ಗಾಜಾ ಕದನ ವಿರಾಮ: UNGA ಕರಡು ನಿರ್ಣಯದ ಪರವಾಗಿ ಮತ ಹಾಕಿದ ಭಾರತ

ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ತಕ್ಷಣದ ಮಾನವೀಯ ಕದನ ವಿರಾಮ ಮತ್ತು ಎಲ್ಲಾ ಒತ್ತೆಯಾಳುಗಳನ್ನು ಬೇಷರತ್ತಾಗಿ ಬಿಡುಗಡೆ ಮಾಡುವಂತೆ ಒತ್ತಾಯಿಸುವ ನಿರ್ಣಯವು 153 ಪರ ಮತಗಳೊಂದಿಗೆ ಅಂಗೀಕರಿಸಲ್ಪಟ್ಟಿತು. ಆದರೆ 23 ರಾಷ್ಟ್ರಗಳು ಗೈರುಹಾಜರಿದ್ದು, 10 ದೇಶಗಳು ವಿರುದ್ಧ ಮತ ಚಲಾಯಿಸಿದರು.

ಗಾಜಾ ಕದನ ವಿರಾಮ: UNGA ಕರಡು ನಿರ್ಣಯದ ಪರವಾಗಿ ಮತ ಹಾಕಿದ ಭಾರತ
ವಿಶ್ವಸಂಸ್ಥೆಯ ಸಾಮಾನ್ಯ ಸಭೆ
Follow us
ರಶ್ಮಿ ಕಲ್ಲಕಟ್ಟ
|

Updated on: Dec 13, 2023 | 8:51 AM

ದೆಹಲಿ ಡಿಸೆಂಬರ್  13: ಈಗ ನಡೆಯುತ್ತಿರುವ ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ (Israel-Hamas conflict) ತಕ್ಷಣದ ಮಾನವೀಯ ಕದನ ವಿರಾಮ ಮತ್ತು ಎಲ್ಲಾ ಒತ್ತೆಯಾಳುಗಳನ್ನು ಬೇಷರತ್ತಾಗಿ ಬಿಡುಗಡೆ ಮಾಡುವಂತೆ ಒತ್ತಾಯಿಸುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (United Nations General Assembly) ಭಾರತವು ಮಂಗಳವಾರ ಕರಡು ನಿರ್ಣಯದ(draft resolution) ಪರವಾಗಿ ಮತ ಚಲಾಯಿಸಿದೆ. 193 ಸದಸ್ಯರ ಯುಎನ್ ಜನರಲ್ ಅಸೆಂಬ್ಲಿ ಮಂಗಳವಾರ ಇಲ್ಲಿ ನಡೆದ ತುರ್ತು ವಿಶೇಷ ಅಧಿವೇಶನದಲ್ಲಿ ಈಜಿಪ್ಟ್ ಮಂಡಿಸಿದ ಕರಡು ನಿರ್ಣಯವನ್ನು ಅಂಗೀಕರಿಸಿತು. ನಿರ್ಣಯವು 153 ಪರ ಮತಗಳೊಂದಿಗೆ ಅಂಗೀಕರಿಸಲ್ಪಟ್ಟಿತು. ಆದರೆ 23 ರಾಷ್ಟ್ರಗಳು ಗೈರುಹಾಜರಿದ್ದು, 10 ದೇಶಗಳು ವಿರುದ್ಧ ಮತ ಚಲಾಯಿಸಿದರು.

ಅಲ್ಜೀರಿಯಾ, ಬಹ್ರೇನ್, ಇರಾಕ್, ಕುವೈತ್, ಓಮನ್, ಕತಾರ್, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಪ್ಯಾಲೆಸ್ಟೈನ್ ಪ್ರಾಯೋಜಿಸಿದ ನಿರ್ಣಯವು ಗಾಜಾದಲ್ಲಿ ತಕ್ಷಣದ ಮಾನವೀಯ ಕದನ ವಿರಾಮವನ್ನು ಒತ್ತಾಯಿಸಿದ್ದು, ಎಲ್ಲಾ ಪಕ್ಷಗಳು ವಿಶೇಷವಾಗಿ ನಾಗರಿಕರ ರಕ್ಷಣೆಗೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಕಾನೂನಿನಡಿಯಲ್ಲಿ ತಮ್ಮ ಬಾಧ್ಯತೆಗಳನ್ನು ಅನುಸರಿಸಬೇಕು ಎಂಬ ತನ್ನ ಬೇಡಿಕೆಯನ್ನು ಪುನರುಚ್ಚರಿಸಿತು.

ಈ ನಿರ್ಣಯ ಎಲ್ಲಾ ಒತ್ತೆಯಾಳುಗಳ ತಕ್ಷಣ ಮತ್ತು ಬೇಷರತ್ತಾದ ಬಿಡುಗಡೆ, ಜೊತೆಗೆ ಮಾನವೀಯ ಪ್ರವೇಶವನ್ನು ಖಾತ್ರಿಪಡಿಸುವುದನ್ನು ಒತ್ತಾಯಿಸಿದೆ.

