ಹಿಮವ ಸೀಳಿ ಸಾಗುವಾ; ನಗುನಗುತ್ತಲೇ ದಾರಿ ಮಾಡಿಕೊಳ್ಳುತ್ತಿರುವ ಭಾರತೀಯ ಯೋಧ

Indian Soldier : ಇಂಥ ಚಳಿಯಲ್ಲಿ ನಾವೆಲ್ಲ ಬೆಚ್ಚಗೆ ಮನೆಯಲ್ಲಿ ಕುಳಿತಿದ್ದೇವೆಂದರೆ ಗಡಿ ಕಾಯುತ್ತಿರುವ ನಮ್ಮ ಸೈನಿಕರೇ ಕಾರಣ. ಈಗವರ ಪರಿಸ್ಥಿತಿ ಅರ್ಥ ಮಾಡಿಕೊಳ್ಳಲು ಇಲ್ಲಿರುವ ವಿಡಿಯೋ ಗಮನಿಸಿ.

ಹಿಮವ ಸೀಳಿ ಸಾಗುವಾ; ನಗುನಗುತ್ತಲೇ ದಾರಿ ಮಾಡಿಕೊಳ್ಳುತ್ತಿರುವ ಭಾರತೀಯ ಯೋಧ
ಹಿಮದೊಳಗೆ ದಾರಿ ಮಾಡಿಕೊಂಡು ನಡೆಯುತ್ತಿರುವ ಯೋಧ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Dec 29, 2022 | 9:29 AM

Viral Video : ಭಾರತೀಯ ಸೇನಾ ಯೋಧರ ಸೇವಾನಿಷ್ಠೆ, ಧೈರ್ಯ, ಸಾಹಸ, ತ್ಯಾಗ ಮತ್ತು ಸಮಯಪ್ರಜ್ಞೆಯನ್ನು ಸಾರುವ ವಿಡಿಯೋಗಳನ್ನು ಆಗಾಗ ನೋಡುತ್ತಲೇ ಇರುತ್ತೀರಿ. ಊಹೆಗೂ ನಿಲುಕಲಾರದಂಥ ಜೀವನಶೈಲಿ ಮತ್ತು ಕಾರ್ಯವಿಧಾನ ಅವರದ್ದಾಗಿರುತ್ತದೆ. ಹಾಗಾಗಿ ಅವರು ಎಂದಿಗೂ ವಿಶೇಷವೇ. ಇದೀಗ ವೈರಲ್ ಆಗಿರುವ ಈ ವಿಡಿಯೋ ಅನ್ನು ಮೇಜರ್ ಜನರಲ್​ ರಾಜು ಚೌಹಾಣ ಟ್ವೀಟ್ ಮಾಡಿದ್ದಾರೆ.

ಮೊಣಕಾಲಿನತನಕವೂ ದಟ್ಟವಾದ ಹಿಮ ಆವರಿಸಿದೆ. ಯೋಧ ರೈಫಲ್​ ಮೂಲಕ ದಾರಿ ಮಾಡಿಕೊಂಡು ನಡೆಯುತ್ತಿದ್ದಾರೆ. ಹೀಗೆ ದಾರಿ ಕ್ರಮಿಸುತ್ತಿರುವ ಖುಷಿಯಲ್ಲಿ ಅವರ ಮುಖದ ಮೇಲೆ ನಗೆ ಅರಳುವುದನ್ನು ಗಮನಿಸಬಹುದು. ಡಿಸೆಂಬರ್ 25ರಂದು ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. 2 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. 8,000 ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಸಾವಿರಾರು ಜನ ರೀಟ್ವೀಟ್ ಮಾಡಿದ್ದಾರೆ. ನೂರಾರು ಜನ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: Viral Video : ಉಕ್ರೇನಿಯನ್ ಯೋಧ ಮತ್ತವನ ಗೆಳತಿಯ ಈ ಅಪೂರ್ವ ಕ್ಷಣಗಳು

ನಿಮ್ಮ ತಾಯಿಗೆ ನೀವು ಸೇವೆ ಸಲ್ಲಿಸುತ್ತಿರುವಾಗ ನಿಮ್ಮ ಮುಖದಲ್ಲಿ ನಗು ಪ್ರಜ್ವಲಿಸುತ್ತದೆ  ಎಂದಿದ್ದಾರೆ ನೆಟ್ಟಿಗರೊಬ್ಬರು. ಈ ಯೋಧರ ಜೀವನಶೈಲಿ ಎಷ್ಟೊಂದು ಕಠಿಣ ಮತ್ತು ಸವಾಲಿನಿಂದ ಕೂಡಿದೆ, ಅವರಿಗೆ ಸೆಲ್ಯೂಟ್​ ಎಂದಿದ್ದಾರೆ ಮತ್ತೊಬ್ಬರು. ಮಿಲಿಯನ್​ ಸೆಲ್ಯೂಟ್​, ನಿಮಗೆ ನಾವು ಶಾಶ್ವತವಾಗಿ ಋಣಿ ಎಂದಿದ್ದಾರೆ ಮಗದೊಬ್ಬರು. ಇಂಥ ಕಠಿಣ ಸಂದರ್ಭದಲ್ಲಿಯೂ ನಗು ಬೇರೆ! ಅಬ್ಬಾ ಎಂಥ ಧೈರ್ಯಶಾಲಿ ಎಂದು ಇನ್ನೊಬ್ಬರು ಹೇಳಿದ್ದಾರೆ. ನಿಮ್ಮ ಈ ಧೈರ್ಯಸಾಹಸ ಮನೋಭಾವದ ಫಲವಾಗಿಯೇ ನಾವು ದೇಶದಲ್ಲಿ ನೆಮ್ಮದಿಯಿಂದ ನಿದ್ರಿಸುತ್ತಿದ್ದೇವೆ ಎಂದಿದ್ದಾರೆ ಮತ್ತೊಬ್ಬರು.

ಈ ವಿಡಿಯೋ ನೋಡಿದ ನಿಮ್ಮಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 9:29 am, Thu, 29 December 22