Google’s Year in Search 2023: ಭಾರತದಲ್ಲಿ ಗೂಗಲ್​​​ ಅಣ್ಣನಲ್ಲಿ ಕೇಳಿದ ಟಾಪ್ 10 ಪಾಕವಿಧಾನಗಳು

ಇಯರ್ ಇನ್ ಸರ್ಚ್ 2023ರಲ್ಲಿ ಟಾಪ್ 10 ನಲ್ಲಿರುವ ಪಾಕವಿಧಾನಗಳು ಯಾವುದು ತಿಳಿದಿದೆಯಾ? ಭಾರತದಲ್ಲಿ ಹೆಚ್ಚು ಹುಡುಕಲ್ಪಟ್ಟ ಮಸಾಲೆಯುಕ್ತ ಹಾಗೂ ರುಚಿಕರ ರೆಸಿಪಿ ಜೊತೆಗೆ ಹಬ್ಬ- ಹರಿದಿನ, ರಜಾದಿನಗಳಲ್ಲಿ ಮಾಡಿದ ಪಾಕವಿಧಾನಗಳ ಮಿಶ್ರಣವು ಈ ಪಟ್ಟಿಯಲ್ಲಿದ್ದು ನೀವು ಕೂಡ ಇದರಿಂದ ಪ್ರಭಾವಿತರಾಗಿ ಈ ರೆಸಿಪಿಗಳನ್ನು ಟ್ರೈ ಮಾಡಬಹುದು.

Google's Year in Search 2023: ಭಾರತದಲ್ಲಿ ಗೂಗಲ್​​​ ಅಣ್ಣನಲ್ಲಿ ಕೇಳಿದ ಟಾಪ್ 10 ಪಾಕವಿಧಾನಗಳು
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 13, 2023 | 12:08 PM

ಗೂಗಲ್ ವರ್ಷದ ಟ್ರೆಂಡಿಂಗ್ ಹುಡುಕಾಟಗಳ ವಾರ್ಷಿಕ ವರದಿಯಾದ ಇಯರ್ ಇನ್ ಸರ್ಚ್ 2023 ಅನ್ನು ಅನಾವರಣಗೊಳಿಸಿದ್ದು, ಭಾರತದಲ್ಲಿ ಹೆಚ್ಚು ಹುಡುಕಲ್ಪಟ್ಟ ಮಸಾಲೆಯುಕ್ತ ಹಾಗೂ ರುಚಿಕರ ರೆಸಿಪಿ ಜೊತೆಗೆ ಹಬ್ಬ- ಹರಿದಿನ, ರಜಾದಿನಗಳಲ್ಲಿ ಮಾಡಿದ ಪಾಕವಿಧಾನಗಳ ಮಿಶ್ರಣವು ಟಾಪ್ 10 ಪಾಕವಿಧಾನಗಳಲ್ಲಿ ಸ್ಥಾನ ಪಡೆದಿದೆ. ಮಾವಿನ ಉಪ್ಪಿನಕಾಯಿ ಅಥವಾ ‘ಆಮ್ ಕಾ ಆಚಾರ್’ ಮೊದಲ ಸ್ಥಾನವನ್ನು ಪಡೆದುಕೊಂಡಿದೆ, ಇದು ಯಾವುದೇ ರೀತಿಯ ಊಟಕ್ಕೂ ಸಹ ಗಾಢ ಮತ್ತು ಮಸಾಲೆಯುಕ್ತ ರುಚಿ ನೀಡಲು ಸಹಕಾರಿಯಾಗಿದೆ. ಇನ್ನು ರಜಾ ದಿನಗಳಲ್ಲಿ ಬೀಚ್ ಬದಿಯಲ್ಲಿ ಮಾಡಬಹುದಾದ ಸೆಕ್ಸ್ ಆನ್ ದಿ ಬೀಚ್ ಪಾನೀಯವು ಹೆಚ್ಚು ಹುಡುಕಲ್ಪಟ್ಟ ಪಾಕವಿಧಾನಗಳ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಇನ್ನು ಪಂಚಾಮೃತ, ಧನಿಯಾ ಪಂಜಿರಿ, ಕಾರಂಜಿ, ತಿರುವಥಿರೈ ಕಾಳಿ, ಯುಗಾದಿ ಪಚಡಿ, ಕೊಲುಕಟ್ಟೈ ಮತ್ತು ರವಾ ಲಡ್ಡು ಟಾಪ್ 10 ರಲ್ಲಿ ಸ್ಥಾನ ಪಡೆದಿವೆ.

