Women’s Day: ಸ್ತನ ಕ್ಯಾನ್ಸರ್ಗೆ ತುತ್ತಾಗಿಯೂ ಜೀವನೋತ್ಸಾಹ ಉಳಿಸಿಕೊಂಡ ಪತ್ನಿಯ ಪಯಣವನ್ನು ಹಂಚಿಕೊಂಡ ಝೆರೋಧಾ ಸಿಇಒ ನಿತಿನ್ ಕಾಮತ್
ಮಹಿಳಾ ದಿನ ಹಿನ್ನಲೆಯಲ್ಲಿ ಬ್ರೋಕರೇಜ್ ಕಂಪನಿ ಝರೋದ ಸಿಇಒ ನಿತಿನ್ ಕಾಮತ್ ಪತ್ನಿಯ ಕ್ಯಾನ್ಸರ್ ದಿನಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಟ್ವಿಟರ್ನಲ್ಲಿ ತಮ್ಮ ಪತ್ನಿ ಸೀಮಾ ಕ್ಯಾನ್ಸರ್ನಂತಹ ಮಾರಕ ಕಾಯಿಲೆಯನ್ನು ಎದುರಿಸಿ ಬದುಕುತ್ತಿರುವ ಕುರಿತು ಅವರೇ ಬರೆದ ಬ್ಲಾಗ್ ಲಿಂಕ್ ಹಂಚಿಕೊಂಡಿದ್ದಾರೆ.
ಇಂದು ಅಂತಾರಾಷ್ಟ್ರೀಯ ಮಹಿಳಾ ದಿನ (International Women’s Day). ಬದುಕಿನ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ, ಕುಗ್ಗದೆ ನಡೆಯುವ ಹೆಣ್ಣು ಭೂಮಿಯ ಮೇಲಿನ ಅದ್ಭುತ ಶಕ್ತಿಗಳಲ್ಲಿ ಒಂದು. ಅದೆಷ್ಟೋ ಮಹಿಳೆಯರು ಇಂದಿಗೂ ಸಾಧನೆಗೈದರೂ ಎಲೆಮರೆಕಾಯಿಯಂತೆ ಇದ್ದು, ಬದುಕಿನ ಹೊಡೆತಗಳನ್ನು ಎದುರಿಸಿ ಮಾದರಿಯಾಗಿದ್ದಾರೆ. ಮಹಿಳಾ ದಿನ ಹಿನ್ನಲೆಯಲ್ಲಿ ಬ್ರೋಕರೇಜ್ ಕಂಪನಿ ಝೆರೋಧ ಸಿಇಒ ನಿತಿನ್ ಕಾಮತ್ ಪತ್ನಿಯ ಕ್ಯಾನ್ಸರ್ ದಿನಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಕಾಮತ್ ಅವರು ಟ್ವಿಟರ್ನಲ್ಲಿ ತಮ್ಮ ಪತ್ನಿ ಸೀಮಾ ಕ್ಯಾನ್ಸರ್ನಂತಹ ಮಾರಕ ಕಾಯಿಲೆಯನ್ನು ಎದುರಿಸಿ ಬದುಕುತ್ತಿರುವ ಕುರಿತು ಅವರೇ ಬರೆದ ಬ್ಲಾಗ್ ಲಿಂಕ್ ಹಂಚಿಕೊಂಡಿದ್ದು. ನನ್ನ ಪತ್ನಿ ಸೀಮಾ ಕಳೆದ ನವೆಂಬರ್‌ನಲ್ಲಿ ಸ್ತನ ಕ್ಯಾನ್ಸರ್ಗೆ ತುತ್ತಾಗಿದ್ದಾರೆ. ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಲು ಮತ್ತು ನಿಯಮಿತ ಆರೋಗ್ಯ ತಪಾಸಣೆ, ಆರೋಗ್ಯ ವಿಮೆ ಮತ್ತು ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮದ ಕುರಿತು ಜಾಗೃತಿ ಮೂಡಿಸಲು ಅವರು ತಮ್ಮ ಕ್ಯಾನ್ಸರ್ನಿಂದ ಪಟ್ಟ ಪಾಡು ಮತ್ತು ಕಲಿತ ಪಾಠಗಳನ್ನು ಹಂಚಿಕೊಳ್ಳಲು ಬಯಸಿದ್ದಾರೆ . ಮಹಿಳಾ ದಿನಾಚರಣೆಯ ಶುಭಾಶಯಗಳು. ಎಂದು ಕಾಮತ್ ಅವರು ಬ್ಲಾಗ್ ಪುಟದ ಲಿಂಕ್‌ನೊಂದಿಗೆ ಟ್ವೀಟ್ ಮಾಡಿದ್ದಾರೆ, ಅಲ್ಲಿ ಸೀಮಾ ಅವರು ತಮ್ಮ ಕ್ಯಾನ್ಸರ್ ಪ್ರಯಾಣವನ್ನು ವಿವರವಾಗಿ ವಿವರಿಸಿದ್ದಾರೆ.