“ಜನರಲ್ ಅಸೆಂಬ್ಲಿಯಿಂದ ಕಳುಹಿಸಲಾದ ಪ್ರಬಲ ಸಂದೇಶದ ದೃಷ್ಟಿಯಿಂದ ಇದು ಐತಿಹಾಸಿಕ ದಿನವಾಗಿದೆ” ಎಂದು ವಿಶ್ವಸಂಸ್ಥೆಯ ಪ್ಯಾಲೆಸ್ತೀನ್ ರಾಯಭಾರಿ ರಿಯಾದ್ ಮನ್ಸೂರ್ ಹೇಳಿರುವುದಾಗಿ ಸುದ್ದಿ ಸಂಸ್ಥೆ ಎಎಫ್‌ಪಿ ವರದಿ ಮಾಡಿದೆ

ಕರಡು ನಿರ್ಣಯವು ಹಮಾಸ್ ಅನ್ನು ಉಲ್ಲೇಖಿಸಿಲ್ಲ. ಇಸ್ರೇಲ್‌ನ ಪ್ರಬಲ ಮಿತ್ರರಾಷ್ಟ್ರವಾದ ಅಮೆರಿಕ, ಪ್ಯಾರಾಗ್ರಾಫ್‌ನೊಂದಿಗೆ ಕರಡುಗೆ ತಿದ್ದುಪಡಿಯನ್ನು ಪ್ರಸ್ತಾಪಿಸಿತು. 7 ಅಕ್ಟೋಬರ್ 2023 ರಿಂದ ಇಸ್ರೇಲ್‌ನಲ್ಲಿ ನಡೆದ ಹಮಾಸ್‌ನ ಭೀಕರ ಭಯೋತ್ಪಾದಕ ದಾಳಿ ಮತ್ತು ಒತ್ತೆಯಾಳುಗಳನ್ನಾಗಿಸುವ ಕ್ರಮವವನ್ನು ನಿಸ್ಸಂದಿಗ್ಧವಾಗಿ ತಿರಸ್ಕರಿಸುತ್ತದೆ ಮತ್ತು ಖಂಡಿಸುತ್ತದೆ ಎಂಬ ಈ ತಿದ್ದುಪಡಿಯ ಪರವಾಗಿ ಭಾರತ ಮತ ಹಾಕಿದೆ.

ಅಕ್ಟೋಬರ್‌ನಲ್ಲಿ ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ತಕ್ಷಣದ ಮಾನವೀಯ ಒಪ್ಪಂದಕ್ಕೆ ಕರೆ ನೀಡಿದ ಇದೇ ರೀತಿಯ ನಿರ್ಣಯಕ್ಕೆ ಭಾರತ ದೂರವಿತ್ತು. ಗೈರುಹಾಜರಾಗಿದ್ದರೂ, ಗಾಜಾ ಪಟ್ಟಿಯಲ್ಲಿ ಅಡೆತಡೆಯಿಲ್ಲದ ಮಾನವೀಯ ಪ್ರವೇಶಕ್ಕಾಗಿ ಭಾರತ ಕರೆ ನೀಡಿತ್ತು.

ಯುಎನ್ ಸೆಕ್ಯುರಿಟಿ ಕೌನ್ಸಿಲ್‌ನಲ್ಲಿ ಇದೇ ರೀತಿಯ ನಿರ್ಣಯವನ್ನು ಯುಎಸ್ ವೀಟೋ ಮಾಡಿದ ಕೆಲವು ದಿನಗಳ ನಂತರ ನಿನ್ನೆ ಯುಎನ್ ಜನರಲ್ ಅಸೆಂಬ್ಲಿ ಮತದಾನವು ಬಂದಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ ಮಂಡಿಸಿದ UNSC ನಿರ್ಣಯಕ 90 ಸದಸ್ಯ ರಾಷ್ಟ್ರಗಳ ಬೆಂಬಲದೊಂದಿಗೆ 13 ಅನುಕೂಲಕರ ಮತಗಳನ್ನು ಪಡೆಯಿತು, ಆದರೆ ಯುನೈಟೆಡ್ ಕಿಂಗ್‌ಡಮ್ ದೂರವಿತ್ತು.

ಇದನ್ನೂ ಓದಿಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷ; ತ್ವರಿತ ಮತ್ತು ಸಶಕ್ತ ನಿರ್ಣಯ ಬೆಂಬಲಿಸುವುದಾಗಿ ಹೇಳಿದ ಭಾರತ

ಅಕ್ಟೋಬರ್ 7 ರಂದು ಹಮಾಸ್ ದಾಳಿ ಪ್ರಾರಂಭಿಸಿದ ನಂತರ 1,200 ಕ್ಕೂ ಹೆಚ್ಚು ಇಸ್ರೇಲಿಗಳು, ಹೆಚ್ಚಾಗಿ ನಾಗರಿಕರು ಕೊಲ್ಲಲ್ಪಟ್ಟರು. ಪ್ರತೀಕಾರವಾಗಿ, ಇಸ್ರೇಲ್ ಗಾಜಾಪಟ್ಟಿಯಲ್ಲಿ ವೈಮಾನಿಕ ದಾಳಿನಡೆಸಿ ಹೊಡೆದು 18,000 ಕ್ಕೂ ಹೆಚ್ಚು ಜನರನ್ನು ಕೊಂದಿತು, ಅವರಲ್ಲಿ ಶೇಕಡಾ 70 ರಷ್ಟು ಜನರು ಮಹಿಳೆಯರು ಮತ್ತು ಮಕ್ಕಳು ಎಂದು ಹೇಳಲಾಗುತ್ತದೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್