ಮೇರಿ ರಾಣಿ ಹಾಡಿಗೆ ಸಖತ್​ ಡ್ಯಾನ್ಸ್​ ಮಾಡಿದ ಸಹದೇವ್​ ದಿರ್ಡೋ: ವಿಡಿಯೋ ವೈರಲ್​

| Updated By: Pavitra Bhat Jigalemane

Updated on: Mar 08, 2022 | 3:43 PM

ಬಚ್​ಪನ್​ ಕಾ ಪ್ಯಾರ್​ ಖ್ಯಾತಿಯ ಸಹದೇವ್​ ದಿರ್ಡೋ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಬಾಲಿವುಡ್​ ನಟಿ ನೊರಾ ಫತೇಹಿ ಅವರು ಕಾಣಿಸಿಕೊಂಡಿದ್ದ ಮೇರಿ ರಾಣಿ ಹಾಡಿಗೆ ಡ್ಯಾನ್ಸ್​ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಟ್ರೆಂಡ್​ ಸೃಷ್ಟಿ ಮಾಡಿದ್ದಾರೆ.

ಮೇರಿ ರಾಣಿ ಹಾಡಿಗೆ ಸಖತ್​ ಡ್ಯಾನ್ಸ್​ ಮಾಡಿದ ಸಹದೇವ್​ ದಿರ್ಡೋ: ವಿಡಿಯೋ ವೈರಲ್​
ಸಹದೇವ್​ ದಿರ್ಡೋ
Follow us on

ಈಗಾಗಲೇ ಸಾಕಷ್ಟು ಪರಿಚಿತರಾದ ಬಚ್​ಪನ್​ ಕಾ ಪ್ಯಾರ್​ ಖ್ಯಾತಿಯ ಸಹದೇವ್​ ದಿರ್ಡೋ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಬಾಲಿವುಡ್​ ನಟಿ ನೊರಾ ಫತೇಹಿ ಅವರು ಕಾಣಿಸಿಕೊಂಡಿದ್ದ ಮೇರಿ ರಾಣಿ ಹಾಡಿಗೆ ಡ್ಯಾನ್ಸ್​ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಟ್ರೆಂಡ್​ ಸೃಷ್ಟಿ ಮಾಡಿದ್ದಾರೆ. ಇನ್ಸ್ಟಾಗ್ರಾಮ್​ನಲ್ಲಿ ಸಹದೇವ್​ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸದ್ಯ ವಿಡಿಯೋ ಎಲ್ಲೆಡೆ ವೈರಲ್​ ಆಗಿದೆ.

ವಿಡಿಯೋದಲ್ಲಿ ಸಹದೇವ್​ ಹಳದಿ ಬಣ್ಣದ ಟೀ ಶರ್ಟ್​ ಧರಿಸಿದ್ದು, ತಿಳಿ ಗುಲಾಬಿ ಬಣ್ಣದ ಜಾಕೆಟ್​ ಧರಿಸಿದ್ದಾರೆ. ಗುರು ರಾಧವನ್​ ರಚಿಸಿದ ಮೇರಿ ರಾಣಿ ಹಾಡಿಗೆ ನೋರಾ ಫತೇಹಿ ಹೆಜ್ಜೆ ಹಾಕಿದ್ದರು, ಇದೀಗ ಅದೇ ಹಾಡಿಗೆ ಸಹದೇವ್​ ದಿರ್ಡೋ ಡ್ಯಾನ್ಸ್​ ಮಾಡಿದ್ದಾರೆ. ಸದ್ಯ ವಿಡಿಯೋ 65 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿದ್ದು, 8 ಸಾವಿರಕ್ಕೂ ಅಧಿಕ ಲೈಕ್ಸ್​ ಪಡೆದಿದೆ.

10  ವರ್ಷದ ಬಾಲಕ ಸಹದೇವ್​ ಅವರು 2019ರಲ್ಲಿ ಬಚ್​ಪನ್​ಕಾ ಪ್ಯಾರ್​ ಹಾಡನ್ನು ಹಾಡುವ ಮೂಲಕ ದೇಶಾದ್ಯಂತ ಸುದ್ದಿಯಾಗಿದ್ದರು. ಸಾಮಾಜಿಕ ಜಾಲತಾಣದಲ್ಲಿ ಹೊಸ ಅಲೆ ಸೃಷ್ಟಿಸಿದ್ದ ಅವರು ಹಲವು ಬಹುಮಾನಗಳನ್ನೂ ಪಡೆದುಕೊಂಡಿದ್ದರು. ಛತ್ತೀಸ್​ಘಡ ಮೂಲದ ಈ ಹುಡುಗ ಇಂಟರ್​ನೆಟ್​ನಲ್ಲಿ ಟ್ರೆಂಡ್​ ಮೂಡಿಸಿದ್ದರು. ಕಳೆದ ಜನವರಿಯಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಬಗ್ಗೆ ಬಾಲಿವುಡ್​ ರಾಪರ್​​ ಬಾದ್​ಶಾ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಕೆಲದಿನಗಳ ನಂತರ ಗುಣಮುಖರಾಗಿ ಬಂದ ಮೇಲೆ  ಸಹದೇವ್​ ಎನ್​ಎಫ್​ಟಿಯಲ್ಲಿ ಖಾತೆಯನ್ನೂ ತೆರೆದು ಸುದ್ದಿಯಾಗಿದ್ದರು.

ಇದನ್ನೂ ಓದಿ:

ಈ ಯುವತಿಗೆ ಆಟಿಕೆ ವಿಮಾನದೊಂದಿಗೆ ಪ್ರೀತಿಯಾಗಿದೆಯಂತೆ !