Google Year in Search 2023: ಜಾಗತಿಕ ಮಟ್ಟದಲ್ಲಿ ಗೂಗಲ್ನಲ್ಲಿ ಜನ ಹೆಚ್ಚು ಹುಡುಕಿದ ವಿಷಯ ಏನು?
ಇಸ್ರೇಲ್-ಹಮಾಸ್ ಯುದ್ಧವು 2023 ರಲ್ಲಿ ಸುದ್ದಿ ಟ್ರೆಂಡ್‌ಗಳಲ್ಲಿ ಅಗ್ರಸ್ಥಾನದಲ್ಲಿದೆ. ಗೂಗಲ್‌ನ ಜಾಗತಿಕ ಡೇಟಾದ ಪ್ರಕಾರ, ಜೂನ್‌ನಲ್ಲಿ ಮುಳುಗಿದ ಟೈಟಾನಿಕ್-ಬೌಂಡ್ ಸಬ್‌ಮರ್ಸಿಬಲ್‌ಗೆ ಸಂಬಂಧಿಸಿದ ಪ್ರಶ್ನೆಗಳು ಮತ್ತು ಫೆಬ್ರವರಿಯಲ್ಲಿ ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪಗಳ ಬಗ್ಗೆ ಜನರು ಹುಡುಕಾಡಿದ್ದಾರೆ.
ದೆಹಲಿ ಡಿಸೆಂಬರ್ 12 : ಇಸ್ರೇಲ್-ಹಮಾಸ್ ಯುದ್ಧ(Israel-Hamas War), ಟೈಟಾನಿಕ್ ಜಲಾಂತರ್ಗಾಮಿ ನಾಪತ್ತೆಯಾಗಿದ್ದು ಮತ್ತು ಟರ್ಕಿಯ ವಿನಾಶಕಾರಿ ಭೂಕಂಪಗಳು (Earthquake) ಈ ವರ್ಷ ನಡೆದ ಕೆಲವು ಪ್ರಮುಖ ಘಟನೆಗಳ. ಪ್ರತಿ ವರ್ಷ, ಗೂಗಲ್ ‘ಇಯರ್ ಇನ್ ಸರ್ಚ್’ (Google Year in Search) ಅನ್ನು ಬಿಡುಗಡೆ ಮಾಡುತ್ತದೆ ಇದು ಜನರು ತಮ್ಮ Google ಸರ್ಚ್ ಬಾರ್‌ಗಳಲ್ಲಿ ಟೈಪ್ ಮಾಡಿದ ಹೆಚ್ಚು ಹುಡುಕಲಾದ ಪ್ರಶ್ನೆಗಳನ್ನು ತೋರಿಸುತ್ತದೆ. ಇಸ್ರೇಲ್‌ನಲ್ಲಿನ ಯುದ್ಧದಿಂದ ಟರ್ಕಿಯಲ್ಲಿನ ವಿನಾಶಕಾರಿ ಭೂಕಂಪಗಳವರೆಗೆ, 2023ರಲ್ಲಿ ಗೂಗಲ್ ನಲ್ಲಿ ಜನರು ಅತೀ ಹೆಚ್ಚು ಹುಡುಕಿದ ವಿಷಯಗಳು ಇಲ್ಲಿವೆ.
ನಡೆಯುತ್ತಿರುವ ಇಸ್ರೇಲ್-ಹಮಾಸ್ ಯುದ್ಧವು 2023 ರಲ್ಲಿ ಸುದ್ದಿ ಟ್ರೆಂಡ್‌ಗಳಲ್ಲಿ ಅಗ್ರಸ್ಥಾನದಲ್ಲಿದೆ, ಗೂಗಲ್‌ನ ಜಾಗತಿಕ ಡೇಟಾದ ಪ್ರಕಾರ, ಜೂನ್‌ನಲ್ಲಿ ಮುಳುಗಿದ ಟೈಟಾನಿಕ್-ಬೌಂಡ್ ಸಬ್‌ಮರ್ಸಿಬಲ್‌ಗೆ ಸಂಬಂಧಿಸಿದ ಪ್ರಶ್ನೆಗಳು ಮತ್ತು ಫೆಬ್ರವರಿಯಲ್ಲಿ ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪಗಳ ಬಗ್ಗೆ ಜನರು ಹುಡುಕಾಡಿದ್ದಾರೆ.
