
ಸೌದಿ ಅರೇಬಿಯಾದ ಮೊದಲ ಪುರುಷ ಹುಮನಾಯ್ಡ್ ರೋಬೋಟ್ ‘ಮುಹಮ್ಮದ್’ ಅನ್ನು ಇತ್ತೀಚೆಗೆ ರಿಯಾದ್ನಲ್ಲಿ ನಡೆದ ಡೀಪ್ಫಾಸ್ಟ್ನ ಎರಡನೇ ಆವೃತ್ತಿಯಲ್ಲಿ ಅನಾವರಣಗೊಳಿಸಲಾಯಿತು. ಈ ಬಿಡುಗಡೆಯ ಸಮಯದಲ್ಲಿ ಮಹಿಳಾ ವರದಿಗಾರ್ತಿಯೊಬ್ಬಳು ರೋಬೋಟ್ನ್ನೊಂದಿಗೆ ಸಂದರ್ಶನದಲ್ಲಿ ಭಾಗಿಯಾಗಿದ್ದು, ಈ ವೇಳೆ ವರದಿಗಾರ್ತಿಯನ್ನು ರೋಬೋಟ್ ಅನುಚಿತವಾಗಿ ಸ್ಪರ್ಶಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಘಟನೆಗೆ ಸಂಬಂಧಿಸಿದ 7 ಸೆಕೆಂಡ್ ಗಳ ವಿಡಿಯೋ ಇದೀಗ ವೈರಲ್ ಆಗಿದೆ. ಅದರಲ್ಲಿ, ವರದಿಗಾರ್ತಿ ರಾವ್ಯಾ ಕಸ್ಸೆಮ್, ಸಂದರ್ಶನ ಮಾಡುತ್ತಿರುವಾಗ ರೋಬೋಟ್ ಕೈ ಎತ್ತಿ ವರದಿಗಾರ್ತಿಯನ್ನು ಅನುಚಿತವಾಗಿ ಸ್ಪರ್ಶಿಸಿದ್ದು ವಿಡಿಯೋದಲ್ಲಿ ಸೆರೆಯಾಗಿದೆ.
ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಅನೇಕ ನೆಟ್ಟಿಗರು ಕಾಮೆಂಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ. “ರೋಬೋಟ್ ‘ಮುಹಮ್ಮದ್’ಗೆ ವರದಿಗಾರ್ತಿ ಸಾಕಷ್ಟು ಹತ್ತಿರದಲ್ಲಿ ನಿಂತಿದ್ದರಿಂದ ಮುಂದೆ ಸಾಮಾನ್ಯವಾಗಿ ರೋಬೋಟ್ ಕೈ ಚಾಚಿದೆ” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಮದುವೆಗೆ ಯಾಕೆ ಕರೆದಿಲ್ಲ?; ಮುಕೇಶ್ ಅಂಬಾನಿಯನ್ನು ಪ್ರಶ್ನಿಸಿದ ರಾಖಿ ಸಾವಂತ್
ಗಲ್ಫ್ ಬಿಸಿನೆಸ್ ವರದಿಯ ಪ್ರಕಾರ ಮೊಹಮ್ಮದ್, ಹುಮನಾಯ್ಡ್ ರೋಬೋಟ್ ಅರೇಬಿಕ್ ಭಾಷೆಯಲ್ಲಿ ಪ್ರೇಕ್ಷಕರನ್ನು ಉದ್ದೇಶಿಸಿ, ಮಾತಾನಾಡಿದೆ. QSS ಸಿಸ್ಟಮ್ಸ್ ಮತ್ತು ಸಾರಾಗೆ ಪುರುಷ ಪ್ರತಿರೂಪವಾಗಿ ಅಭಿವೃದ್ಧಿಪಡಿಸಿದ ರೋಬೇಟ್ ಮೊಹಮ್ಮದ್ . “ನಾನು ಮುಹಮ್ಮದ್, ಮನುಷ್ಯನ ರೂಪದಲ್ಲಿನ ಮೊದಲ ಸೌದಿ ರೋಬೋಟ್. ನನ್ನನ್ನು ಸೌದಿ ಅರೇಬಿಯಾ ಸಾಮ್ರಾಜ್ಯದಲ್ಲಿ ರಾಷ್ಟ್ರೀಯ ಯೋಜನೆಯಾಗಿ ಇಲ್ಲಿ ತಯಾರಿಸಿ ಅಭಿವೃದ್ಧಿಪಡಿಸಲಾಗಿದೆ” ಎಂದು ಹೇಳಿದೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