ಹುಬ್ಬು ಸುಂದರವಾಗಿಸಲು ಬ್ಯೂಟಿ ಪಾರ್ಲರ್​​ ಹೋದ ಮಹಿಳೆಯ ಮುಖ ಹೇಗಾಯಿತು ನೋಡಿ

"ಬ್ಯೂಟಿಷಿಯನ್ ನನ್ನ ಚರ್ಮದ ಬಗ್ಗೆ ಯಾವುದೇ ಪರೀಕ್ಷೆ ಮಾಡಿಸಿಲ್ಲ. ಚಿಕಿತ್ಸೆಯ ನಂತರ, ಆರಂಭದಲ್ಲಿ ಮುಖವು ಚೆನ್ನಾಗಿತ್ತು, ಆದರೆ ಮರುದಿನ ಬೆಳಿಗ್ಗೆ ನನ್ನ ಎಡಗಣ್ಣು ತುಂಬಾ ಊದಿಕೊಂಡಿದೆ" ಎಂದು ಮಹಿಳೆ ಹೇಳಿರುವುದು ವರದಿಯಾಗಿದೆ. ಚರ್ಮದ ಅಲರ್ಜಿ ಪರೀಕ್ಷೆಯನ್ನು ಮಾಡಿಸದೇ ಬ್ಯೂಟಿಷನ್​​ ನೇರವಾಗಿ ಹುಬ್ಬುಗಳಿಗೆ ಬಣ್ಣ ಬಳಿದಿರುವುದೇ ಮಹಿಳೆಯ ಈ ಸ್ಥಿತಿಗೆ ಕಾರಣ ಎಂದು ವೈದ್ಯರು ತಿಳಿಸಿದ್ದಾರೆ.

ಹುಬ್ಬು ಸುಂದರವಾಗಿಸಲು ಬ್ಯೂಟಿ ಪಾರ್ಲರ್​​ ಹೋದ ಮಹಿಳೆಯ ಮುಖ ಹೇಗಾಯಿತು ನೋಡಿ
ಡೇನಿಯಲ್ ಹಬಾರ್ಡ್
Follow us
ಅಕ್ಷತಾ ವರ್ಕಾಡಿ
|

Updated on: Apr 22, 2024 | 11:09 AM

ಬ್ಯೂಟಿ ಪಾರ್ಲರ್‌ ಮಹಿಳೆಯ ಅಚ್ಚು ಮೆಚ್ಚಿನ ತಾಣ. ಯಾವುದೇ ವಿಶೇಷ ಕಾರ್ಯಕ್ರಮಗಳಿರಲಿ ಮಹಿಳೆಯರು ತಮ್ಮ ಅಂದ ಚೆಂದವನ್ನು ಹೆಚ್ಚಿಸಲು ಮೊದಲು ಹೋಗುವುದು ಬ್ಯೂಟಿ ಪಾರ್ಲರ್​​ಗೆ. ಸಾಮಾನ್ಯವಾಗಿ ಪಾರ್ಲರ್​​ಗೆ ಹೋದರೆ ಮುಖದ ಅಂದ ಹೆಚ್ಚುತ್ತದೆ. ಆದರೆ ಇಲ್ಲೊಬ್ಬಳು ಯುವತಿ ಪಾರ್ಲರ್​​ಗೆ ಹೋಗಿ ಬಂದ ಮರುದಿನ ಮುಖ ವಿಚಿತ್ರವಾಗಿದ್ದು, ಕಣ್ಣು ಸಂಪೂರ್ಣವಾಗಿ ಊದಿಕೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾಳೆ.

ಮಹಿಳೆಯ ಹೆಸರು ಡೇನಿಯಲ್ ಹಬಾರ್ಡ್. ಮಿರರ್ ವರದಿಯ ಪ್ರಕಾರ, ಡೇನಿಯಲ್ ಮಾಲ್ಟಾದಲ್ಲಿ 12 ಪೌಂಡ್‌ಗಳ ಅಂದರೆ ಸುಮಾರು 1237 ರೂಪಾಯಿ ಮೌಲ್ಯದ ಸೌಂದರ್ಯ ಚಿಕಿತ್ಸೆಯನ್ನು ಬುಕ್ ಮಾಡಿದ್ದಳು. “ಬ್ಯೂಟಿಷಿಯನ್ ನನ್ನ ಚರ್ಮದ ಬಗ್ಗೆ ಯಾವುದೇ ಪರೀಕ್ಷೆ ಮಾಡಿಸಿಲ್ಲ. ಆದರೂ ಚಿಕಿತ್ಸೆಯ ನಂತರ, ಆರಂಭದಲ್ಲಿ ಮುಖವು ಚೆನ್ನಾಗಿತ್ತು, ಆದರೆ ಮರುದಿನ ಬೆಳಿಗ್ಗೆ ನನ್ನ ಎಡಗಣ್ಣು ತುಂಬಾ ಊದಿಕೊಂಡಿದೆ” ಎಂದು ಮಹಿಳೆ ಹೇಳಿರುವುದು ವರದಿಯಾಗಿದೆ.