ಭಾರತದಲ್ಲಿ ಹೆಚ್ಚು ಹುಡುಕಲ್ಪಟ್ಟ ಟಾಪ್ 10 ಪಾಕವಿಧಾನಗಳ ಪಟ್ಟಿ ಇಲ್ಲಿದೆ;

1. ಮಾವಿನ ಉಪ್ಪಿನಕಾಯಿ ಪಾಕವಿಧಾನ

ಭಾರತದಲ್ಲಿ ಮಾವಿನಹಣ್ಣನ್ನು ಇಷ್ಟಪಟ್ಟು ತಿನ್ನುವ ಹಾಗೆ ಬೇರೆಲ್ಲಿಯೂ ಇಷ್ಟಪಡಲಾರರು. ಭಾರತೀಯರಿಗೆ ಮಾವಿನಕಾಯಿ ಒಂದು ರೀತಿಯ ಗೀಳು. ಇದನ್ನು ಸಲಾಡ್ಗಳು, ಸ್ಮೂಥಿಗಳು, ಪಲ್ಯಗಳಿಂದ ಹಿಡಿದು, ಉಪ್ಪಿನಕಾಯಿ ವರೆಗೆ, ಈ ಹಣ್ಣು ಅಥವಾ ಕಾಯಿ ಅಸಂಖ್ಯಾತ ರೆಸಿಪಿಗಳ ತಯಾರಿಕೆಗಳಲ್ಲಿ ಕಂಡು ಬರುತ್ತದೆ. ಮಾವಿನ ಹಣ್ಣುಗಳು ಎಲ್ಲಿಯೂ ಕಾಣಿಸದ ಋತುವಿನಲ್ಲಿಯೂ, ಮಾವಿನ ಉಪ್ಪಿನಕಾಯಿ ನಮ್ಮ ಊಟದ ಪರಿಪೂರ್ಣ ಸಂಗಾತಿಯಾಗುತ್ತದೆ. ಮಾವಿನ ಉಪ್ಪಿನಕಾಯಿ ಪಾಕವಿಧಾನವು 2023 ರಲ್ಲಿ ಭಾರತದಲ್ಲಿ ಹೆಚ್ಚು ಹುಡುಕಲ್ಪಟ್ಟ ರೆಸಿಪಿಗಳಲ್ಲಿ ಮೊದಲ ಸ್ಥಾನದಲ್ಲಿದೆ.

2. ಸೆಕ್ಸ್ ಆನ್ ದಿ ಬೀಚ್ ಪಾನೀಯ

ಜನಪ್ರಿಯ ಪಾನೀಯವು ಅದರ ದೃಶ್ಯ ಆಕರ್ಷಣೆ ಮತ್ತು ಸಿಹಿ ಹಾಗೂ ಗಾಢ ರುಚಿಯಿಂದಾಗಿ ಕಾಕ್ಟೈಲ್ ಉತ್ಸಾಹಿಗಳಿಗೆ ಹೆಚ್ಚು ಮೆಚ್ಚುಗೆಯಾಗುತ್ತದೆ. ಫ್ಲೋರಿಡಾದ ಕಾನ್ಫೆಟ್ಟಿಸ್ ಬಾರ್ನ ಬಾರ್ಟೆಂಡರ್ ಎನ್ನುವವರು ವೋಡ್ಕಾ, ಪೀಚ್ ಸ್ಕ್ನಾಪ್ಸ್, ಕಿತ್ತಳೆ ರಸ ಮತ್ತು ಕ್ರ್ಯಾನ್ಬೆರ್ರಿ ರಸದ ಮಿಶ್ರಣವಾದ ಈ ಪಾನೀಯವನ್ನು 1987 ರಲ್ಲಿ ಆವಿಷ್ಕಾರಗೊಳಿಸಿದರು, ಬಳಿಕ ಅವರು ಕೆಲವು ಹಣ್ಣಿನ ಕಾಕ್ಟೈಲ್ ಅನ್ನು ತಯಾರಿಸಿದರು ಮತ್ತು ಅದನ್ನು ಸೆಕ್ಸ್ ಆನ್ ದಿ ಬೀಚ್ ಎಂದು ಹೆಸರಿಸಿದ್ದಾರೆ. ಈ ಪಾನೀಯದ ಗುರಿ ಹೆಚ್ಚು ಮಾರುಕಟ್ಟೆಗಳಲ್ಲಿ ಸೇಲ್ ಆಗುವುದಾಗಿತ್ತು. ಗೂಗಲ್​​ನ ಇಯರ್ ಇನ್ ಸರ್ಚ್ 2023 ಪಟ್ಟಿಯಲ್ಲಿ, ಈ ಪಾಕವಿಧಾನವು 2ನೇ ಸ್ಥಾನವನ್ನು ಪಡೆದು ಕೊಂಡಿದೆ.

