ಕಾಂಗ್ರೆಸ್ ಪಕ್ಷವು ನೀಡಿದ್ದ 5 ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯಡಿ(Shakti scheme) ಸರ್ಕಾರಿ ಬಸ್‌ಗಳಲ್ಲಿ ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ನೀಡುತ್ತಿದೆ. ಇದೀಗ ಕಾಂಗ್ರೆಸ್ ಸರ್ಕಾರ ನೀಡಿದ್ದ ಫ್ರೀ ಟಿಕೆಟ್ ಫಲಾನುಭವಿ ಅರಸೀಕೆರೆಯ ಕಾನೂನು ವಿದ್ಯಾರ್ಥಿನಿಯೊಬ್ಬಳು ವಿಶೇಷವಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಧನ್ಯವಾದ ತಿಳಿಸಿದ್ದಾಳೆ. ತಾನು ಇಷ್ಟು ದಿನಗಳಿಂದ ಉಚಿತವಾಗಿ ಪ್ರಯಾಣಿಸಿದ ಫ್ರೀ ಬಸ್ ಟಿಕೆಟ್ಗಳನ್ನು ಸಂಗ್ರಹಿಸಿ ಹೂವಿನೊಂದಿಗೆ ಪೋಣಿಸಿ ವಿಶೇಷವಾದ ಹಾರವೊಂದನ್ನು ತಯಾರಿಸಿದ ವಿದ್ಯಾರ್ಥಿನಿ ಅದನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಹಾಕಿದ್ದಾಳೆ. ಇದಲ್ಲದೇ ಫ್ರೀ ಟಿಕೆಟ್ ನನ್ನ ಜೀವನದಲ್ಲಿ ವಿದ್ಯಾಭ್ಯಾಸ ನಿರಾತಂಕವಾಗಿ ಮಾಡಲು ಸಾಧ್ಯವಾಯಿತು ಎಂದು ಸಿಎಂಗೆ ಧನ್ಯವಾದ ತಿಳಿಸಿದ್ದಾಳೆ.
ಹಾಸನ ಜಿಲ್ಲೆಯ ಅರಸೀಕೆರೆ ಪಟ್ಟಣದಲ್ಲಿ ಸೋಮವಾರ ಚುನಾವಣಾ ಪ್ರಚಾರದಕ್ಕೆಂದು ಸಿಎಂ ಸಿದ್ದರಾಮಯ್ಯ ಅವರು ತೆರಳಿದ್ದ ವೇಳೆ ಅರಸೀಕೆರೆಯ ಪ್ರಥಮ ವರ್ಷದ ಕಾನೂನು ವಿದ್ಯಾರ್ಥಿನಿ ಎಂ.ಎ.ಜಯಶ್ರೀ ಈ ಹಾರವನ್ನು ಸಿಎಂಗೆ ಹಾಕಿದ್ದಾಳೆ. ವಿನೂತನ ಶೈಲಿಯಲ್ಲಿ ಧನ್ಯತೆ ತೋರಿದ್ದು ಸದ್ಯ ಈ ಫ್ರೀ ಬಸ್ ಟಿಕೆಟ್ ಹಾರ ಸದ್ಯ ಎಲ್ಲೆಡೆ ವೈರಲ್ ಆಗಿದೆ.
ಇದನ್ನೂ ಓದಿ: ಹುಬ್ಬು ಸುಂದರವಾಗಿಸಲು ಬ್ಯೂಟಿ ಪಾರ್ಲರ್ ಹೋದ ಮಹಿಳೆಯ ಮುಖ ಹೇಗಾಯಿತು ನೋಡಿ
ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಪರ ಪ್ರಚಾರ ನಡೆಸುತ್ತಿದ್ದ ಸಿಎಂಗೆ ಮಾಲಾರ್ಪಣೆ ಮಾಡಿದ ಜಯಶ್ರೀ ಅವರು, ‘ಕಾಂಗ್ರೆಸ್ ಸರ್ಕಾರದ ಉಚಿತ ಪ್ರಯಾಣ ಯೋಜನೆ-ಶಕ್ತಿ ಯೋಜನೆ- ಮುಖ್ಯಮಂತ್ರಿಯಾಗಿ ನೀವು ಜಾರಿಗೆ ತಂದಿದ್ದರಿಂದ ಯಾವುದೇ ಆರ್ಥಿಕ ತೊಂದರೆಯಿಲ್ಲದೆ ಕಾನೂನು ಕೋರ್ಸ್ ಮಾಡಲು ಸಾಧ್ಯವಾಯಿತು. ಆದ್ದರಿಂದ ಟಿಕೇಟ್ ಎಲ್ಲವನ್ನು ಸಂಗ್ರಹಿಸಿ ಹಾರ ತಯಾರಿಸಿ ನಿಮ್ಮ ಭೇಟಿಗಾಗಿ ಕಾಯುತ್ತಿದ್ದೆ” ಎಂದು ಜಯಶ್ರೀ ಹೇಳಿದ್ದಾಳೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:27 pm, Tue, 23 April 24