Health Tips: ಹುರುಪು ಹೆಚ್ಚಿಸುವ ಲ್ಯಾವೆಂಡರ್ ಮಿಲ್ಕ್ ಟೀ ಮಹತ್ವ ತಿಳಿಯಿರಿ
ಪ್ರೋಟೀನ್ ಅಂಶವಿರುವ ಹಾಲಿನೊಂದಿಗೆ ಲ್ಯಾವೆಂಡರ್ ದಳಗಳನ್ನು ಸೇರಿಸಿ ಸೇವಿಸಿದಾಗ ದೇಹದಲ್ಲಿ ಹೊಸ ಚೈತನ್ಯ ನೀಡುತ್ತದೆ. ಜತೆಗೆ ಮೂಡ್ಅನ್ನು ರಿಪ್ರೆಶ್ ಮಾಡುತ್ತದೆ.
ಭಾರತೀಯರಿಗೆ ಟೀ (Tea)ಯೊಂದಿಗಿನ ಬಾಂಧವ್ಯ ವಿಶೇಷ ರೀತಿಯದೆ. ಪ್ರತಿದಿನ ಬೆಳಗ್ಗೆ ಒಂದು ಕಪ್ ಟೀ ಕುಡಿದರೆ ಅಂದಿನ ದಿನ ಉಲ್ಲಾಸಭರಿತವಾಗಿರಲಿದೆ ಎನ್ನುವ ಭಾವ. ಟೆನ್ಷನ್ ಆದರೂ ಟೀ, ಖುಷಿಯಾದರೂ ಟೀ, ಸಂಬಂಧಿಗಳೂ ಬಂದರೂ ಟೀ ಅಷ್ಟೇ ಯಾಕೆ ಯಾರಾದರೂ ಸ್ನೇಹಿತರೂ ಸಿಕ್ಕರೂ ಒಂದು ಕಪ್ ಟೀ ಕುಡಿಯೋಣ ಎನ್ನುವ ಮಾತು ಇದ್ದೇ ಇರುತ್ತದೆ. ಹೀಗಾಗಿ ಟೀ ಒಂದು ರೀತಿಯ ಅವಶ್ಯಕ ಪಾನೀಯ ಎಂದರೆ ತಪ್ಪಾಲಗಾಲರದು. ಟೀ ಯಲ್ಲೂ ಹಲವು ರೀತಿಯಿದೆ. ಬ್ಲ್ಯಾಕ್ ಟೀ, ಗ್ರೀನ್ ಟೀ, ವೈಟ್ ಟೀ ಇತ್ಯಾದಿ. ಅದೇ ರೀತಿ ಲ್ಯಾವೆಂಡರ್ ಮಿಲ್ಕ್ ಟೀ ಕೂಡ ಚಹಾದ ಒಂದು ವಿಧವಾಗಿದೆ. ಜಗತ್ತಿನ ಆರೋಗ್ಯಕೆರ ಚಹಾ ಎಂದು ಕರೆಯಲ್ಪಡುವ ಲ್ಯಾವೆಂಡರ್ ಮಿಲ್ಕ್ ಟೀ (Lavender Milk Tea) ದೇಹದ ಪಿಟ್ನೆಸ್ (Fitness) ಕಾಪಾಡಿಕೊಳ್ಳಲೂ ನೆರವಾಗುತ್ತದೆ.
ಈ ಲ್ಯಾವೆಂಡರ್ ಮಿಲ್ಕ್ ಚಹಾವನ್ನು ಹೂವಿನ ದಳದಿಂದ ತಯಾರಿಸಲಾಗುತ್ತದೆ. ಲಾವಂಡುಲಾ ಅಂಗುಸ್ಟಿಫೋಲಿಯಾ ಸಸ್ಯದಿಂದ ಬಂದ ಕೆಲವು ಒಣಗಿದ ಲ್ಯಾವೆಂಡರ್ ಹೂವಿನ ದಳಗಳನ್ನು ಹಾಲಿನೊಂದಿಗೆ ಹಾಕಿ ಕುದಿಸುವ ಮೂಲಕ ತಯಾರಿಸಲಾಗುತ್ತದೆ. ಅನೇಕ ಅನಾರೋಗ್ಯಕ್ಕೆ ಪರಿಹಾರವಾಗಿ ಕೆಲಸ ಮಾಡುವ ಈ ಚಹಾದ ಸೇವನೆ ಉತ್ತಮ ಎನ್ನುತ್ತಾರೆ ತಜ್ಞರು. ಈ ಸಸ್ಯವನ್ನು ಇಂಗ್ಲಿಷ್ ವೈದ್ಯ ಜಾನ್ ಪಾರ್ಕಿನ್ಸನ್ ಅವರು ಎಲ್ಲಾ ತಲೆ ಮತ್ತು ಮೆದುಳಿನ ಕಾಯಿಲೆಗಳಿಗೆ ಗಮನಾರ್ಹವಾದ ಚಿಕಿತ್ಸೆ ನೀಡಲು ಉಪಯೋಗಿಸಬಹುದು ಎಂದು ನಿರೂಪಿಸಿದ್ದಾರೆ. ಈ ಪರಿಮಳಯುಕ್ತ ಹೂವಿನ ದಳಗಳ ಚಹಾವು ಇಂದ್ರಿಯಗಳನ್ನು ತಕ್ಷಣವೇ ಜಾಗೃತಗೊಳಿಸುತ್ತದೆ ಮತ್ತು ನಿಮ್ಮ ದೇಹವನ್ನು ಒಳಗಿನಿಂದ ಗುಣಪಡಿಸುತ್ತದೆ.
