Saree cancer: ಸೀರೆ ಉಡೋದ್ರಿಂದಲೂ ಬರುತ್ತಂತೆ ಕ್ಯಾನ್ಸರ್​​​! ಮಹಿಳೆಯರಲ್ಲಿ ಆತಂಕ ಸೃಷ್ಟಿಸಿರುವ ಈ ಸೀರೆ ಕ್ಯಾನ್ಸರ್‌ ಎಂದರೇನು?

|

Updated on: Apr 04, 2024 | 11:29 AM

ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಆತಂಕ ಸೃಷ್ಟಿಸುತ್ತಿದೆ ಸೀರೆ ಕ್ಯಾನ್ಸರ್​​​. ಆದ್ದರಿಂದ ಏನಿದು ಸೀರೆ ಕ್ಯಾನ್ಸರ್​​? ಸೀರೆ ಉಟ್ಟುಕೊಳ್ಳುವುದರಿಂದ ಕ್ಯಾನ್ಸರ್​​​ ಬರುತ್ತದೆಯೇ? ಸೀರೆಗೂ ಕ್ಯಾನ್ಸರ್​​ಗೂ ಏನು ಸಂಬಂಧ? ಈರೀತಿಯ ಸಾಕಷ್ಟು ಗೊಂದಲದ ಪ್ರಶ್ನೆಗೆ ಉತ್ತರವನ್ನು ಇಲ್ಲಿ ತಿಳಿದುಕೊಳ್ಳಿ.

Saree cancer: ಸೀರೆ ಉಡೋದ್ರಿಂದಲೂ ಬರುತ್ತಂತೆ ಕ್ಯಾನ್ಸರ್​​​! ಮಹಿಳೆಯರಲ್ಲಿ ಆತಂಕ ಸೃಷ್ಟಿಸಿರುವ ಈ ಸೀರೆ ಕ್ಯಾನ್ಸರ್‌ ಎಂದರೇನು?
Saree cancer
Image Credit source: Pinterest
Follow us on

ಸಾಂಪ್ರದಾಯಿಕವಾಗಿ, ಸೀರೆಯು ಭಾರತೀಯ ಮಹಿಳೆಯರ ಉಡುಪಿನ ಅತ್ಯುನ್ನತ ಭಾಗವಾಗಿದೆ. ಎಷ್ಟೇ ಹೊಸ ಹೊಸ ಟ್ರೆಂಡ್​ಗಳ ಬಟ್ಟೆ ಬಂದರೂ ಕೂಡ ಸೀರೆಗಿರುವ ಬೇಡಿಕೆ ಬೇರೆ ಬಟ್ಟೆಗಳಿಗಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಆತಂಕ ಸೃಷ್ಟಿಸುತ್ತಿದೆ ಸೀರೆ ಕ್ಯಾನ್ಸರ್​​​. ಮುಂಬೈನ ಆರ್ ಎನ್ ಕೂಪರ್ ಆಸ್ಪತ್ರೆಯಲ್ಲಿ ಇತ್ತೀಚೆಗಷ್ಟೇ 68 ವರ್ಷದ ಮಹಿಳೆಯೊಬ್ಬರಿಗೆ ಸೀರೆ ಕ್ಯಾನ್ಸರ್ ಇರುವುದು ಪತ್ತೆಯಾಗಿದ್ದು ಸಾಕಷ್ಟು ಆತಂಕಗಳಿಗೆ ಎಡೆ ಮಾಡಿಕೊಟ್ಟಿದೆ. ಆದ್ದರಿಂದ ಏನಿದು ಸೀರೆ ಕ್ಯಾನ್ಸರ್​​? ಸೀರೆ ಉಟ್ಟುಕೊಳ್ಳುವುದರಿಂದ ಕ್ಯಾನ್ಸರ್​​​ ಬರುತ್ತದೆಯೇ? ಸೀರೆಗೂ ಕ್ಯಾನ್ಸರ್​​ಗೂ ಏನು ಸಂಬಂಧ? ಈರೀತಿಯ ಸಾಕಷ್ಟು ಗೊಂದಲದ ಪ್ರಶ್ನೆಗೆ ಉತ್ತರವನ್ನು ಇಲ್ಲಿ ತಿಳಿದುಕೊಳ್ಳಿ.

ಏನಿದು ಸೀರೆ ಕ್ಯಾನ್ಸರ್​​​?

