ಪಾಕಿಸ್ತಾನದ ಜಿಡಿಪಿ ಬೆಂಗಳೂರಿನ ರಸ್ತೆಯಲ್ಲಿ, ರೋಲ್ಸ್ ರಾಯ್ಸ್ ಕಾನ್ವೊಯ್ ವಿಡಿಯೋ ವೈರಲ್

ಬೆಂಗಳೂರಿನ ರಸ್ತೆಗಳಲ್ಲಿ ರೋಲ್ಸ್ ರಾಯ್ಸ್ ಕಾರುಗಳ ಬೆಂಗಾವಲುಪಡೆ ವೈರಲ್ ಆಗಿದೆ. 10ಕ್ಕೂ ಹೆಚ್ಚು ದುಬಾರಿ ಕಾರುಗಳು ಸಾಲುಗಟ್ಟಿ ಸಾಗಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ದೃಶ್ಯ ನೋಡಿ ನೆಟ್ಟಿಗರು ಬೆಂಗಳೂರನ್ನು ಶ್ರೀಮಂತ ನಗರ ಎಂದು ಬಣ್ಣಿಸಿದ್ದು, 'ಪಾಕಿಸ್ತಾನದ ಜಿಡಿಪಿ ಬೆಂಗಳೂರು ರಸ್ತೆಯಲ್ಲಿದೆ' ಎಂದು ಪ್ರತಿಕ್ರಿಯಿಸಿದ್ದಾರೆ. ಇದು ನಗರದ ಐಷಾರಾಮಿ ಜೀವನಶೈಲಿಯ ಬಗ್ಗೆ ಹೇಳುತ್ತದೆ.

ಪಾಕಿಸ್ತಾನದ ಜಿಡಿಪಿ ಬೆಂಗಳೂರಿನ ರಸ್ತೆಯಲ್ಲಿ, ರೋಲ್ಸ್ ರಾಯ್ಸ್ ಕಾನ್ವೊಯ್ ವಿಡಿಯೋ ವೈರಲ್
ವೈರಲ್​​ ವಿಡಿಯೋ

Updated on: Nov 18, 2025 | 4:21 PM

ಬೆಂಗಳೂರಿನಲ್ಲಿ ರೋಲ್ಸ್ ರಾಯ್ಸ್ (Rolls Royce Bengaluru) ಕಾರು ಧೂಳೆಬ್ಬಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಎರಡು ದಿನಗಳಿಂದ ರೋಲ್ಸ್ ರಾಯ್ಸ್​​​​​​​ ವಿಡಿಯೋ ಭಾರೀ ಸದ್ದು ಮಾಡಿದೆ. ಬೆಂಗಳೂರಿನ ಬೀದಿಗಳಲ್ಲಿ ಸಾಲು ಸಾಲು ರೋಲ್ಸ್ ರಾಯ್ಸ್ ಕಾರಿನ ಕಾನ್ವೋಯ್ ನಡೆದಿದೆ. ಇದೀಗ ಜಗತ್ತಿನ ದುಬಾರಿ ಕಾರು ಬೆಂಗಳೂರಿನ ಬೀದಿಯಲ್ಲಿ ಓಡಾಡಿರುವುದು ಎಲ್ಲರಿಗೂ ಅಚ್ಚರಿ ತಂದಿದೆ. ಈ ವಿಡಿಯೋ ನೋಡಿ ನೆಟ್ಟಿಗರು ಬೆಂಗಳೂರು ಶ್ರೀಮಂತ ನಗರ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ. ದೇಶದಲ್ಲಿ ಎಲ್ಲೂ ಕೂಡ ರೋಲ್ಸ್ ರಾಯ್ಸ್ ಹೀಗೆ ಸಂಚಾರ ಮಾಡಿರುವುದನ್ನು ನೋಡಿಲ್ಲ ಎಂದು ನೆಟ್ಟಿಗರು ಹೇಳಿದ್ದಾರೆ. ಜಿಎಂ ಪವನ್ ಎಂಬವವರು ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್​​​ ಖಾತೆಯಲ್ಲಿ ಹಂಚಿಕೊಂಡಿದ್ದರು. ಅಲ್ಲಿಂದ ಈ ವಿಡಿಯೋ ಎಲ್ಲ ಕಡೆ ವೈರಲ್​​ ಆಗಿದೆ.