Seema, my wife, was diagnosed with breast cancer last Nov. She decided to share her journey & learnings till now to create awareness on cancer & the importance of regular health checkups, health insurance & overall health & well being. Happy Women’s Day. https://t.co/09hsHMDPWp
— Nithin Kamath (@Nithin0dha) March 8, 2022
ಕಳೆದ ವರ್ಷ ನವೆಂಬರ್‌ನಲ್ಲಿ ಸೀಮಾ ಅವರಲ್ಲಿ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿದ್ದು, ಈಗಾಗಲೇ ಎರಡು ಕಿಮೊಥೆರಪಿ ಸೆಷನ್‌ಗಳನ್ನು ಹೊಂದಿದ್ದಾರೆ. ಇದು 2ನೇ ಹಂತದ ಕ್ಯಾನ್ಸರ್ ಆಗಿದೆ.
ಬ್ಲಾಗ್ನಲ್ಲಿ ಸೀಮಾ ಕ್ಯಾನ್ಸರ್ ದಿನಗಳ ಬಗ್ಗೆ ಹೀಗೆ ಬರೆದುಕೊಂಡಿದ್ದಾರೆ, ನಾನು ಆರೋಗ್ಯವಂತ ವ್ಯಕ್ತಿಯೇ ಆಗಿದ್ದೆ. ಆದರೂ ಕ್ಯಾನ್ಸರ್ಗೆ ತುತ್ತಾದೆ. ನಾನು ಅತಿಯಾಗಿ ಯಾರೊಂದಿಗೂ ಬೆರೆಯುವುದಿಲ್ಲ, ಅತ್ಯುತ್ತಮ ವೈದ್ಯರನ್ನು ಹುಡುಕಲು ಪ್ರಯತ್ನಿಸುತ್ತಿರುವಾಗ ಎಲ್ಲಾ ಪರೀಕ್ಷೆಗಳನ್ನು ನಡೆಸುತ್ತಿರುವಾಗ ನಾನು ಅರಿತುಕೊಂಡೆ, ಬಹುಶಃ ನಾನು ಅದರ ಬಗ್ಗೆ ಮಾತನಾಡುತ್ತಿಲ್ಲ ಏಕೆಂದರೆ ಮಾನಸಿಕ ಅಸ್ವಸ್ಥತೆಯಂತೆ ಕ್ಯಾನ್ಸರ್ ಕೂಡ ನಮ್ಮ ದೇಶದಲ್ಲಿ ನಿಷೇಧವಾಗಿದೆ. ನನ್ನ ತಂದೆ ಆರ್ಮಿಯಲ್ಲಿ ಕೆಲಸಮಾಡುತ್ತಿದ್ದರು. ನನ್ನ ಪತಿಯನ್ನು ಸಿಂಗಾಪುರದಲ್ಲಿ ಮೊದಲು ಭೇಟಿಯಾದೆ. 