3. ಪಂಚಾಮೃತ ಪಾಕವಿಧಾನ

ಪಂಚಾಮೃತವು ಭಾರತದಲ್ಲಿ ಮಾಡುವ ಪವಿತ್ರ ಪಾನೀಯವಾಗಿದ್ದು, ಇದನ್ನು ಶುಭ ಸಂದರ್ಭಗಳಲ್ಲಿ, ಹೆಚ್ಚಾಗಿ ಪೂಜಾ ಸಮಾರಂಭಗಳಲ್ಲಿ ತಯಾರಿಸಲಾಗುತ್ತದೆ. ಇದನ್ನು ಪ್ರಾಥಮಿಕವಾಗಿ ಹಾಲು, ಮೊಸರು, ತುಪ್ಪ, ಜೇನುತುಪ್ಪ ಮತ್ತು ಸಕ್ಕರೆ ಸೇರಿದಂತೆ ಐದು ಅಥವಾ ಪಂಚ ಪದಾರ್ಥಗಳಿಂದ ತಯಾರಿಸಲಾಗುತ್ತದೆ. ಇದನ್ನು ಮೊದಲು ದೇವತೆಗಳಿಗೆ ಅರ್ಪಿಸಲಾಗುತ್ತದೆ ಮತ್ತು ನಂತರ ಪ್ರಸಾದವಾಗಿ ವಿತರಿಸಲಾಗುತ್ತದೆ. ಪಂಚಾಮೃತವು ಅದರ ಆರೋಗ್ಯಕರ ಪದಾರ್ಥಗಳ ಮಿಶ್ರಣದೊಂದಿಗೆ ಉಪವಾಸದ ಸಮಯದಲ್ಲಿ ನಿಮ್ಮನ್ನು ಶಕ್ತಿಯುತವಾಗಿರಿಸುತ್ತದೆ ಮತ್ತು ರೋಗನಿರೋಧಕ ಶಕ್ತಿ ಮತ್ತು ಒಟ್ಟಾರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ.

4. ಹಕುಸಾಯಿ ಪಾಕವಿಧಾನ

ಉಪ್ಪು ಮತ್ತು ಉಪ್ಪಿನಕಾಯಿ ಜೊತೆಗೆ ಹಕುಸಾಯಿಯನ್ನು ಅನ್ನದೊಂದಿಗೆ ಆನಂದಿಸಬಹುದು ಅಥವಾ ಸೈಡ್ ಡಿಶ್ ಆಗಿ ಆನಂದಿಸಬಹುದು. ಇದನ್ನು ನಾಪಾ ಎಲೆಕೋಸು, ಕ್ಯಾರೆಟ್, ಕೊಂಬು, ಒಣಗಿದ ಜಪೋನ್ ಮತ್ತು ಕೋಷರ್ ಉಪ್ಪಿನಿಂದ ತಯಾರಿಸಲಾಗುತ್ತದೆ. ನಾಪಾ ಎಲೆಕೋಸು ಒಂದು ಚೀನೀ ಎಲೆಕೋಸು, ಇದು ಬೀಜಿಂಗ್ ಬಳಿ ಹುಟ್ಟಿಕೊಂಡಿತು ಮತ್ತು ಪೂರ್ವ ಏಷ್ಯಾದ ಪಾಕಪದ್ಧತಿಯಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ಸಾಂಪ್ರದಾಯಿಕ ಕೊರಿಯನ್ ಖಾದ್ಯವಾದ ಕಿಮ್ಚಿಯನ್ನು ತಯಾರಿಸಲು ನಾಪಾ ಎಲೆಕೋಸನ್ನು ಸಹ ಬಳಸಲಾಗುತ್ತದೆ.

