Video: ವಿಶೇಷ ಚೇತನ ವಿದ್ಯಾರ್ಥಿಗೆ ಮನ ಬಂದಂತೆ ಥಳಿಸಿದ ಶಾಲಾ ಸಿಬ್ಬಂದಿ; ಸಿಸಿಟಿವಿಯಲ್ಲಿ ಸೆರೆ

|

Updated on: Apr 12, 2024 | 10:38 AM

ವೈರಲ್​​ ಆದ ವಿಡಿಯೋದಲ್ಲಿ ಶಾಲಾ ಸಿಬ್ಬಂದಿ ವಿಶೇಷ ಚೇತನ ವಿದ್ಯಾರ್ಥಿಗೆ ಥಳಿಸುತ್ತಿರುವುದು ಕಂಡು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಮಹಿಳೆಗೆ ಕಠಿಣ ಶಿಕ್ಷೆ ವಿಧಿಸಬೇಕು' ಎಂದು ಸಾಕಷ್ಟು ನೆಟ್ಟಿಗರು ಕಾಮೆಂಟ್​ ಮಾಡಿದ್ದಾರೆ. ಈ ಘಟನೆ ಅಮೆರಿಕದ ಡೆನ್ವರ್‌ನಲ್ಲಿ ನಡೆದಿದೆ.

ಸ್ಕೂಲ್​​ ಬಸ್ಸಿನಲ್ಲಿ ವಿಶೇಷ ಚೇತನ ಮಗುವಿಗೆ ಶಾಲಾ ಸಿಬ್ಬಂದಿ ಮನ ಬಂದಂತೆ ಥಳಿಸಿರುವ ಘಟನೆ ಅಮೆರಿಕದ ಡೆನ್ವರ್‌ನಲ್ಲಿ ನಡೆದಿದೆ. ಡೆನ್ವರ್‌ ಪಬ್ಲಿಕ್ ಸ್ಕೂಲ್‌ನ ಸಿಬ್ಬಂದಿ ಕಿಯಾರಾ ಜೋನ್ಸ್ ಎಂಬ ಮಹಿಳೆ ಮಗುವಿಗೆ ಥಳಿಸಿದ್ದು, ಘಟನೆಗೆ ಸಂಬಂಧಿಸಿದ ದೃಶ್ಯಾವಳಿಗಳು ಬಸ್​​ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗುತ್ತಿದೆ.

@RokerGlasses ಎಂಬ ಟ್ವಿಟರ್​​ ಖಾತೆಯಲ್ಲಿ ಏಪ್ರಿಲ್​​​​ 10ರಂದು ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋ ಹಂಚಿಕೊಂಡ ಎರಡೇ ದಿನದಲ್ಲಿ ಹತ್ತು ಸಾವಿರಕ್ಕೂ ಹೆಚ್ಚಿನ ನೆಟ್ಟಿಗರನ್ನು ತಲುಪಿದೆ. ವಿಡಿಯೋದಲ್ಲಿ ಮಹಿಳೆ ವಿದ್ಯಾರ್ಥಿಗೆ ಥಳಿಸುತ್ತಿರುವುದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ‘ಮಹಿಳೆಗೆ ಕಠಿಣ ಶಿಕ್ಷೆಯನ್ನು ನೀಡಬೇಕು’ ಎಂದು ಸಾಕಷ್ಟು ನೆಟ್ಟಿಗರು ಕಾಮೆಂಟ್​ ಮಾಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