಪ್ರಧಾನಿ ಮೋದಿ, ರಾಹುಲ್​​ ಗಾಂಧಿ, ಅಮಿತ್​​ ಶಾ
ವೈರಲ್ ವಿಡಿಯೋ
Image Credit source: Twitter
Edited By:

Updated on: May 22, 2025 | 12:17 PM

ಇಂದಿನ ಆಧುನಿಕ ತಂತ್ರಜ್ಞಾನ (technology) ದಲ್ಲಿ ಯಾವುದು ಸಾಧ್ಯವಿಲ್ಲ ಹೇಳಿ. ಅದರಲ್ಲಿಯೂ ಈ ಎಐ ಬಂದ ಮೇಲಂತೂ ಎಲ್ಲವೂ ಸಾಧ್ಯ ಎನ್ನುವಂತಾಗಿದೆ. ಕೃತಕ ಬುದ್ಧಿಮತ್ತೆ (Artificial Intelligence) ತಂತ್ರಜ್ಞಾನವು, ವೈದ್ಯಕೀಯ, ಶಿಕ್ಷಣ, ವ್ಯವಹಾರ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿ ವ್ಯಾಪಿಸಿದೆ. ಈ ತಂತ್ರಜ್ಞಾನ ಬಳಸಿ ಅಸಾಧ್ಯವಾದದ್ದನ್ನು ಸಾಧ್ಯ ಎನ್ನುವಂತೆ ಮಾಡುವ ಸಾಕಷ್ಟು ವಿಡಿಯೋಗಳನ್ನು ನೀವು ನೋಡಿರಬಹುದು. ಆದರೆ ಇದೀಗ ಎಐ ಕೈ ಚಳಕದಲ್ಲಿ ಮತ್ತೊಂದು ವಿಡಿಯೋ ಮೂಡಿ ಬಂದಿದ್ದು, ಇದರಲ್ಲಿ ಭಾರತದ ರಾಜಕೀಯ ನಾಯಕ (Indian politician) ರು ಪುಟಾಣಿ ಮಕ್ಕಳಾಗಿ ಸಂಸತ್ತಿನಲ್ಲಿ ಸೇರಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಬೆರಗಾಗಿದ್ದಾರೆ.

@theprataftiwari ಹೆಸರಿನ ಖಾತೆಯಲ್ಲಿ ಎಐ ರಚಿಸಲಾಗಿರುವ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ನಮ್ಮ ದೇಶದ ರಾಜಕಾರಣಿಗಳು ಮಕ್ಕಳಾಗಿ ಸಂಸತ್ತಿನಲ್ಲಿ ಕಾಣಿಸಿಕೊಂಡರೆ ಹೇಗಿರುತ್ತದೆ ಎಂದು ನೋಡಬಹುದು. ಈ ವಿಡಿಯೋದ ಪ್ರಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಅಧಿವೇಶನದಲ್ಲಿ ಮಾತನಾಡುವುದನ್ನು ಕಾಣಬಹುದು. ಅದಲ್ಲದೇ, ರಾಷ್ಟ್ರಪತಿ ದ್ರೌಪದಿ ಮುರ್ಮು, ಅಮಿತ್ ಶಾ, ಓಂ ಬಿರ್ಲಾ, ಮಹುಮಾ ಮೊಯಿತ್ರಾ, ಉಪರಾಷ್ಟ್ರ ಪತಿ ಜಗದೀಪ್ ಧನಕರ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್,  ಬಾರಾಮತಿ ಸಂಸದೆ ಸುಪ್ರಿಯಾ ಸುಳೆ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ , ರಾಹುಲ್ ಗಾಂಧಿ ಸೇರಿದಂತೆ ನಾಯಕರು ಪುಟಾಣಿ ರಾಜಕಾರಣಿಗಳಾಗಿ ಕಾಣಿಸಿಕೊಂಡಿರುವುದನ್ನು ನೋಡಬಹುದು.

ಇದನ್ನೂ ಓದಿ
ಕೆಲಸಕ್ಕೆ ಮನುಷ್ಯರನ್ನು ಇಂಟರ್​​​ವ್ಯೂ ಮಾಡುತ್ತಿವೆ ಯಂತ್ರಗಳು...
ಇನ್ಮುಂದೆ ಬೆಂಗಳೂರಿನ ರಸ್ತೆಯಲ್ಲಿ ಓಡಾಡಲಿದೆ ಟೈಟಾನಿಕ್​​​​ ಹಡಗು
ಲಾರಿಗೆಡಿಕ್ಕಿ ಹೊಡೆದ ಕಾರು, ಮೂವರು ಸಾವು
ಈ ಮನೆಯಲ್ಲಿ ಹಾವುಗಳದ್ದೇ ರಾಶಿ, ವಿಡಿಯೋ ವೈರಲ್

ಇದನ್ನೂ ಓದಿ : ಚಾರ್ಮಾಡಿ ಘಾಟ್​​​ನಲ್ಲಿ ಕಾಡಾನೆ ಜತೆ ಸೆಲ್ಫೀ ಕ್ಲಿಕ್ಕಿಸಲು ಮುಂದಾದ ಪ್ರಯಾಣಿಕ: ರೊಚ್ಚಿಗೆದ್ದ ಸಲಗದ ವಿಡಿಯೋ ವೈರಲ್

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಮೇ 21 ರಂದು ಶೇರ್ ಮಾಡಲಾದ ಈ ವಿಡಿಯೋ ಈಗಾಗಲೇ ಎರಡು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಬಳಕೆದಾರರೊಬ್ಬರು ಈ ವಿಡಿಯೋ ತುಂಬಾ ಚೆನ್ನಾಗಿದೆ ಎಂದಿದ್ದಾರೆ. ಮತ್ತೊಬ್ಬರು, ಈ ವಿಡಿಯೋದಲ್ಲಿ ಯಾವ ರಾಜಕಾರಣಿ ಅತ್ಯಂತ ಮುದ್ದಾಗಿದ್ದಾರೆ ಎಂದು ಕೇಳಿದ್ದಾರೆ. ಇನ್ನೊಬ್ಬರು, ರಾಹುಲ್ ಗಾಂಧಿ ತುಂಬಾನೇ ಮುದ್ದಾಗಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 12:07 pm, Thu, 22 May 25