2015ರಲ್ಲಿ ಮಗ ಜನಿಸಿದನು. ನಂತರದ ದಿನಗಳಲ್ಲಿ ಸ್ತನದಲ್ಲಿ ಗಡ್ಡೆಗಳು ಕಾಣಿಸಿಕೊಳ್ಳತೊಡಗಿದವು. ವೈದ್ಯಕೀಯ ಪರೀಕ್ಷೆಗಳ ಬಳಿಕ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಭಾರತದಲ್ಲಿಯೇ ಕ್ಯಾನ್ಸರ್ಗೆ ಕಾಮತ್ ಉತ್ತಮ ಚಿಕಿತ್ಸೆ ಕೊಡಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಮುಂದುವರೆದು ಕ್ಯಾನ್ಸರ್ ನೀಡಿದ ಎರಡು ದೊಡ್ಡ ಶಾಕ್ಗಳೆಂದರೆ, ಮೊದಲನೆಯದು ಶಸ್ತ್ರಚಿಕಿತ್ಸೆಯ ನಂತರ ಸನ್ನಿಹಿತವಾದ ಸ್ತನಛೇದನ, ಎರಡನೆಯದು ಕೀಮೋಥೆರಪಿ ನಂತರ ಕೂದಲು ಉದುರುವಿಕೆ. ಶಸ್ತ್ರಚಿಕಿತ್ಸೆಯ ನಂತರ, ತ್ಯಾಜ್ಯ ದ್ರವಗಳನ್ನು ಸಂಗ್ರಹಿಸಲು ಪೈಪ್‌ಗಳನ್ನು ಅಳವಡಿಸಬೇಕಾಗಿತ್ತು.ಪ್ರತೀ 3 ವಾರಗಳಿಗೊಮ್ಮೆ ಪೈಪ್‌ಗಳನ್ನು ತೆಗೆದು ಸ್ವಚ್ಛಗೊಳಿಸಲಾಗುತ್ತಿತ್ತು. ಕಿಮೋ ಥೆರಪಿಗೂ ಮೊದಲು ಎಡ ಭುಜದಲ್ಲಿ ಔಷಧಿಯಲ್ಲಿ ಹಾಕಲು ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಕೀಮೋ ಥೆರಪಿ ಆಗಿ ವಾರದ ನಂತರ ಸ್ನಾಯುಗಳ ನೊವು, ಅಶಕ್ತತೆ, ಡೈರಿಯಾದಂತಹ ಸಮಸ್ಯೆಗಳು ಕಾಣಿಸಿಕೊಳ್ಳತೊಡಗಿದವು. ಸೀಮಾ ಮತ್ತು ನಿತಿನ್ ಇಬ್ಬರೂ ತಲೆಯ ಮೇಲಿನ ಕೂದಲನ್ನು ತೆಗೆಸಿಕೊಂಡಿದ್ದಾರೆ.
ಕೊನೆಯಲ್ಲಿ ಅವರು ಕಲಿಕೆಯ ಅನುಭವವನ್ನು ಹಂಚಿಕೊಂಡಿದ್ದು, ಉತ್ತಮ ಆರೋಗ್ಯ ವಿಮಾ ಪಾಲಿಸಿ, ನಿಯಮಿತ ಆರೋಗ್ಯ ತಪಾಸಣೆಗಳ ಪ್ರಾಮುಖ್ಯತೆಯ ಬಗ್ಗೆ ಗಮನ ನೀಡಬೇಕು ಎಂದಿದ್ದಾರೆ.
ಇದನ್ನೂ ಓದಿ:
Women’s Day: ಭಾರತೀಯ ಚಿತ್ರರಂಗದಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಈಶಾನ್ಯ ರಾಜ್ಯಗಳ ಬೆಡಗಿಯರಿವರು
Published On - 12:41 pm, Tue, 8 March 22