AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bili Ekka: ಮನೆಯಲ್ಲಿದ್ದರೆ ಬಿಳಿ ಎಕ್ಕ ವಾಸ್ತು ದೋಷವೂ ನಿವಾರಣೆ; ಆರೋಗ್ಯ ಪ್ರಯೋಜನಗಳೂ ನೂರೆಂಟು

White Aak Plant: ಬಿಳಿ ಎಕ್ಕದ ಗಿಡದ ಪ್ರತಿಯೊಂದು ಭಾಗವೂ ಔಷಧ ಗುಣಗಳನ್ನು ಹೊಂದಿದೆ. ಬಿಳಿ ಎಕ್ಕದ ಗಿಡದ ಹಾಲು ವಿಷಪೂರಿತವಾದದ್ದು, ಅದನ್ನು ಹೊರತು ಪಡಿಸಿದರೆ ಎಕ್ಕದ ಗಿಡ ಸರಿ ಸುಮಾರು 64 ಔಷಧೀಯ ಗುಣಗಳನ್ನು ಒಳಗೊಂಡಿರುತ್ತದೆ.

Bili Ekka: ಮನೆಯಲ್ಲಿದ್ದರೆ ಬಿಳಿ ಎಕ್ಕ ವಾಸ್ತು ದೋಷವೂ ನಿವಾರಣೆ; ಆರೋಗ್ಯ ಪ್ರಯೋಜನಗಳೂ ನೂರೆಂಟು
ಬಿಳಿ ಎಕ್ಕ ಮನೆಯಲ್ಲಿದ್ದರೆ ವಾಸ್ತು ದೋಷವೂ ನಿವಾರಣೆ; ಆರೋಗ್ಯ ಪ್ರಯೋಜನಗಳೂ ನೂರೆಂಟು
TV9 Web
| Edited By: |

Updated on: Mar 08, 2022 | 6:06 AM

Share

ಸಾಮಾನ್ಯವಾಗಿ ಬಿಳಿ ಎಕ್ಕ ಗಿಡ ಪ್ರತಿಯೊಬ್ಬರಿಗೂ ಪರಿಚಯವಿರುತ್ತದೆ. ಮನೆಯ ವಾಸ್ತು ದೋಷವನ್ನು (Vastu, ) ನಿವಾರಿಸುವ ಜೊತೆಗೆ ಹಲವು ದೈಹಿಕ, ಆರೋಗ್ಯ ಸಮಸ್ಯೆಗೂ ಪರಿಹಾರವನ್ನು ಒದಗಿಸುತ್ತದೆ ಈ ಬಿಳಿ ಎಕ್ಕ. ಪೂರ್ವಜರು ಹೇಳುವ ಹಾಗೆ ಬಿಳಿ ಎಕ್ಕದ ಗಿಡವೊಂದು ಮನೆಯಲ್ಲಿ ಇದ್ದರೆ ಸಕಲ ಐಶ್ವರ್ಯ, ಆರೋಗ್ಯ ಮತ್ತು ಅಂತಸ್ತು ವೃದ್ಧಿಯಾಗುತ್ತದೆ, ಹಣಕಾಸಿನ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತವೆ (Spiritual). ಮನೆಯಲ್ಲಿ ಶಾಂತಿ, ನೆಮ್ಮದಿ, ಹಣಕಾಸಿನ ವ್ಯವಹಾರಗಳು ಇಂಥ ಎಲ್ಲಾ ತೊಂದರೆಗಳಿಗೆ ಬಿಳಿ ಎಕ್ಕದ ಗಿಡ ರಾಮಬಾಣ ಎಂದೇ ಹೇಳಬಹುದು. ಆನೇಕ ಜನರು ತಮ್ಮ ವ್ಯವಹಾರ, ವಹಿವಾಟುಗಳಲ್ಲಿ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿರುತ್ತಾರೆ. ಜೊತೆಗೆ ಹಣಕಾಸಿನ ವಿಚಾರಗಳಲ್ಲಿ ಹಿನ್ನಡೆಯನ್ನು ಅನುಭವಿಸುತ್ತ ಸಾಲಭಾದೆಯಲ್ಲಿ ಸಿಲುಕಿ ಕಷ್ಟದ ಪರಿಸ್ಥಿತಿಯಲ್ಲಿ ಇರುತ್ತಾರೆ. ಅಂಥವರಿಗೆ ಈ ಬಿಳಿ ಎಕ್ಕದ ಗಿಡ ಅದೃಷ್ಟ ತರಲಿದೆ. ಬಿಳಿ ಎಕ್ಕದ ಗಿಡ ನಮಗೆ ಸುಲಭವಾಗಿ ಸಿಗುತ್ತದೆ. ಎಲ್ಲಾ ಪ್ರದೇಶಗಳಲ್ಲಿಯೂ ಲಭಿಸುವಂತ ಗಿಡ. ಬಿಳಿ ಎಕ್ಕದ ಗಿಡ 5 ರಿಂದ 6 ಅಡಿ ಎತ್ತರಕ್ಕೆ ಬೆಳೆಯುತ್ತದೆ ಹಾಗೂ ಬಿಳಿ, ನೀಲಿ ಮಿಶ್ರಿತವಾದ ಬಣ್ಣದಲ್ಲಿ ಹೂವನ್ನು ಅರಳಿಸುತ್ತದೆ (White Aak Plant, Ekkada Gida, Bili Ekka, Swetharka Madaar Crown).