5. ಧನಿಯಾ ಪಂಜಿರಿ ಪಾಕವಿಧಾನ

ಹಬ್ಬ ಮತ್ತು ಉಪವಾಸದ ಸಮಯದಲ್ಲಿ ಜನಪ್ರಿಯ ಆಹಾರವಾದ ಮತ್ತು ದೇವರಿಗೆ ನೈವೇದ್ಯಕ್ಕಿಡುವ ಧನಿಯಾ ಪಂಜಿರಿ ಆಹಾರವು ನಿಮಗೆ ರುಚಿಯ ಜೊತೆಗೆ ಶಕ್ತಿಯನ್ನು ನೀಡುತ್ತದೆ. ಪಾಕವಿಧಾನದಲ್ಲಿನ ಎಲ್ಲಾ ಪದಾರ್ಥಗಳು ಫೈಬರ್, ಉತ್ಕರ್ಷಣ ನಿರೋಧಕಗಳು ಮತ್ತು ಅಗತ್ಯ ಪೋಷಕಾಂಶಗಳಿಂದ ತುಂಬಿವೆ, ಇದು ಉಪವಾಸದ ಸಮಯದಲ್ಲಿ ಶಕ್ತಿ ನೀಡುತ್ತದೆ. ಇದನ್ನು ತಯಾರಿಸಲು, ಹುರಿದ ಕೊತ್ತಂಬರಿ ಪುಡಿ, ಮಖಾನಾ, ತುರಿದ ತೆಂಗಿನಕಾಯಿ, ಸಕ್ಕರೆ / ಬೆಲ್ಲ ಮತ್ತು ಒಣ ಹಣ್ಣುಗಳನ್ನು ಬಳಸಿಕೊಳ್ಳಲಾಗುತ್ತದೆ.

6. ಕಾರಂಜಿ ಅಥವಾ ಕರ್ಜಿಕಾಯಿ ಪಾಕವಿಧಾನ

ಗುಜಿಯಾದಂತೆ, ಕಾರಂಜಿ ಅಥವಾ ಕರ್ಜಿಕಾಯಿ ಎಂಬ ಪಾಕವಿಧಾನ ಗಣೇಶ ಚತುರ್ಥಿ, ದೀಪಾವಳಿ ಮತ್ತು ಹೋಳಿಯಂತಹ ಹಬ್ಬಗಳ ಸಮಯದಲ್ಲಿ ಮಾಡುವ ಸಿಹಿ ತಿಂಡಿಯಾಗಿದೆ. ಕರ್ಜಿಕಾಯಿಯಲ್ಲಿ ಗೋದಿ, ತೆಂಗಿನ ತುರಿ, ಶೇಂಗಾ, ಬೆಲ್ಲ ಸೇರಿ ಅನೇಕ ಪದಾರ್ಥಗಳನ್ನು ಬಳಸಲಾಗುತ್ತದೆ. ಇದರಲ್ಲಿ ಹೆಚ್ಚಿನ ಕ್ಯಾಲೋರಿಗಳಿದ್ದು ದೇಹಕ್ಕೆ ಪೂರಕ ಆಹಾರವಾಗಿದೆ. ಇದು ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ, ಜೊತೆಗೆ ಉತ್ತಮ ಪ್ರಮಾಣದ ಫೈಬರ್ ಅನ್ನು ಹೊಂದಿರುತ್ತದೆ ಹಾಗೂ ಹಲವಾರು ವಿಟಮಿನ್ ಮತ್ತು ಖನಿಜಗಳ ಮೂಲವಾಗಿದೆ.

ಇದನ್ನೂ ಓದಿ:ಜಾಗತಿಕ ಮಟ್ಟದಲ್ಲಿ ಗೂಗಲ್​​ನಲ್ಲಿ ಜನ ಹೆಚ್ಚು ಹುಡುಕಿದ ವಿಷಯ ಏನು?

7. ತಿರುವಥಿರೈ ಕಾಳಿ ಪಾಕವಿಧಾನ

ತಿರುವತಿರೈ ಎಂಬುದು ಒಂದು ರೀತಿಯ ಹಲ್ವಾ. ಜೊತೆಗೆ ದೇವರಿಗೆ ಅರ್ಪಿಸಲಾಗುವ ಆಹ್ಲಾದಕರ ಸಿಹಿ ಮತ್ತು ಜನಪ್ರಿಯ ನೈವೇದ್ಯ, ಇದನ್ನು ಒರಟಾಗಿ ಪುಡಿಮಾಡಿದ ಅಕ್ಕಿ, ಹೆಸರುಬೇಳೆ, ಬೆಲ್ಲ, ಏಲಕ್ಕಿ, ಬೀಜಗಳು ಮತ್ತು ತೆಂಗಿನಕಾಯಿಯಿಂದ ತಯಾರಿಸಲಾಗುತ್ತದೆ.