ಇದನ್ನೂ ಓದಿ: Viral Video: ತಮಾಷೆ ನೆಪದಲ್ಲಿ ಮದುವೆ ಮಂಟಪದಲ್ಲಿ ಪುರೋಹಿತರಿಗೆ ಅವಮಾನ ಮಾಡಿದ ಯುವಕರು

ಚರ್ಮದ ಅಲರ್ಜಿ ಪರೀಕ್ಷೆಯನ್ನು ಮಾಡಿಸದೇ ಬ್ಯೂಟಿಷನ್​​ ನೇರವಾಗಿ ಹುಬ್ಬುಗಳಿಗೆ ಬಣ್ಣ ಬಳಿಯಲು ಪ್ರಾರಂಭಿಸಿದ್ದಾಳೆ. ಇದರಿಂದ ಮರುದಿನ ಬೆಳಗ್ಗೆ ಏಳುತ್ತಿದ್ದಂತೆ ಕಣ್ಣು ಸಂಪೂರ್ಣವಾಗಿ ಊದಿಕೊಂಡಿದ್ದು, ಇದೀಗ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ರಾಯಲ್ ಬ್ಲಾಕ್‌ಬರ್ನ್ ಆಸ್ಪತ್ರೆಯಲ್ಲಿ ಅಲರ್ಜಿಯ ಪ್ರತಿಕ್ರಿಯೆಗೆ ಚಿಕಿತ್ಸೆ ನೀಡಲು ಸ್ಟೀರಾಯ್ಡ್‌ಗಳನ್ನು ನೀಡಲಾಗಿದ್ದು, ಸದ್ಯ ಗುಣಮುಖರಾಗುತ್ತಿದ್ದಾಳೆ.  ಇದಾದ ಬಳಿಕ ಮತ್ತೊಮ್ಮೆ ಬ್ಯೂಟಿಪಾರ್ಲರ್‌ಗೆ ತೆರಳಿ ದೂರು ನೀಡಿ ನಷ್ಟದ ಹಣ ವಾಪಸು ಪಡೆಯಲು ಮುಂದಾದರೂ ಬ್ಯೂಟಿಷಿಯನ್ ತನ್ನ ತಪ್ಪಿಗೆ ಪಶ್ಚಾತ್ತಾಪ ಪಡಲಿಲ್ಲ, ಕ್ಷಮೆ ಯಾಚಿಸಲಿಲ್ಲ. ಆದ್ದರಿಂದ ಬ್ಯೂಟಿ ಪಾರ್ಲರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಡೇನಿಯಲ್ ವಕೀಲರನ್ನು ಸಂಪರ್ಕಿಸಿದ್ದಾಳೆ ಎಂದು ತಿಳಿದುಬಂದಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ
ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ
News9 Global Summit: ನ್ಯೂಸ್9 ಗ್ಲೋಬಲ್ ಸಮಿಟ್ ಎರಡನೇ ದಿನದ ಲೈವ್
News9 Global Summit: ನ್ಯೂಸ್9 ಗ್ಲೋಬಲ್ ಸಮಿಟ್ ಎರಡನೇ ದಿನದ ಲೈವ್
ವಿಪಕ್ಷ ನಾಯಕ ಅಶೋಕ ಮಾತಾಡುವ ವೈಖರಿ ವಿಷಾದಕರ: ಚಲುವರಾಯಸ್ವಾಮಿ
ವಿಪಕ್ಷ ನಾಯಕ ಅಶೋಕ ಮಾತಾಡುವ ವೈಖರಿ ವಿಷಾದಕರ: ಚಲುವರಾಯಸ್ವಾಮಿ
ಮಹಾರಾಷ್ಟ್ರದಲ್ಲಿ ಮಹಾವಿಕಾಸ್ ಅಘಾಡಿ ಅಧಿಕಾರಕ್ಕೆ ಬರಲಿದೆ: ಪರಮೇಶ್ವರ್
ಮಹಾರಾಷ್ಟ್ರದಲ್ಲಿ ಮಹಾವಿಕಾಸ್ ಅಘಾಡಿ ಅಧಿಕಾರಕ್ಕೆ ಬರಲಿದೆ: ಪರಮೇಶ್ವರ್
ಫ್ಯಾಷನ್ ಪ್ಯಾಂಟಿಗೆ ಹೊಲಿಗೆ ಹಾಕಿದ್ದಕ್ಕೆ ಯುವಕ ಆತ್ಮಹತ್ಯೆಗೆ ಯತ್ನ
ಫ್ಯಾಷನ್ ಪ್ಯಾಂಟಿಗೆ ಹೊಲಿಗೆ ಹಾಕಿದ್ದಕ್ಕೆ ಯುವಕ ಆತ್ಮಹತ್ಯೆಗೆ ಯತ್ನ
‘ಸಂಗೊಳ್ಳಿ ರಾಯಣ್ಣ’ ಮರು ಬಿಡುಗಡೆ, ಚಿತ್ರಮಂದಿರ ಖಾಲಿ: ಅಭಿಮಾನಿಗಳ ಆಕ್ರೋಶ
‘ಸಂಗೊಳ್ಳಿ ರಾಯಣ್ಣ’ ಮರು ಬಿಡುಗಡೆ, ಚಿತ್ರಮಂದಿರ ಖಾಲಿ: ಅಭಿಮಾನಿಗಳ ಆಕ್ರೋಶ
ಯತ್ನಾಳ್ ಮತ್ತು ವಿಜಯೇಂದ್ರ ನಡುವೆ ಪ್ರತಿಷ್ಠೆಯ ಹೋರಾಟ ನಡೆದಿದೆ: ಪಾಟೀಲ್
ಯತ್ನಾಳ್ ಮತ್ತು ವಿಜಯೇಂದ್ರ ನಡುವೆ ಪ್ರತಿಷ್ಠೆಯ ಹೋರಾಟ ನಡೆದಿದೆ: ಪಾಟೀಲ್