ಹಿಮನೀರಿನಲ್ಲಿ ಮಿಂದೆದ್ದು ಕಾಫಿ ಕುಡಿಯುತ್ತಿರುವ ಯುವತಿಯ ವಿಡಿಯೋ ವೈರಲ್

Freezing water : ಈ ರಷ್ಯನ್ ಬಾಲೆಯೊಬ್ಬಳು ಕೊಳದಲ್ಲಿ ಮಿಂದು ಕಾಫಿ ಕುಡಿದಾಗ ತಾಪಮಾನ ಎಷ್ಟಿತ್ತು ನೋಡಿ. ಮಿಲಿಯನ್ಗಟ್ಟಲೆ ಜನ ಈ ವಿಡಿಯೋ ನೋಡಿದ್ದಾರೆ. ವಿಡಿಯೋ ಮಾಡಿದ ನಂತರ ಬದುಕಿದ್ದಾಳಲ್ಲ? ಎಂದಿದ್ದಾರೆ ಕೆಲವರು.

ಹಿಮನೀರಿನಲ್ಲಿ ಮಿಂದೆದ್ದು ಕಾಫಿ ಕುಡಿಯುತ್ತಿರುವ ಯುವತಿಯ ವಿಡಿಯೋ ವೈರಲ್
ಹಿಮಸ್ನಾನದ ನಂತರ ಕಾಫೀ ಕುಡಿಯುತ್ತಿರುವ ರಷ್ಯನ್​ ಮಹಿಳೆ
Edited By: ಶ್ರೀದೇವಿ ಕಳಸದ

Updated on: Dec 30, 2022 | 11:00 AM

Viral Video : ಹಿಮಪಾತವಾಗುತ್ತಿರುವ ಅನೇಕ ಪ್ರದೇಶಗಳ ಪರಿಸ್ಥಿತಿ ಹೇಗಿದೆ, ಅಲ್ಲಿಯ ಜನಜೀವನ ಏನೆಲ್ಲ ಸಂಕಷ್ಟಗಳನ್ನು ಎದುರಿಸುತ್ತಿದೆ ಎಂಬುದನ್ನು ದಿನವೂ ನೋಡುತ್ತಲೇ ಇದ್ದೀರಿ. ಎಲ್ಲವೂ ಎಲ್ಲಕಡೆಗೂ ಒಂದೇ ರೀತಿ ಇರಲು ಹೇಗೆ ಸಾಧ್ಯ? ಈ ವಿಡಿಯೋ ನೋಡಿ. ರಷ್ಯಾದ ಈ ಯುವತಿ ಹಿಮಗಟ್ಟಿದ ಕೊಳದಲ್ಲಿ ಮಿಂದು  ಮುಳುಗು ಹೊಡೆದು ಬಿಸಿಬಿಸಿ ಕಾಫಿ ಹೀರಿದ್ದಾಳೆ. ಹೀಗವಳು ಮುಳುಗು ಹೊಡೆದಾಗ ಅಲ್ಲಿಯ ತಾಪಮಾನ -27 ಡಿ.ಸೆ. ಇತ್ತು.

ಕಾಫಿ ಸಿಪ್​ನ ನಂತರ ತನ್ನ ಮೊಬೈಲಿನಲ್ಲಿ ತಾಪಮಾನವನ್ನು ತೋರಿಸುತ್ತಾಳೆ. ಮಾಡ್ಕೋದ ಬಳಿ ಯಾವುದೋ ಪ್ರದೇಶದಲ್ಲಿ ಈ ವಿಡಿಯೊ ಚಿತ್ರೀಕರಿಸಲಾಗಿದೆ. ಟ್ವೀಟರ್​ನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋ ಅನ್ನು ಈತನಕ 1.8 ಮಿಲಿಯನ್​ ಜನರು ನೋಡಿದ್ದಾರೆ. 10,600 ಜನರು ಇಷ್ಟಪಟ್ಟಿದ್ದಾರೆ. ಸಾವಿರಾರು ಜನರು ರೀಟ್ವೀಟ್ ಮಾಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : ಹಿಮವ ಸೀಳಿ ಸಾಗುವಾ; ನಗುನಗುತ್ತಲೇ ದಾರಿ ಮಾಡಿಕೊಳ್ಳುತ್ತಿರುವ ಭಾರತೀಯ ಯೋಧ

ನಾನು ಕೂಡ ಈ ರೀತಿ ಮಾಡಿದ್ದೇನೆ. ಸುಮಾರು ಏಳೆಂಟು ನಿಮಿಷಗಳ ಕಾಲ ನೀರಿನೊಳಗೆ ಇದ್ದೆ. ಇದು ಅದ್ಭುತವಾದ ಅನುಭವ ಎಂದು ಒಬ್ಬರು ಹೇಳಿದ್ದಾರೆ. ಯಾಕೆ ಇಂಥ ಹುಚ್ಚುತನಕ್ಕೆ ಬೀಳುತ್ತಾರೆ ಜನ? ಎಂದು ಮತ್ತೊಬ್ಬರು ಕೇಳಿದ್ದಾರೆ. ವಿಡಿಯೋ ಮಾಡಿದ ನಂತರ ಆಕೆ ಬದುಕಿದ್ದಾಳೆ ಎಂದು ಭಾವಿಸುತ್ತೇನೆ ಎಂದಿದ್ದಾರೆ ಕೆಲವರು. ಯಾರೋ ಒಬ್ಬರು ಹೀಗೆ ಮಾಡಲು ಹೋಗಿ ತೀರಿಹೋದರಂತೆ, ನ್ಯೂಸ್​​ನಲ್ಲಿ ನೋಡಿದೆ. ನೀವು ಅದೃಷ್ಟವಂತರು ಎಂದಿದ್ದಾರೆ ಮಗದೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:54 am, Fri, 30 December 22

TV9 Web

TV9 Kannada

Read More
Loading...
Unable to load recommendations.
Follow Us