ಪದೇಪದೆ ಬ್ಯೂಟಿ ಪಾರ್ಲರ್ಗೆ ಹೋಗುತ್ತೀರಾ?; ನಿಮ್ಮ ಹೇರ್ವಾಶ್ ಬ್ರೈನ್ ಸ್ಟ್ರೋಕ್ಗೆ ಕಾರಣವಾದೀತು!
ಬ್ಯೂಟಿ ಪಾರ್ಲರ್ ಸಿಂಡ್ರೋಮ್ ಇತ್ತೀಚೆಗೆ ಹೆಚ್ಚು ಪ್ರಚಲಿತದಲ್ಲಿರುವ ಸಮಸ್ಯೆಯಾಗಿದೆ. ಸಲೂನ್‌ಗೆ ಹೋಗಿ ಹೇರ್ ವಾಶ್ ಸರ್ವಿಸ್ ಪಡೆದ ನಂತರ ಪಾರ್ಶ್ವವಾಯು ಅಥವಾ ಇತರ ನರವೈಜ್ಞಾನಿಕ ರೋಗಲಕ್ಷಣಗಳನ್ನು ಅನುಭವಿಸುತ್ತಿರುವ ವ್ಯಕ್ತಿಗಳ ಸಂಖ್ಯೆ ಬಹಳಷ್ಟು ಹೆಚ್ಚುತ್ತಿದೆ.
ಬ್ಯೂಟಿ ಸಲೂನ್‌ಗೆ ಹೋಗದೇ ಇರುವವರೇ ಕಡಿಮೆ. ಕೆಲವರಂತೂ ಸಲೂನ್ನಲ್ಲೇ ತಲೆಕೂದಲು ವಾಶ್ ಮಾಡಿಸಿಕೊಳ್ಳುತ್ತಾರೆ. ಮನೆಯಲ್ಲಿ ಅಪ್ಪಿತಪ್ಪಿಯೂ ತಲೆಸ್ನಾನ ಮಾಡುವುದಿಲ್ಲ. ನೀವು ಕೂಡ ಪದೇಪದೆ ಸಲೂನ್‌ಗೆ ಹೋಗಿ ಹೇರ್ ವಾಶ್ ಮಾಡಿಸಿಕೊಳ್ಳುತ್ತೀರಾ? ಹಾಗಾದರೆ ಈ ಸುದ್ದಿಯನ್ನು ನೀವು ಓದಲೇಬೇಕು. ಏಕೆಂದರೆ, ಸಲೂನ್‌ನಲ್ಲಿ ನೀವು ದುಬಾರಿ ಹಣ ಕೊಟ್ಟು ಮಾಡಿಸುವ ಒಂದು ಹೇರ್ ವಾಶ್ನಿಂದ ಬ್ರೈನ್ ಸ್ಟ್ರೋಕ್ ಆದೀತು ಎಚ್ಚರ!
ಬ್ಯೂಟಿ ಪಾರ್ಲರ್ ಸಿಂಡ್ರೋಮ್ ಇತ್ತೀಚೆಗೆ ಹೆಚ್ಚು ಪ್ರಚಲಿತದಲ್ಲಿರುವ ಸಮಸ್ಯೆಯಾಗಿದೆ. ಸಲೂನ್‌ಗೆ ಹೋಗಿ ಹೇರ್ ವಾಶ್ ಸರ್ವಿಸ್ ಪಡೆದ ನಂತರ ಪಾರ್ಶ್ವವಾಯು ಅಥವಾ ಇತರ ನರವೈಜ್ಞಾನಿಕ ರೋಗಲಕ್ಷಣಗಳನ್ನು ಅನುಭವಿಸುತ್ತಿರುವ ವ್ಯಕ್ತಿಗಳ ಸಂಖ್ಯೆ ಬಹಳಷ್ಟು ಹೆಚ್ಚುತ್ತಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಇದನ್ನು ಅಧಿಕೃತವಾಗಿ ಗುರುತಿಸಲಾಗಿಲ್ಲವಾದರೂ, ಸಲೂನ್ ಚಿಕಿತ್ಸೆಗಳಿಗೆ ಸಂಬಂಧಿಸಿದ ಅಪಾಯಗಳನ್ನು ಮತ್ತು ಸುರಕ್ಷತೆಯ ಅಗತ್ಯವನ್ನು ಅರ್ಥಮಾಡಿಕೊಳ್ಳುವ ಪ್ರಾಮುಖ್ಯತೆಯನ್ನು ಈ ಸಮಸ್ಯೆ ಎತ್ತಿ ತೋರಿಸುತ್ತದೆ.
