
Viral Video : ಈಗಾಗಲೇ ಸೆಲ್ಫಿಯ ಹುಚ್ಚು ಎಂತೆಂಥ ಮಟ್ಟಕ್ಕೇರಿರುತ್ತದೆ ಎನ್ನುವುದನ್ನು ಅನೇಕ ವಿಡಿಯೋಗಳ ಮೂಲಕ ನೀವೆಲ್ಲ ನೋಡಿರುತ್ತೀರಿ. ಕೆಲವರು ಪ್ರಾಣವನ್ನೇ ಕಳೆದುಕೊಂಡ ಉದಾಹರಣೆಗಳಿವೆ. ಇಲ್ಲಿ ಐಎಎಸ್ ಆಫೀಸರ್ ಸುಪ್ರಿಯಾ ಸಾಹು ಟ್ವಿಟರ್ನಲ್ಲಿ ಹಂಚಿಕೊಂಡ ಈ ವಿಡಿಯೋ ನೋಡಿ. ಕಾಡಾನೆಗಳ ಹಿಂಡು ರಸ್ತೆ ದಾಟುತ್ತಿವೆ. ಇಲ್ಲಿಬ್ಬರು ಹುಡುಗರು ಸೆಲ್ಫಿ ತೆಗೆದುಕೊಳ್ಳುವ ಉತ್ಸಾಹದಲ್ಲಿದ್ದಾರೆ. ಅಕಸ್ಮಾತ್ ಕಾಡಾನೆಗಳು ತಿರುಗಿಬಿದ್ದಿದ್ದರೆ ಗತಿ ಏನಾಗುತ್ತಿತ್ತು? ಕಾಡಿನಲ್ಲಿರುವ ಪ್ರಾಣಿಗಳು ಯಾವಾಗ ಹೇಗೆ ವರ್ತಿಸುತ್ತವೆ ಎಂದು ಹೇಳಲಾಗದು. ಅವುಗಳ ದಾರಿಗೆ ಅಡ್ಡಬಂದ ಯಾರನ್ನೂ ಅವು ಸುಮ್ಮನೇ ಬಿಡವು. ಕಾಡುಪ್ರಾಣಿಗಳಿಗೂ ಸಾಕುಪ್ರಾಣಿಗಳಿಗೂ ಇದೇ ವ್ಯತ್ಯಾಸ.
‘ಈ ಯುವಕರು ಅದೃಷ್ಟವಂತರು. ಕಾಡಾನೆಗಳು ಇವರ ಈ ನಡೆವಳಿಕೆಯನ್ನು ಕ್ಷಮಿಸಿವೆ. ಇಲ್ಲವಾದರೆ ಅವು ಮನುಷ್ಯನಿಗೆ ಪಾಠ ಕಲಿಸದೆ ಬಿಡುವುದಿಲ್ಲ.’ ಎಂಬ ಒಕ್ಕಣೆಯನ್ನು ಟ್ವೀಟ್ನಲ್ಲಿ ಸೇರಿಸಿದ್ದಾರೆ ಸುಪ್ರಿಯಾ.
ಮನುಷ್ಯನ ಇಂಥ ಹುಚ್ಚು ವರ್ತನೆ ಹೆಚ್ಚಾದಲ್ಲಿ ಕಾಡುಪ್ರಾಣಿಗಳು ಏನು ಮಾಡುತ್ತವೆ ಎಂದು ಮತ್ತೆ ಹೇಳಬೇಕಿಲ್ಲವಲ್ಲ?
ಇಂಥ ಇನ್ನಷ್ಟು ವಿಡಿಯೋಗಳಿಗಾಗಿ ಕ್ಲಿಕ್ ಮಾಡಿ