ಸೀರೆ ಕ್ಯಾನ್ಸರ್ ಎನ್ನುವುದು ಸೀರೆಯನ್ನು ಉಡುವ ಮಹಿಳೆಯರಲ್ಲಿ ಸೊಂಟದ ರೇಖೆಯ ಉದ್ದಕ್ಕೂ ಸಂಭವಿಸುವ ಅತ್ಯಂತ ಅಪರೂಪದ ಚರ್ಮದ ಕ್ಯಾನ್ಸರ್ ಆಗಿದೆ. ಈ ಕ್ಯಾನ್ಸರ್​​ ಕೇವಲ ಸೀರೆ ಉಡುವವರಲ್ಲಿ ಮಾತ್ರವಲ್ಲದೇ ಬಿಗಿಯಾಗಿ ಬಟ್ಟೆ ಧರಿಸುವವರಲ್ಲಿ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಸೀರೆ ಉಡುವಾಗ ಒಳಗೆ ಲಂಗವನ್ನು ಧರಿಸುತ್ತಾರೆ. ಈವೇಳೆ ದೀರ್ಘಕಾಲದ ವರೆಗೆ ಸೊಂಟದ ಸುತ್ತಲೂ ಲಂಗವನ್ನು ಬಿಗಿಯಾಗಿ ಕಟ್ಟಿಕೊಳ್ಳುವುದರಿಂದ ಅಪರೂಪದ ಚರ್ಮದ ಕ್ಯಾನ್ಸರ್ ಬರುವ ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಹುಟ್ಟು ಹಬ್ಬದಂದು ಕೇಕ್​ ತಿಂದ ಕೆಲ ಹೊತ್ತಿನಲ್ಲೇ ಬಾಲಕಿ ಸಾವು; ಕುಟುಂಬಸ್ಥರು ಅಸ್ವಸ್ಥ

ಡಿಎನ್‌ಎಗೆ ನೀಡಿದ ಸಂದರ್ಶನವೊಂದರಲ್ಲಿ ದೆಹಲಿಯ ಪಿಎಸ್‌ಆರ್‌ಐ ಆಸ್ಪತ್ರೆಯ ಕ್ಯಾನ್ಸರ್‌ ವಿಭಾಗದ ವೈದ್ಯರಾದ ಡಾ. ವಿವೇಕ್‌ ಗುಪ್ತಾ ಅವರು ಹೇಳಿರುವಂತೆ “ಭಾರತದಲ್ಲಿ ವರ್ಷಗಳಿಂದ ಸೀರೆ ಉಡುವ ಮಹಿಳೆಯರಲ್ಲಿ ಕ್ಯಾನ್ಸರ್​​ ಬರುವ ಸಾಧ್ಯತೆ ಹೆಚ್ಚು. ಏಕೆಂದರೆ ಬಿಗಿಯಾಗಿ ಲಂಗವನ್ನು ಧರಿಸಿರುವಂತಹ ಸೊಂಟದ ಭಾಗದಲ್ಲಿ ಪ್ರಾರಂಭದಲ್ಲಿ ತುರಿಕೆ ಆರಂಭವಾಗಿ, ದಿನಕಳೆದಂತೆ ಸೊಂಟದ ಸುತ್ತಲೂಚರ್ಮದ ಸಿಪ್ಪೆ ಏಳಲು ಆರಂಭವಾಗುತ್ತದೆ. ಈ ರೀತಿಯ ಲಕ್ಷಣಗಳನ್ನು ಸಾಮಾನ್ಯವೆಂದು ನಿರ್ಲಕ್ಷ್ಯಿಸುತ್ತಾ ಹೋದರೆ ಕ್ಯಾನ್ಸರ್‌ ಬರುವ ಸಾಧ್ಯತೆ ಹೆಚ್ಚು ಎಂದು ಅವರು ಎಚ್ಚರಿಸಿದ್ದಾರೆ.

ಅಂತೆಯೇ, ತುಂಬಾ ಬಿಗಿಯಾದ ಫಿಟ್ ಜೀನ್ಸ್ ಪುರುಷರಲ್ಲಿ ಕ್ಯಾನ್ಸರ್ಗೆ ಕಾರಣವೆಂದು ಪರಿಗಣಿಸಲಾಗಿದೆ. ವಾಸ್ತವವಾಗಿ, ತುಂಬಾ ಬಿಗಿಯಾದ ಬಟ್ಟೆಗಳನ್ನು ಗಂಟೆಗಳ ಕಾಲ ಧರಿಸಿದರೆ ಅದು ದೇಹಕ್ಕೆ ಹಾನಿ ಮಾಡುತ್ತದೆ.ಸಂಶೋಧನೆಯ ಪ್ರಕಾರ, ಜೀನ್ಸ್ ಪುರುಷರಲ್ಲಿ ಹೊಟ್ಟೆಯ ಕೆಳಭಾಗದಲ್ಲಿ ತಾಪಮಾನವನ್ನು ಹೆಚ್ಚಿಸುತ್ತದೆ, ಇದು ವೀರ್ಯದ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ ಮತ್ತು ವೃಷಣ ಕ್ಯಾನ್ಸರ್ (ಅಂಡಾಶಯದ ಕ್ಯಾನ್ಸರ್) ಗೆ ಕಾರಣವಾಗಬಹುದು ಎಂದು ತಿಳಿದುಬಂದಿದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:28 am, Thu, 4 April 24