ಇದನ್ನೂ ಓದಿ: ನೆನಪಿನ ಶಕ್ತಿ, ಮೆದುಳಿನ ಆರೋಗ್ಯಕ್ಕೆ ಮನೆಯಲ್ಲೇ ತಯಾರಿಸಿದ 5 ಜ್ಯೂಸ್ಗಳು ಇಲ್ಲಿವೆ
ಪಾರ್ಲರ್ ಚಿಕಿತ್ಸೆಗಳು ಪಾರ್ಶ್ವವಾಯುವಿಗೆ ಹೇಗೆ ಕಾರಣವಾಗುತ್ತವೆ?:
ತಜ್ಞರ ಪ್ರಕಾರ, ಪಾರ್ಶ್ವವಾಯು ಅಪಾಯವು ಮುಖ್ಯವಾಗಿ ಸಲೂನ್‌ನಲ್ಲಿ ನಿಮ್ಮ ಕೂದಲನ್ನು ತೊಳೆಯುವ ಅಥವಾ ಶಾಂಪೂ ಮಾಡಿಸಿಕೊಳ್ಳುವ ಅಭ್ಯಾಸದೊಂದಿಗೆ ಲಿಂಕ್ ಆಗಿದೆ. ಕತ್ತಿನ ಅಸಹಜ ಮತ್ತು ದೀರ್ಘಕಾಲದ ಹೈಪರ್ ಎಕ್ಸ್‌ಟೆನ್ಶನ್‌ನಿಂದ ಮೆದುಳಿಗೆ ಕನೆಕ್ಟ್ ಆಗುವ ರಕ್ತನಾಳಗಳ ಮೇಲೆ ಒತ್ತಡ ಬೀಳುವುದರಿಂದ ಬ್ರೈನ್ ಸ್ಟ್ರೋಕ್ ಆಗುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ತೀವ್ರವಾದ ಕುತ್ತಿಗೆ ಮತ್ತು ತಲೆ ಮಸಾಜ್‌ಗಳಿಂದಾಗಿ ಮೆದುಳಿನ ರಕ್ತ ಪೂರೈಕೆಗೆ ಅಡ್ಡಿಯಾಗುತ್ತದೆ ಎಂದು ಯಶೋದಾ ಹಾಸ್ಪಿಟಲ್ಸ್ ಕನ್ಸಲ್ಟೆಂಟ್ ನ್ಯೂರಾಲಜಿಸ್ಟ್ ಡಾ. ಕಂಡ್ರಾಜು ಸಾಯಿ ಸತೀಶ್ ಟೈಮ್ಸ್ ನೌಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಬ್ಯೂಟಿ ಪಾರ್ಲರ್ ಸಿಂಡ್ರೋಮ್ ಅನ್ನು ತಡೆಯುವುದು ಹೇಗೆ?:
ತಜ್ಞರ ಪ್ರಕಾರ, ವಿಶ್ರಾಂತಿ ಮತ್ತು ಖಿನ್ನತೆಗೆ ಒಳಗಾದಾಗಲೂ ನೀವು ಎಚ್ಚರಿಕೆಯಿಂದ ಇರಬೇಕು. ಸಲೂನ್‌ನಲ್ಲಿ ನಿಮ್ಮ ಕೂದಲನ್ನು ತೊಳೆಸಿಕೊಳ್ಳುವಾಗ ನಿಮಗೆ ಖುಷಿಯಾದರೂ ಸಹ ಆ ಸಂದರ್ಭದಲ್ಲಿ ನಿಮ್ಮ ತಲೆ ಹಿಂದಕ್ಕೆ ಬಹಳ ಬಾಗದಂತೆ ಮತ್ತು ಹೇರ್ ವಾಶ್ ಮಾಡುವ ಟಬ್ನಿಂದ ನಿಮ್ಮ ಕುತ್ತಿಗೆ ಹಿಂಭಾಗಕ್ಕೆ ಹೆಚ್ಚು ಒತ್ತಡ ಬೀಳದಂತೆ ಯಾವಾಗಲೂ ಎಚ್ಚರದಿಂದಿರಬೇಕು.
ಇದನ್ನೂ ಓದಿ: ಪಾರ್ಶ್ವವಾಯುವಿನ ಲಕ್ಷಣಗಳನ್ನು ನೀವು ನಿರ್ಲಕ್ಷಿಸಲೇಬಾರದು ಏಕೆ? ಇಲ್ಲಿದೆ ಮಾಹಿತಿ
ಒಂದುವೇಳೆ ಹೇರ್ ವಾಶ್ ಮಾಡುವಾಗ ನಿಮಗೆ ಕಿರಿಕಿರಿ ಅಥವಾ ನೋವು ಉಂಟಾದರೆ ತಕ್ಷಣ ನಿಮ್ಮ ಭಂಗಿಯನ್ನು ಬದಲಾಯಿಸಬೇಕು. ಸಾಧ್ಯವಾದಷ್ಟೂ ಮನೆಯಲ್ಲೇ ನಿಮ್ಮ ಕೂದಲನ್ನು ವಾಶ್ ಮಾಡಿಕೊಳ್ಳಿ. ಬ್ಯೂಟಿ ಪಾರ್ಲರ್‌ನಲ್ಲಿರುವಾಗ ನಿಮಗೆ ಯಾವುದೇ ಸಮಸ್ಯೆ ಉಂಟಾದರೆ ಕುತ್ತಿಗೆಯ ಹೈಪರ್‌ಎಕ್ಸ್‌ಟೆನ್ಶನ್ ಅಪಾಯಕಾರಿಯಾಗಬಹುದಾದ್ದರಿಂದ ನೀವು ತಕ್ಷಣ ತಪಾಸಣೆ ಮಾಡಿಸಿಕೊಳ್ಳುವುದನ್ನು ಮರೆಯಬೇಡಿ.
ಬ್ರೈನ್ ಸ್ಟ್ರೋಕ್ ಎಂದರೇನು?:
ಮೆದುಳಿನ ಒಂದು ಭಾಗಕ್ಕೆ ರಕ್ತ ಪೂರೈಕೆ ಸ್ಥಗಿತಗೊಂಡಾಗ ಅಥವಾ ಮೆದುಳಿನಲ್ಲಿನ ರಕ್ತನಾಳವು ಸಿಡಿಯುವಾಗ ಕೆಲವೊಮ್ಮೆ ಬ್ರೈನ್ ಸ್ಟ್ರೋಕ್ ಸಂಭವಿಸುತ್ತದೆ. ಈ ಎರಡೂ ಸಂದರ್ಭಗಳಲ್ಲಿ ಮೆದುಳಿನ ಭಾಗಗಳು ಹಾನಿಗೊಳಗಾಗುತ್ತವೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