ಆರೋಗ್ಯ ವೃದ್ಧಿಸುವ ಲ್ಯಾವೆಂಡರ್ ಟೀ: ಪ್ರೋಟೀನ್ ಅಂಶವಿರುವ ಹಾಲಿನೊಂದಿಗೆ ಲ್ಯಾವೆಂಡರ್ ದಳಗಳನ್ನು ಸೇರಿಸಿ ಸೇವಿಸಿದಾಗ ದೇಹದಲ್ಲಿ ಹೊಸ ಚೈತನ್ಯ ನೀಡುತ್ತದೆ. ಜತೆಗೆ ಮೂಡ್ಅನ್ನು ರಿಪ್ರೆಶ್ ಮಾಡುತ್ತದೆ. ಮಾನಸಿಕ ಆತಂಕ, ಒತ್ತಡ ಇವುಗಳನ್ನು ಕಡಿಮೆ ಮಾಡುತ್ತದೆ. ಈ ಚಹಾವನ್ನು ಮಲಗುವ ಮುನ್ನ ಸೇವಿಸಿದಾಗ, ನೈಸರ್ಗಿಕ ನಿದ್ರಾಜನಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ನರಮಂಡಲದ ವಿಶ್ರಾಂತಿಗೆ ಸಹಾಯ ಮಾಡುತ್ತದೆ. ಲ್ಯಾವೆಂಡರ್ ಸಸ್ಯದ ಘಟಕಗಳು ಈ ಚಹಾವನ್ನು ಅತ್ಯಂತ ಆರೋಗ್ಯಕರವಾಗಿಸುತ್ತದೆ.
ಲ್ಯಾವೆಂಡರ್ ಟೀನ ಉಪಯೋಗಳು ಯಾವವು?
- ಇದು ಆಂಟಿಮೈಕ್ರೊಬಿಯಲ್ ಆಗಿದ್ದು ಅದು ಶ್ವಾಸಕೋಶದಿಂದ ಲೋಳೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಜತೆಗೆ ಹೊಟ್ಟೆಯಲ್ಲಿರುವ ಕೊಲನ್ ಸೋಂಕುಗಳನ್ನೂ ಕೂಡ ನಿವಾರಿಸಲು ಸಹಾಯ ಮಾಡುತ್ತದೆ.
- ಇದು ದೇಹದಲ್ಲಿ ಉರಿಯೂತದ ಪ್ರಕ್ರಿಯೆಗಳನ್ನು ಕಡಿಮೆ ಮಾಡುತ್ತದೆ. ಶ್ವಾಸಕೋಶದಲ್ಲಿನ ಲೋಳೆಯ ಪೊರೆಗಳನ್ನು ಹಾಗೂ ಹುಣ್ಣುಗಳನ್ನು ಗುಣಪಡಿಸುತ್ತದೆ.
- ಉರಿಯೂತದ ಮತ್ತು ನೋವು ನಿವಾರಕವಾಗಿ ಕೆಲಸ ಮಾಡುವ ಈ ಲ್ಯಾವೆಂಡರ್ ನೈಸರ್ಗಿಕ ನಂಜುನಿರೋಧಕವಾಗಿದೆ. ಇದು ಕಣ್ಣಿನ ಸೋಂಕುಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ.
- ಇದು ಆಂಟಿಬ್ಯಾಕ್ಟೀರಿಯಲ್ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ನೈಸರ್ಗಿಕ ಪೇಸ್‌ಮೇಕರ್ ಆಗಿ ಕಾರ್ಯನಿರ್ವಹಿಸುತ್ತದೆ, ಕ್ಯಾನ್ಸರ್ ಕೋಶಗಳ ವಿರುದ್ಧದ ಹೋರಾಟದಲ್ಲಿ ದೇಹಕ್ಕೆ ಲ್ಯಾವೆಂಡರ್ ಟೀ ಸಹಾಯ ಮಾಡುತ್ತದೆ.
ಇದನ್ನೂ ಓದಿ:
Bili Ekka: ಮನೆಯಲ್ಲಿದ್ದರೆ ಬಿಳಿ ಎಕ್ಕ ವಾಸ್ತು ದೋಷವೂ ನಿವಾರಣೆ; ಆರೋಗ್ಯ ಪ್ರಯೋಜನಗಳೂ ನೂರೆಂಟು