ಈ ವರ್ಷ ಹುಡುಕಾಟದಲ್ಲಿ ದಮರ್ ಹ್ಯಾಮ್ಲಿನ್ ಗೂಗಲ್‌ನ ಟಾಪ್ ಟ್ರೆಂಡಿಂಗ್ ವ್ಯಕ್ತಿ. 2023 ರ ಆರಂಭದಲ್ಲಿ ಗಂಭೀರವಾದ ಸ್ನೋಪ್ಲೋ ಅಪಘಾತದಿಂದ ಬದುಕುಳಿದ ನಟ ಜೆರೆಮಿ ರೆನ್ನರ್ ಬಗ್ಗೆಯೂ ಜನ ಹುಡುಕಾಟ ನಡೆಸಿದ್ದಾರೆ.ಏತನ್ಮಧ್ಯೆ, ದಿವಂಗತ ಮ್ಯಾಥ್ಯೂ ಪೆರ್ರಿ ಮತ್ತು ಟೀನಾ ಟರ್ನರ್ ಬಗ್ಗೆ ಜನ ಹೆಚ್ಚು ಹೆಚ್ಚು ಹುಡುಕಿದ್ದಾರೆ
ಮನರಂಜನಾ ಜಗತ್ತಿನಲ್ಲಿ, “ಬಾರ್ಬಿ” ಈ ವರ್ಷ ಗೂಗಲ್ ಸರ್ಚ್‌ನ ಚಲನಚಿತ್ರ ಟ್ರೆಂಡ್‌ಗಳಲ್ಲಿ ಪ್ರಾಬಲ್ಯ ಸಾಧಿಸಿದೆ.ಆನಂತರದ ಸ್ಥಾನದಲ್ಲಿ “ಒಪ್ಪೆನ್‌ಹೈಮರ್” ಮತ್ತು “ಜವಾನ್ ಸಿನಿಮಾ ಇದೆ. ಟಿವಿಯಲ್ಲಿ, “ದಿ ಲಾಸ್ಟ್ ಆಫ್ ಅಸ್,” “ವೆನ್ಸ್ ಡೇ ಮತ್ತು “ಗಿನ್ನಿ ಆಂಡ್ ಜಾರ್ಜಿಯಾ” 2023 ರಲ್ಲಿ ಅಗ್ರ ಮೂರು ಟ್ರೆಂಡಿಂಗ್ ಶೋಗಳಾಗಿವೆ.
Yoasobi ಅವರ “アイドル (ಐಡಲ್)” ಹುಡುಕಾಟದಲ್ಲಿ Google ನ ಟಾಪ್ ಟ್ರೆಂಡಿಂಗ್ ಹಾಡು. ಜೇಸನ್ ಅಲ್ಡಿಯನ್ ಅವರ “ಟ್ರೈ ದಟ್ ಇನ್ ಎ ಸ್ಮಾಲ್ ಟೌನ್” ವಿವಾದದ ನಂತರ ಚಾರ್ಟ್‌ಗಳಲ್ಲಿ ಮೇಲೇರಿತು.ಬಿಬಿಂಬಾಪ್ ಟಾಪ್ ಟ್ರೆಂಡಿಂಗ್ ರೆಸಿಪಿಯಾಗಿತ್ತು. ಇಂಟರ್ ಮಿಯಾಮಿ CF, ಅರ್ಜೆಂಟೀನಾದ ಫುಟ್‌ಬಾಲ್ ಸೂಪರ್‌ಸ್ಟಾರ್ ಲಿಯೋನೆಲ್ ಮೆಸ್ಸಿಯ ಹೊಸ ಮನೆ ಕ್ರೀಡಾ ವಿಷಯದಲ್ಲಿ ಟ್ರೆಂಡಿಂಗ್ ಸಂಗತಿಗಳು.
ಇದನ್ನೂ ಓದಿ:2023ರ ಗೂಗಲ್ ಸರ್ಚ್ನಲ್ಲಿ ‘ಜವಾನ್’ ಚಿತ್ರಕ್ಕೆ ನಂ.1 ಸ್ಥಾನ; ಕನ್ನಡದ ಸಿನಿಮಾಗಳು ಇಲ್ಲವೇ?
Google ನ “Year in Search” ಆರ್ಕೈವ್‌ನಲ್ಲಿ ದೇಶ-ನಿರ್ದಿಷ್ಟ ಪಟ್ಟಿಗಳು ಮತ್ತು ಹಿಂದಿನ ವರ್ಷಗಳಿಂದ ಟ್ರೆಂಡ್‌ಗಳು ಸೇರಿದಂತೆ ಹೆಚ್ಚಿನ ಡೇಟಾವನ್ನು ನೀವು ಕಾಣಬಹುದು. ಕಂಪನಿಯು ತನ್ನ 2023 ರ ಹುಡುಕಾಟ ಫಲಿತಾಂಶಗಳನ್ನು ಈ ವರ್ಷದ ಜನವರಿ 1 ರಿಂದ ನವೆಂಬರ್ 27 ರವರೆಗೆ ಸಂಗ್ರಹಿಸಿದೆ ಎಂದು ಹೇಳುತ್ತದೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