Shocking: 6ವರ್ಷದ ಬಾಲಕಿಯ ಮೇಲೆ ಅತ್ಯಾಚಾರಗೈದ 11ರ ಬಾಲಕ
ಟ್ಯೂಷನ್ ಕ್ಲಾಸ್ ಮುಗಿಸಿ ಮನೆ ಬಂದ ಬಾಲಕಿಯ ಬಟ್ಟೆಯಿಂದ ರಕ್ತಸ್ರಾವವಾಗುತ್ತಿರುವುದನ್ನು ಕಂಡು ಪೋಷಕರಿಗೆ ಅನುಮಾನ ಹುಟ್ಟಿಕೊಂಡಿದೆ. ಮಗಳನ್ನು ಸಮಾಧಾನಿಸಿ ವಿಚಾರಿಸಿದ ವೇಳೆ ಏನಾಯ್ತು ಎಂಬುದನ್ನು ಆಕೆ ಪೋಷಕರಿಗೆ ಹೇಳಿದ್ದಾಳೆ.ವೈದ್ಯಕೀಯ ಪರೀಕ್ಷೆಯ ವೇಳೆ ಅತ್ಯಾಚಾರ ದೃಢಪಟ್ಟಿದ್ದು, ಪೋಕ್ಸೊ ಕಾಯ್ದೆ ಸೇರಿದಂತೆ ಕಾನೂನಿನ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಬಾಲಕನ ಮೇಲೆ ಕೇಸು ದಾಖಲಾಗಿದೆ.
ಆಗ್ರಾ: ಆರು ವರ್ಷದ ಬಾಲಕಿಯ ಮೇಲೆ 11 ವರ್ಷದ ಬಾಲಕ ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ಬಾಲಕಿಯ ತಂದೆಯ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಿ 4ನೇ ತರಗತಿ ವಿದ್ಯಾರ್ಥಿಯಾಗಿರುವ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿ ಸ್ಥಿತಿ ಚಿಂತಾಜನಕವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿಯು ಪೊಲೀಸ್ ಠಾಣೆಯಲ್ಲಿದ್ದು, ಬಾಲಾಪರಾಧಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ವರದಿಯ ಪ್ರಕಾರ ಏಪ್ರಿಲ್ 8 ರಂದು ರಾತ್ರಿ 7:30 ರ ಸುಮಾರಿಗೆ ಬಾಲಕಿ ಟ್ಯೂಷನ್ ಕ್ಲಾಸ್ ಮುಗಿಸಿ ಬರುವ ಹೊತ್ತಿಗೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಏನೂ ಅರಿಯದ ಆರು ವರ್ಷದ ಬಾಲಕಿಯನ್ನು ಬಾಲಕ ತನ್ನೊಂದೊಗೆ ನಿರ್ಜನ ಪ್ರದೇಶಕ್ಕೆ ಕರೆದೊಯ್ಯದು ಅತ್ಯಾಚಾರ ವೆಸಗಿರುವುದು ತನಿಖೆಯ ವೇಳೆ ತಿಳಿದುಬಂದಿದೆ. ಟ್ಯೂಷನ್ ಕ್ಲಾಸ್ ಮುಗಿಸಿ ಮನೆ ಬಂದ ಬಾಲಕಿಯ ಬಟ್ಟೆಯಲ್ಲಿ ರಕ್ತಸ್ರಾವ ಕಂಡು ಪೋಷಕರಿಗೆ ಅನುಮಾನ ಹುಟ್ಟಿಕೊಂಡಿದ್ದು, ವಿಚಾರಿಸಿದ ವೇಳೆ ಏನಾಯ್ತು ಎಂಬುದನ್ನು ಆಕೆ ಪೋಷಕರಿಗೆ ಹೇಳಿದ್ದಾಳೆ.
ಮತ್ತಷ್ಟು ಓದಿ: ಕಾಲ್ ಗರ್ಲ್ಗಾಗಿ ಕರೆ ಮಾಡಿ ಎಂದು ಫೇಸ್ಬುಕ್ನಲ್ಲಿ ಪತ್ನಿಯ ಫೋಟೊ, ಮೊಬೈಲ್ ನಂಬರ್ ಪೋಸ್ಟ್ ಮಾಡಿದ ವ್ಯಕ್ತಿ!
ಬಾಲಕ ಪರಿಚಯಸ್ಥನೇ ಎಂದು ಬಾಲಕಿ ಪೋಷಕರಿಗೆ ತಿಳಿದಿದ್ದು, ಬಾಲಕನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ಘಟನೆ ಕುರಿತು ಮಾತನಾಡಿದ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಸುಕನ್ಯಾ ಶರ್ಮಾ, “ಬಾಲಕಿಯ ಸ್ಥಿತಿ ಚಿಂತಾಜನಕವಾಗಿದ್ದು, ಆರೋಪಿಯು ಪೊಲೀಸ್ ಠಾಣೆಯಲ್ಲಿದ್ದು, ಬಾಲಾಪರಾಧಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ವೈದ್ಯಕೀಯ ಪರೀಕ್ಷೆಯ ವೇಳೆ ಅತ್ಯಾಚಾರ ದೃಢಪಟ್ಟಿದ್ದು, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಸೇರಿದಂತೆ ಕಾನೂನಿನ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಬಾಲಕನ ಮೇಲೆ ಕೇಸು ದಾಖಲಾಗಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಆತನನ್ನು ಬಾಲಾಪರಾಧಿ ಗೃಹಕ್ಕೆ ಕಳುಹಿಸಲಾಗುವುದು ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