AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Road Trip; ಶೌಚಕ್ಕೆ ಹೋದ ಹೆಂಡತಿಯನ್ನು ಬಿಟ್ಟು ಹೋದ ಗಂಡ, ಕತ್ತಲಲ್ಲಿ 20 ಕಿ.ಮೀ ನಡೆದ ಹೆಂಡತಿ

Husband and Wife : ಸಮಯ ಬೆಳಗಿನ 3 ಗಂಟೆ. ಶೌಚ ಮುಗಿಸಿ ಬಂದ ಗಂಡ, ಕಾರಿನ ಹಿಂದಿನ ಸೀಟಿನಲ್ಲಿ ಹೆಂಡತಿ ಗಾಢನಿದ್ರೆ ಮಾಡುತ್ತಿರಬಹುದೆಂದು ಭಾವಿಸಿ ಡ್ರೈವ್ ಮಾಡಿಕೊಂಡು ಹೋಗಿಬಿಟ್ಟಿದ್ದಾನೆ. ಮುಂದೆ ಏನಾಯಿತೆಂದು ಓದಿ.

Road Trip; ಶೌಚಕ್ಕೆ ಹೋದ ಹೆಂಡತಿಯನ್ನು ಬಿಟ್ಟು ಹೋದ ಗಂಡ, ಕತ್ತಲಲ್ಲಿ 20 ಕಿ.ಮೀ ನಡೆದ ಹೆಂಡತಿ
ಪ್ರಾತಿನಿಧಿಕ ಚಿತ್ರ
TV9 Web
| Updated By: ಶ್ರೀದೇವಿ ಕಳಸದ|

Updated on:Dec 29, 2022 | 12:05 PM

Share

Viral : ಜಗತ್ತಿನಾದ್ಯಂತ ಜನ ಈ ಡಿಸೆಂಬರಿಗಾಗಿ ಕಾಯುತ್ತಿರುತ್ತಾರೆ. ವರ್ಷವಿಡೀ ಕೆಲಸ ಮಾಡಿ ದಣಿವಾರಿಸಿಕೊಳ್ಳಲು ಪ್ರವಾಸಕ್ಕಾಗಿ ಯೋಜಿಸುತ್ತಿರುತ್ತಾರೆ. ಒಬ್ಬೊಬ್ಬರ ಅನುಭವಗಳೂ ಒಂದೊಂದು ಥರ. ಈಗಂತೂ ಅಂತರ್ಜಾಲಕಾಲ. ಫೋಟೋ, ವಿಡಿಯೋ ದಾಖಲಿಸುವುದೇ ಪ್ರವಾಸದ ಅನುಭವಕ್ಕಿಂತ ದೊಡ್ಡ ಸಂಭ್ರಮ. ಈಗಿಲ್ಲಿ ವೈರಲ್ ಆಗಿರುವ ಈ ಸುದ್ದಿಯನ್ನು ಗಮನಿಸಿ. ಇತ್ತೀಚೆಗೆ ರೋಡ್​ ಟ್ರಿಪ್​ಗೆಂದು ಹೊರಟ ಗಂಡ-ಹೆಂಡತಿಗೆ ಈ ಪ್ರವಾಸ ಸಂಭ್ರಮಕ್ಕಿಂತ ಜನ್ಮಪೂರ್ತಿ ನೆನಪುಳಿಯುವಂಥ ಪ್ರಸಂಗಕ್ಕೆ ಎಡೆ ಮಾಡಿಕೊಟ್ಟಿದೆ. ರಾತ್ರಿಯಲ್ಲಿ ರೋಡ್​ ಟ್ರಿಪ್​ ಎಂದರೆ ನಿದ್ರೆಯಲ್ಲಿಯೂ ಬೆಚ್ಚಿಬೀಳುವಂತಾಗಿದೆ.