ಈ ವಿಡಿಯೋದಲ್ಲಿ ರೋಲ್ಸ್ ರಾಯ್ಸ್ ಕಾರು ಬೆಂಗಾವಲಿನಂತೆ ಒಂದರ ಹಿಂದೆ ಒಂದರಂತೆ ಹೋಗುವುದನ್ನು ನೋಡಬಹುದು. ಬಣ್ಣ ಬಣ್ಣದ ಕಾರುಗಳು ಬೆಂಗಳೂರಿನ ರಸ್ತೆಯಲ್ಲಿ ಹೋಗುವಾಗ, ಯಾವುದೋ ರಾಜಮನೆತನದವರು ಈ ಕಾರಿನಲ್ಲಿ ಹೋಗುತ್ತಿದ್ದರೆ ಎಂಬಂತೆ ಕಾಣುತ್ತಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹೇಳಲಾಗಿದೆ. ಇನ್ನು ಈ ಕಾರಿನ ಕಾನ್ವೋಯ್​​ಗೆ ಜೀರೋ ಗ್ರಾಫಿಕ್​​​ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ವಿಡಿಯೋದಲ್ಲಿ ಒಂದು ಗೇಟಿನಿಂದ ಒಂದರ ಹಿಂದೆ ಒಂದರಂತೆ ಸಾಲು ಸಾಲು ರೋಲ್ಸ್ ರಾಯ್ಸ್ ಕಾರುಗಳು ಬರುವುದನ್ನು ಕಾಣಬಹುದು. ಇನ್ನು ರಸ್ತೆಯ ಉದ್ದಕ್ಕೂ ಈ ಕಾರುಗಳು ಸಾಗುತ್ತಿರುವುದನ್ನು ನೋಡಿದ್ರೆ ಕಣ್ಣಿಗೆ ಖುಷಿ ನೀಡುತ್ತದೆ. ಭಾರತ ಯಾವ ರಸ್ತೆಯಲ್ಲೂ ಇಂಥಹ ದುಬಾರಿ ಕಾನ್ವೋಯ್​​ ನೋಡಿರಲು ಸಾಧ್ಯವೇ ಇಲ್ಲ. ಇದರಲ್ಲಿ 10ಕ್ಕೂ ಹೆಚ್ಚು ದುಬಾರಿ ಕಾರುಗಳು ಇವೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಈ ಸೇಬಿಗೆ 10 ಕೋಟಿ ರೂ. ಆದ್ರೆ ಇದನ್ನು ತಿನ್ನಲು ಸಾಧ್ಯವಿಲ್ಲ

ವೈರಲ್​​ ಪೋಸ್ಟ್​ ಇಲ್ಲಿದೆ ನೋಡಿ:

ಪಾಕಿಸ್ತಾನದ ಜಿಡಿಪಿ ಬೆಂಗಳೂರಿನ ರಸ್ತೆಯಲ್ಲಿ

ಈ ವಿಡಿಯೋ ನೋಡಿ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಕಮೆಂಟ್​ ಮಾಡಿದ್ದಾರೆ. ಇಡೀ ಪಾಕಿಸ್ತಾನದ ಜಿಡಿಪಿ ಬೆಂಗಳೂರಿನ ರಸ್ತೆಯಲ್ಲಿ ಹೋಗುತ್ತಿದೆ ಎಂದು ಒಬ್ಬರು ಕಮೆಂಟ್​​ ಮಾಡಿದ್ದಾರೆ. ಇಂಥಹ ದೃಶ್ಯವನ್ನು ಬೆಂಗಳೂರಿನಲ್ಲಿ ಮಾತ್ರ ನೋಡಲು ಸಾಧ್ಯ ಎಂದು ಮತ್ತೊಬ್ಬರು ಕಮೆಂಟ್​ ಮಾಡಿದ್ದಾರೆ. ಬೆಂಗಳೂರಿನಲ್ಲಿ ಬಿಲೇನಿಯರ್ ಇರುವುದು ಎಂಬುದನ್ನು ಈ ದೃಶ್ಯ ನೋಡಿದಾಗ ಗೊತ್ತಾಗುತ್ತದೆ ಎಂದು ಮತ್ತೊಬ್ಬರು ಕಮೆಂಟ್​ ಮಾಡಿದ್ದಾರೆ. ಎಲ್ಲರ ಕಣ್ಣು ಈ ಕಾರಿನ ಮೇಲಿರುವಾಗ ಟ್ರಾಫಿಕ್​​​​​​​ ಬಗ್ಗೆ ಚಿಂತೆ ಇರುವುದಿಲ್ಲ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:58 pm, Tue, 18 November 25