ಬಿಳಿ ಎಕ್ಕದ ಗಿಡ – ಧಾರ್ಮಿಕ ಪ್ರಯೋಜನಗಳು (White Aak Plant, Ekkada Gida):  

  1. ಬಿಳಿ ಎಕ್ಕದ ಗಿಡದ ಮುಂದೆ ಸೂರ್ಯ ದೇವರಿಗೆ ನಮಸ್ಕರಿಸಿ ಅದರ ಎಲೆಯಿಂದ ರವಿ ಗ್ರಹಕ್ಕೆ ಭಕ್ತಿಯಿಂದ ಪೂಜೆ ಸಲ್ಲಿಸಿದರೆ ಸೂರ್ಯ ದೋಷಗಳು ಸಂಪೂರ್ಣವಾಗಿ ನಿವಾರಣೆಯಾಗುತ್ತದೆ.
  2. ಪೂಜೆಯಲ್ಲಿ ಗಣಪತಿ, ಈಶ್ವರ ಆಂಜನೇಯ ದೇವರಿಗೆ ಬಿಳಿ ಎಕ್ಕದ ಹೂವನ್ನು ಇಟ್ಟು ಪೂಜೆ ಸಲ್ಲಿಸಿದರೆ ಹಲವು ದೋಷಗಳಿಂದ ಮುಕ್ತರಾಗುತ್ತೀರಿ.
  3. ಶನಿ ದೋಷವಿದ್ದರೆ ಪ್ರತಿ ಮಂಗಳವಾರ ಮತ್ತು ಶನಿವಾರ ಬಿಳಿ ಎಕ್ಕದ ಹೂವಿನಿಂದ ಹಾರವನ್ನು ತಯಾರಿಸಿ ಅದನ್ನು ಆಂಜನೇಯ ಅಥವಾ ಶನಿದೇವರಿಗೆ ಅರ್ಪಿಸಿ, ಇದು ಬಹಳ ಒಳ್ಳೆಯದು.
  4. ಬಿಳಿ ಎಕ್ಕದ ಗಿಡ ವಿನಾಯಕ ದೇವರಿಗೆ ಬಹಳ ಪ್ರಿಯವಾದದ್ದು. ಗಣಪತಿಗೆ‌ ಬಿಳಿಯ ಎಕ್ಕದ ಹೂವನ್ನು ಮಾಲೆ ಮಾಡಿ ಅದರ ಅರ್ಪಿಸಿದರೆ, ನಮ್ಮ ಕಾರ್ಯಗಳಲ್ಲಿ ಬರುವ ವಿಘ್ನಗಳನ್ನು ನಿವಾರಣೆ ಪಡೆಯಬಹುದು.
  5. ಎಕ್ಕದ ಗಿಡವನ್ನು ನಿಮ್ಮ ಮನೆಯಲ್ಲಿ ಬೆಳೆಸಿದರೆ ಯಾವುದೇ ರೀತಿಯ ಮಾಟ, ಮಂತ್ರ, ತಂತ್ರಗಳು ಸುಳಿಯುವುದಿಲ್ಲ. ಅದರಲ್ಲೂ ಮನೆಯ ಬಲ ಭಾಗದಲ್ಲಿ ಬೆಳೆಸಿದರೆ ವಾಸ್ತು ದೋಷ ನಿವಾರಣೆಯಾಗುತ್ತದೆ.
  6. ಬಿಳಿ ಎಕ್ಕದ ಗಿಡವನ್ನು ನಿಮ್ಮ ಮನೆಯಲ್ಲಿ ಇಟ್ಟು ಪೂಜೆ ಮಾಡುವುದರಿಂದ ಹಲವು ದೋಷಗಳು ನಿವಾರಣೆಯಾಗಿ ಮನೆಯಲ್ಲಿ ಹಣಕಾಸಿನ ಸಮಸ್ಯೆಗಳು ಸರಿಯಾಗುತ್ತದೆ.
  7. ಎಕ್ಕದ ಹೂವನ್ನು ಮನೆಯ ಬಾಗಿಲಿಗೆ ಅಥವಾ ದೇವರ ಮನೆ ಬಾಗಿಲಿಗೆ ತೋರಣ ಕಟ್ಟಿದರೆ ವಾಸ್ತು ದೋಷ ನಿವಾರಣೆಯಾಗುತ್ತದೆ.
  8. ಆರ್ಥಿಕ ಸಮಸ್ಯೆಗಳು, ಸಾಲ ಬಾಧೆಗಳು, ಕೈಯಲ್ಲಿ ಹಣ ನಿಲ್ಲದೆ ಇರುವುದು – ಇಂತಹ ಸಮಸ್ಯೆಗಳನ್ನು ಅನುಭವಿಸುತ್ತಿರುವವರು, ಪ್ರತಿದಿನ ಎಕ್ಕದ ಗಿಡದ ಬುಡದಲ್ಲಿ ತಾಮ್ರದ ತಂಬಿಗೆಯಲ್ಲಿ ನೀರನ್ನು ಹಾಕಿ, 108 ಪ್ರದಕ್ಷಿಣೆ ಮಾಡಿ, ನಂತರ ಋಣಹರ್ತಾ ಗಣಪತಿ ಮಂತ್ರ ವನ್ನು ಉಪದೇಶ ಪಡೆದು ಶಕ್ತ್ಯಾನುಸಾರ ಎಷ್ಟು ಮಾಲೆ ಸಾಧ್ಯವೋ ಅಷ್ಟು ಜಪಿಸಿ.