ಇದನ್ನೂ ಓದಿ : ಓಹ್! ನಿಜಕ್ಕೂ ಸಾಂತಾನ ಬಂಡಿ ಬಂದಿತ್ತೇ?; ವೈರಲ್ ಆದ ಎಮಿರೇಟ್ಸ್​ ಪೋಸ್ಟ್​

55 ವರ್ಷದ ಬೂಂಟೋಮ್​ ಚೈಮೂನ್ ಮತ್ತು 49ರ ಆತನ ಪತ್ನಿ ಆಮ್ನುವೇ ಚೈಮೂನ್​ ಡಿ.25ರಂದು ಥೈಲ್ಯಾಂಡ್​ನ ಮಹಾ ಸರಖಮ್​ನಿಂದ ರೋಡ್​ ಟ್ರಿಪ್​ ಹೊರಟರು. ಆದರೆ ಬೆಳಗಿನ ಜಾವ 3 ಗಂಟೆಗೆ ಶೌಚಾಲಯಕ್ಕೆ ಹೋಗಬೇಕು ಎನ್ನಿಸಿದಾಗ ಕಾರನ್ನು ರಸ್ತೆಬದಿ ನಿಲ್ಲಿಸಿದರು. ಗಂಡ ತನ್ನ ಪಾಡಿಗೆ ತಾನು ಶೌಚ ಮುಗಿಸಿಕೊಂಡು ಬಂದ. ಕಾರಿನ ಹಿಂದಿನ ಸೀಟಿನಲ್ಲಿ ಹೆಂಡತಿ ಗಾಢವಾಗಿ ನಿದ್ರಿಸಿರಬಹುದೆಂದು ಭಾವಿಸಿ ಕಾರು ಚಲಾಯಿಸಿಕೊಂಡು ಹೊರಟುಬಿಟ್ಟ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : ಬೆದರಿದ ಹರಿಣಿಯರು; ಕುಖ್ಯಾತ ಸರಣಿ ಹಂತಕ ಚಾರ್ಲ್ಸ್​ ಶೋಭರಾಜ ವಿಮಾನ ಪ್ರಯಾಣದ ಫೋಟೋ ವೈರಲ್

ಆದರೆ, ಗಂಡ ಅತ್ತ ಶೌಚಕ್ಕೆ ಹೋದಾಗ ಹೆಂಡತಿಯೂ ಕಾರಿನಿಂದ ಇಳಿದು ಹತ್ತಿರದ ಕಾಡಿನೊಳಗೆ ನುಗ್ಗಿ ಶೌಚಕ್ಕೆ ಹೋಗುವ ಸಾಹಸ ಮಾಡಿದಳು. ಆಕೆ ಹಿಂದಿರುಗಿ ಬಂದಾಗ ಗಂಡನೂ ಇಲ್ಲ, ಕಾರೂ ಇಲ್ಲ. ಗಂಡ ತನ್ನನ್ನು ಬಿಟ್ಟು ಹೋಗಿರುವ ಬಗ್ಗೆ ಆಕೆಗೆ ತಕ್ಷಣವೇ ಖಾತ್ರಿಯಾಯಿತು. ಕತ್ತಲಲ್ಲಿ ಒಬ್ಬಂಟಿಯಾಗಿ ನಿಂತಳು. ಜೊತೆಗೆ ಬ್ಯಾಗ್​ ಇಲ್ಲ, ಬ್ಯಾಗಿನಲ್ಲಿ ಇಟ್ಟ ಮೊಬೈಲೂ ಇಲ್ಲ. ಎಲ್ಲವೂ ಕಾರಿನಲ್ಲಿ!