8. ಯುಗಾದಿ ಪಚಡಿ ಪಾಕವಿಧಾನ

ಹಬ್ಬದ ದಿನ ತಿನ್ನಬೇಕೆಂದೆನಿಸುವ ಅಚ್ಚುಮೆಚ್ಚಿನ ಈ ಖಾದ್ಯವು ದಕ್ಷಿಣದ ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದಲ್ಲಿ ಜನಪ್ರಿಯವಾಗಿದೆ. ಯುಗಾದಿಯ ಶುಭ ಸಂದರ್ಭದಲ್ಲಿ ತಯಾರಿಸಲಾಗುವ ಇದು ಆರು ರುಚಿಗಳ ಸಂಯೋಜನೆಯನ್ನು ನೀಡುತ್ತದೆ. ಬೇವಿನ ಹೂವುಗಳು, ಹಸಿ ಮಾವು, ಬೆಲ್ಲ, ಮೆಣಸಿನ ಪುಡಿ, ತೆಂಗಿನಕಾಯಿ ಮತ್ತು ಉಪ್ಪನ್ನು ಸೇರಿಸುವ ಮೂಲಕ ಈ ಪಾಕವಿಧಾನವನ್ನು ತಯಾರಿಸಲಾಗುತ್ತದೆ.

9. ಮೋದಕ ಅಥವಾ ಕೊಲುಕಟ್ಟೈ ಪಾಕವಿಧಾನ

ವಿನಾಯಕ ಚತುರ್ಥಿಯ ಸಮಯದಲ್ಲಿ ತಯಾರಿಸಲಾಗುವ ಜನಪ್ರಿಯ ಸಿಹಿ ತಿಂಡಿಯಾಗಿದ್ದು, ಕೋಜುಕಟ್ಟೈ ಅಥವಾ ಕೊಲುಕಟ್ಟೈ ಎಂಬ ಹೆಸರುಗಳಿಂದ ಹೆಸರುವಾಸಿಯಾಗಿದೆ. ಇದು ಮೋದಕದಂತೆ ಇರುತ್ತದೆ ಆದರೆ ಇದರಲ್ಲಿ ತೆಂಗಿನಕಾಯಿ ಮತ್ತು ಬೆಲ್ಲವನ್ನು ಕುಂಬಳಕಾಯಿ ಜೊತೆಗೆ ಬೇಯಿಸಿಕೊಂಡು ಆ ಸಿಹಿ ಮಿಶ್ರಣವನ್ನು ಅಕ್ಕಿ ಹಿಟ್ಟಿನಿಂದ ಕಲಸಿಟ್ಟುಕೊಂಡದ್ದರ ಒಳಗೆ ಹೂರಣವನ್ನು ಇಟ್ಟು ಮೋದಕದಾಕಾರದಲ್ಲಿ ಮಾಡಿ ಹಬೆಯಲ್ಲಿ ಬೇಯಿಸಬೇಕಾಗುತ್ತದೆ. ತಮಿಳುನಾಡು ಮತ್ತು ಕೇರಳದ ಜನರ ಅಡುಗೆ ಮನೆಗಳಲ್ಲಿ ನೀವು ಇದನ್ನು ಜನಪ್ರಿಯವಾಗಿ ಕಾಣಬಹುದಾಗಿದೆ.

10. ರವಾ ಲಡ್ಡು ಪಾಕವಿಧಾನ

ಹಬ್ಬ ಮತ್ತು ಶುಭ ಸಂದರ್ಭಗಳಲ್ಲಿ ತಯಾರಿಸಲಾಗುವ ರವಾ ಲಡ್ಡು ರವೆ, ಸುಜಿ ರವೆ, ತುಪ್ಪ, ಸಕ್ಕರೆಯಿಂದ ತಯಾರಿಸಲಾಗುತ್ತದೆ ಇದರ ಜೊತೆ ಏಲಕ್ಕಿಯೊಂದಿಗೆ ಪರಿಮಳಯುಕ್ತವಾಗಿರುತ್ತದೆ. ಈ ಮಿಶ್ರಣವನ್ನು ದುಂಡಗಿನ ಲಡ್ಡುಗಳಾಗಿ ಮಾಡಿಕೊಂಡು ತಿಂದು ಆನಂದಿಸಬಹುದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?