Viral Video: ಚಾಕೊಲೇಟ್​-ಸ್ಟ್ರಾಬೆರಿಯಲ್ಲಿ ಮುಳುಗೆದ್ದ ಸಮೋಸ: ಐಸ್​ಕ್ಯಾಂಡಿ ಇಡ್ಲಿಯ ನಂತರ ಸಮೋಸ ವೈರಲ್

ಐಸ್​ಕ್ಯಾಂಡಿ ಕಡ್ಡಿ ಅಂಟಿಸಿಕೊಂಡಿದ್ದ ಇಡ್ಲಿಯ ಚಿತ್ರ ವೈರಲ್ ಆದ ನಂತರ ಇದೀಗ ಚಾಕೊಲೇಟ್-ಸ್ಟ್ರಾಬೆರಿಯಲ್ಲಿ ಮುಳುಗೆದ್ದ ಸಮೋಸ ಚಿತ್ರಗಳು ವೈರಲ್ ಆಗುತ್ತಿವೆ

Viral Video: ಚಾಕೊಲೇಟ್​-ಸ್ಟ್ರಾಬೆರಿಯಲ್ಲಿ ಮುಳುಗೆದ್ದ ಸಮೋಸ: ಐಸ್​ಕ್ಯಾಂಡಿ ಇಡ್ಲಿಯ ನಂತರ ಸಮೋಸ ವೈರಲ್
ವೈರಲ್ ಆಗಿರುವ ವಿಡಿಯೊದಲ್ಲಿ ಕಾಣಸಿಗುವ ಸ್ಟ್ರಾಬೆರಿ ಮತ್ತು ಚಾಕೊಲೇಟ್ ಸಮೋಸ
Edited By:

Updated on: Oct 03, 2021 | 6:40 PM

ಬೆಂಗಳೂರು: ಐಸ್​ಕ್ಯಾಂಡಿ ಕಡ್ಡಿ ಅಂಟಿಸಿಕೊಂಡಿದ್ದ ಇಡ್ಲಿಯ ಚಿತ್ರ ವೈರಲ್ ಆದ ನಂತರ ಇದೀಗ ಚಾಕೊಲೇಟ್-ಸ್ಟ್ರಾಬೆರಿಯಲ್ಲಿ ಮುಳುಗೆದ್ದ ಸಮೋಸ ಚಿತ್ರಗಳು ವೈರಲ್ ಆಗುತ್ತಿವೆ. ಪಾಕಪ್ರವೀಣರ ಹೊಸ ಪ್ರಯೋಗಗಳು ಇಂಟರ್ನೆಟ್​ನಲ್ಲಿ ಜೋರಾಗಿಯೇ ಸದ್ದು ಮಾಡುತ್ತಿವೆ. ವೈರಲ್ ವಿಡಿಯೊ ನೋಡಿದ ಸಾಮಾಜಿಕ ಮಾಧ್ಯಮ ಬಳಕೆದಾರರು ಇಷ್ಟಪಟ್ಟು ಹಂಚಿಕೊಳ್ಳುತ್ತಿದ್ದಾರೆ. ಎರಡು ವಿಭಿನ್ನ ಸವಿಯ ಖಾದ್ಯಗಳನ್ನು ಬೆಸೆದಿರುವ ವಿಧಾನದ ಬಗ್ಗೆ ಗೊಂದಲದೊಂದಿಗೆ ಆಶ್ಚರ್ಯವನ್ನೂ ಸೂಚಿಸುತ್ತಿದ್ದಾರೆ.

ಇಂಥದ್ದೊಂದು ವಿಡಿಯೊ ಟ್ವೀಟ್ ಮಾಡಿರುವ ಕೈಗಾರಿಕೋದ್ಯಮಿ ಹರ್ಷ್​ ಗೋಯೆಂಕಾ, ‘ಲಾಲಿಪಾಪ್ ಇಡ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡಿದ್ದೇನೋ ಸರಿ. ಆದರೆ ಇದರ ಬಗ್ಗೆ ಏನು ಹೇಳುವುದು’ ಎಂದು ಕೇಳಿದ್ದಾರೆ. ವೈರಲ್ ಆಗಿರುವ ವಿಡಿಯೊವನ್ನು ಈವರೆಗೆ ಸುಮಾರು 24 ಸಾವಿರ ಮಂದಿ ನೋಡಿದ್ದಾರೆ. 18 ಸೆಕೆಂಡ್​ಗಳ ಕ್ಲಿಪ್​ನಲ್ಲಿ ವ್ಯಕ್ತಿಯೊಬ್ಬರು ಹಲವು ಬಗೆಯ ಸಮೋಸಗಳನ್ನು ಪ್ರದರ್ಶಿಸಿದ್ದಾರೆ. ಇದರಲ್ಲಿ ಚಾಕೊಲೇಟ್ ಮತ್ತು ಸ್ಟ್ರಾಬೆರಿ ಫ್ಲೇವರ್​ಗಳಲ್ಲಿ ಅದ್ದಿ ತೆಗೆದ ಸಮೋಸಗಳೂ ಸೇರಿವೆ. ಮತ್ತೊಂದು ವಿಧದ ಸಮೋಸದ ಒಳಗೆ ಸಿಹಿಯಾದ ಜಾಮ್ ತುಂಬಲಾಗಿದೆ. ಮಗದೊಂದು ಬಗೆಯ ಸಮೋಸಾದಲ್ಲಿ ತಂದೂರಿ ಪನೀರ್​ನ ಹೂರಣವಿದೆ.

ಆದರೆ ಬಹುತೇಕರಿಗೆ ಈ ಫ್ಯೂಷನ್ ಇಷ್ಟವಾಗಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಪ್ರಾಯ ಬರೆದುಕೊಂಡಿರುವ ಒಬ್ಬರು, ‘ಚೀಸ್ ಯಾಕೆ ಹಾಕಿಲ್ಲ? ಇಷ್ಟಪಟ್ಟು ತಿನ್ನುವ ಬೀದಿ ತಿನಿಸಿಗೆ ಏಕಿಂಥ ಅವಸ್ಥೆ?’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

(Samosas dipped in chocolate and strawberry go viral After Idli popsicles)

ಇದನ್ನೂ ಓದಿ: Viral Photo: ಐಸ್ ಕ್ರೀಂ ಕಡ್ಡಿಯಲ್ಲಿ ಇಡ್ಲಿ! ಬೆಂಗಳೂರಲ್ಲಿ ತಯಾರಾದ ಸ್ಟೆಷಲ್ ಇಡ್ಲಿಯ ಫೋಟೋ ವೈರಲ್

ಇದನ್ನೂ ಓದಿ: ಜೋಳದ ಹಿಟ್ಟಿನಲ್ಲೂ ಇಡ್ಲಿ ಮಾಡಬಹುದು; ಸರಳ ವಿಧಾನದಲ್ಲಿ ಮಾಡಿ ಸವಿಯಿರಿ

Published On - 6:35 pm, Sun, 3 October 21

TV9 Web

TV9 Kannada

Read More
Loading...
Unable to load recommendations.
Follow Us