Video: ದುಬೈ ಮೆಟ್ರೋದಂತಿದೆ; ಜೈಪುರ ಮೆಟ್ರೋ ಸೇವೆ ಕಂಡು ಅಚ್ಚರಿ ವ್ಯಕ್ತಪಡಿಸಿದ ರಷ್ಯನ್ ಮಹಿಳೆ

ಭಾರತಕ್ಕೆ ಬರುವ ವಿದೇಶಿಗರು ಇಲ್ಲಿನ ಜನರ ನಡೆ ನುಡಿಗೆ ಫಿದಾ ಆಗೋದಿದೆ. ಆದರೆ ಇಲ್ಲೊಬ್ಬ ರಷ್ಯನ್ ಮಹಿಳೆ ಜೈಪುರ ಮೆಟ್ರೋದ ಸ್ವಚ್ಛತಾ ನಿರ್ವಹಣೆಯನ್ನು ಹಾಡಿ ಹೊಗಳಿದ್ದಾರೆ. ದುಬೈ ಮೆಟ್ರೋದಂತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ದುಬೈ ಮೆಟ್ರೋದಂತಿದೆ; ಜೈಪುರ ಮೆಟ್ರೋ ಸೇವೆ ಕಂಡು ಅಚ್ಚರಿ ವ್ಯಕ್ತಪಡಿಸಿದ ರಷ್ಯನ್ ಮಹಿಳೆ
ವೈರಲ್‌ ವಿಡಿಯೋ
Image Credit source: Instagram

Updated on: Sep 29, 2026 | 11:15 AM

ಭಾರತಕ್ಕೆ ಬಂದ ವಿದೇಶಿಗರು (Foreigner) ಇಲ್ಲಿನ ಆಹಾರದಿಂದ ಹಿಡಿದು ಪ್ರವಾಸಿ ತಾಣಗಳನ್ನು ಇಷ್ಟ ಪಡ್ತಾರೆ. ಇನ್ನು ಇಲ್ಲಿನ ಬಸ್ಸು, ರೈಲು, ಆಟೋಗಳಲ್ಲಿ ಓಡಾಡಿ ಪ್ರತಿಯೊಂದು ಕ್ಷಣವನ್ನು ಆನಂದಿಸುತ್ತಾರೆ. ಆಧುನಿಕ ಮೂಲ ಸೌಕರ್ಯಗಳನ್ನು ಒಳಗೊಂಡ ಭಾರತದ ಮೆಟ್ರೋ ಸೇವೆಯು ವಿದೇಶಿ ಮಹಿಳೆಯ ಗಮನ ಸೆಳೆದಿದೆ. ಸ್ವಚ್ಛತೆ ಹಾಗೂ ಸಿಬ್ಬಂದಿಗಳ ನಡವಳಿಕೆಯ ಬಗ್ಗೆ ರಷ್ಯನ್ ಮಹಿಳೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೈಪುರ ಮೆಟ್ರೋದಲ್ಲಿ ಪ್ರಯಾಣಿಸಿ ಇಲ್ಲಿನ ಸೌಲಭ್ಯ ಕಂಡು ಫಿದಾ ಆದ ವಿಡಿಯೋ ಸದ್ಯ ವೈರಲ್ ಆಗಿದೆ.

ಜೈಪುರ ಮೆಟ್ರೋ ಸೇವೆಗೆ ವಿದೇಶಿ ಮಹಿಳೆ ಫುಲ್ ಫಿದಾ

ವೆರಾ ಪ್ರೊಕೊಫೇವಾ (Vera Prokofeva) ಎಂಬ ರಷ್ಯನ್ ಮಹಿಳೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಈ ಕ್ಲಿಪಿಂಗ್ ನಲ್ಲಿ ವೆರಾ ಪ್ರೊಕೊಫೇವಾ ತನ್ನ ಸ್ನೇಹಿತೆಯೊಂದಿಗೆ ಮೊದಲ ಬಾರಿಗೆ ರಾಜಸ್ಥಾನದ ಜೈಪುರಕ್ಕೆ ಬಂದಿದ್ದು, ಹವಾ ಮಹಲ್‌ಗೆ ತೆರಳಲು ಟಿಕೆಟ್ ಪಡೆದು ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ. ಇಲ್ಲಿ ತನ್ನ ಸ್ನೇಹಿತೆಯ ಜತೆಗೆ ಮೆಟ್ರೋ ಪ್ಲಾಟ್ ಫಾರ್ಮ್ ಕಡೆಗೆ ಬರುತ್ತಿರುವುದನ್ನು ಕಾಣಬಹುದು. ಮೆಟ್ರೋ ಸೇವೆ ಹಾಗೂ ಸ್ವಚ್ಛತೆ ಕಂಡು ಅಚ್ಚರಿ ವ್ಯಕ್ತಪಡಿಸಿದ್ದು 10/10 ರೇಟಿಂಗ್ ನೀಡಿದ್ದಾರೆ. ಇಲ್ಲಿನ ಆಧುನಿಕ ವ್ಯವಸ್ಥೆಯನ್ನು ಕಂಡು, ಇದು ನೋಡಲು ದುಬೈ ಮೆಟ್ರೋದಂತಿದೆ ಎಂದು ಹೇಳಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಐಷಾರಾಮಿ ಬದುಕಿಗೆ ಗುಡ್ ಬೈ ಹೇಳಿ ಭಾರತದ ಸೊಸೆಯಾದ ವಿದೇಶಿ ಮಹಿಳೆ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ವಿದೇಶಿಗರ ಬಾಯಲ್ಲಿ ಇಂತಹ ಮಾತುಗಳನ್ನು ಕೇಳಲು ಖುಷಿಯಾಗುತ್ತದೆ ಎಂದಿದ್ದಾರೆ. ಇನ್ನೊಬ್ಬರು, ಭಾರತವನ್ನು ವಿದೇಶಕ್ಕೆ ಹೋಲಿಸುವುದು ನಿಜಕ್ಕೂ ಹೆಮ್ಮೆ ಪಡುವ ವಿಷಯ ಎಂದು ಹೇಳಿದ್ದಾರೆ. ಮತ್ತೊಬ್ಬರು, ಜೈಪುರಕ್ಕೆ ನಿಮ್ಗೆ ಸ್ವಾಗತ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us