ಬಿಳಿ ಎಕ್ಕದ ಗಿಡ -ಆರೋಗ್ಯ ಪ್ರಯೋಜನಗಳು (Bili Ekka): 

  1. ಬಿಳಿ ಎಕ್ಕದ ಗಿಡದ ಪ್ರತಿಯೊಂದು ಭಾಗವೂ ಔಷಧ ಗುಣಗಳನ್ನು ಹೊಂದಿದೆ. ಬಿಳಿ ಎಕ್ಕದ ಗಿಡದ ಹಾಲು ವಿಷಪೂರಿತವಾದದ್ದು, ಅದನ್ನು ಹೊರತು ಪಡಿಸಿದರೆ ಎಕ್ಕದ ಗಿಡ ಸರಿ ಸುಮಾರು 64 ಔಷಧೀಯ ಗುಣಗಳನ್ನು ಒಳಗೊಂಡಿರುತ್ತದೆ.
  2. ಎಕ್ಕದ ಬೇರನ್ನು ಅರಿಶಿಣದಲ್ಲಿ ತೇಯ್ದು ನೀರಿನಲ್ಲಿ ಸೇವಿಸಿದರೆ ದೇಹದಲ್ಲಿ ಇರುವ ವಿಷದ ಅಂಶ ನಿರ್ಮೂಲನೆಗೊಳ್ಳುವುದು.
  3. ಕಾಲುಗಳಲ್ಲಿ ಮುಳ್ಳು ಚುಚ್ಚಿದ್ದರೆ ಮುಳ್ಳು ಒಳಭಾಗದಲ್ಲಿದ್ದು ವಿಪರೀತ ನೋವನ್ನು ಕೊಡುತ್ತಿದ್ದರೆ, ಇದರ ಹಾಲನ್ನು ಆ ಜಾಗಕ್ಕೆ ಹಾಕಿದರೆ ನೆಟ್ಟಿರುವಂತ ಮುಳ್ಳು ಮೇಲಕ್ಕೆ ಬಂದು ನೋವು ಕಡಿಮೆಯಾಗುತ್ತದೆ.
  4. ಅತಿಯಾಗಿ ಬೆನ್ನು ನೋವು ಅಥವಾ ಮಂಡಿ ನೋವು ಸಮಸ್ಯೆ ಕಾಡುತ್ತಿದ್ದರೆ, ಎಕ್ಕ ಗಿಡದ ಎಲೆಗಳನ್ನು ಬೆಂಕಿ ಕೆಂಡ ಸೋಕಿಸಿ ನೋವು ಇರುವ ಜಾಗಕ್ಕೆ ಶಾಖ ಕೊಟ್ಟರೆ ಕೆಲವೇ ದಿನಗಳಲ್ಲಿ ನೋವು ಇಲ್ಲದಂತಾಗುವುದು. (ಬರಹ- ವಾಟ್ಸಪ್ ಸಂದೇಶ)

Follow Us
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