ಭಯಪಟ್ಟುಕೊಂಡೇ ದಾರಿಹೋಕರ ಸಹಾಯ ಪಡೆದುಕೊಂಡು ನಡೆಯುತ್ತ ಸಾಗಿದಳು. ಕಬಿನ್​ ಬುರಿ ಜಿಲ್ಲೆಯನ್ನು ತಲುಪಿದಾಗ ಬೆಳಗಿನ ಐದು. ಸ್ಥಳೀಯ ಪೊಲೀಸರೊಂದಿಗೆ ಸಂಪರ್ಕ ಸಾಧಿಸುವ ಹೊತ್ತಿಗೆ ಆಕೆ ಸುಮಾರು 20.ಕಿ. ಮೀ. ನಡೆದಿದ್ದಳು. ಗಂಡನಿಗೆ ಫೋನ್ ಮಾಡಬೇಕೆಂದರೆ ಆತನ ನಂಬರ್ ನೆನಪಿಲ್ಲ. ತನ್ನ ನಂಬರಿಗೆ ಸುಮಾರು 20 ಸಲ ಫೋನ್ ಮಾಡಿದರೂ ಯಾವುದೇ ರೀತಿಯ ಪ್ರತಿಕ್ರಿಯೆ ಲಭ್ಯವಾಗುತ್ತಿಲ್ಲ. ಅಂತೂ 8 ಗಂಟೆಗೆ ಪೊಲೀಸರ ಸಹಾಯದಿಂದ ಗಂಡನೊಂದಿಗೆ ಮೊಬೈಲ್​ ಮೂಲಕ ಮಾತನಾಡಿದಳು. ಆ ಹೊತ್ತಿಗೆ ಗಂಡ ಸುಮಾರು 160.ಕಿ.ಮೀ. ಕ್ರಮಿಸಿ ಕೊರಾಟ್ ಪ್ರ್ಯಾಂತ್ಯವನ್ನು ತಲುಪಿಯಾಗಿತ್ತು. ಆತನಕ ಹೆಂಡತಿ ಗಡದ್ದಾಗಿ ಹಿಂದಿನ ಸೀಟಿನಲ್ಲಿ ನಿದ್ರಿಸಿದ್ದಾಳೆ ಎಂದೇ ಆತ ಆತನಕ ಭಾವಿಸಿದ್ದ.

ಇದನ್ನೂ ಓದಿ : ಮದುವೆ ಮಂಟಪದ ಹೊರಗೆ ಝೊಮ್ಯಾಟೋ ಡೆಲಿವರಿ ಏಜೆಂಟ್ ಡ್ಯಾನ್ಸ್​ ವಿಡಿಯೋ ವೈರಲ್

ಸುದ್ದಿ ತಿಳಿದ ತಕ್ಷಣ ತಾನಿದ್ದ ಸ್ಥಳದಿಂದ ವಾಪಾಸು ಕಾರು ಚಲಾಯಿಸಿಕೊಂಡು ಬಂದು ಹೆಂಡತಿ ಇದ್ದಲ್ಲಿ ತಲುಪಿದ. ಈ ಅವಘಡದ ಬಗ್ಗೆ ಸಾಕಷ್ಟು ಪಶ್ಚಾತ್ತಾಪ ಅನುಭವಿಸಿ ಹೆಂಡತಿಗೆ ಸಾರಿಸಾರಿ ಕ್ಷಮೆ ಯಾಚಿಸಿ ಅವಳನ್ನು ಕರೆದುಕೊಂಡು ಹೋದ. ಇಂಥ ಕಡುಕಷ್ಟಕರ ಸನ್ನಿವೇಶವನ್ನು ನಿಭಾಯಿಸಿದ ಹೆಂಡತಿ ಮಾತ್ರ ಗಂಡನೊಂದಿಗೆ ಕೋಪಿಸಿಕೊಳ್ಳಲಿಲ್ಲ, ವಾದಕ್ಕೆ ಬೀಳಲಿಲ್ಲ. ಅಂದಹಾಗೆ ಇವರ ದಾಂಪತ್ಯಕ್ಕೆ 27 ವರ್ಷಗಳು. ಇವರಿಗೆ 26 ವರ್ಷದ ಮಗನಿದ್ದಾನೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 11:59 am, Thu, 29 December 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